ಭಾರತದಿಂದ ಇಡೀ ಚೀನ ನಾಶಗೈವ ಅಣ್ವಸ್ತ್ರ ಕ್ಷಿಪಣಿ : ಅಮೆರಿಕ ಪರಿಣತರು
Team Udayavani, Jul 13, 2017, 3:25 PM IST
ಹೊಸದಿಲ್ಲಿ : ದಕ್ಷಿಣ ಭಾರತದಲ್ಲಿನ ತನ್ನ ನೆಲೆಗಳಿಂದ ಚೀನದಲ್ಲಿನ ಎಲ್ಲ ಗುರಿಗಳನ್ನು ಧ್ವಂಸ ಮಾಡುವ ಅತ್ಯಂತ ವಿನಾಶಕಾರಿ ಅಣ್ವಸ್ತ್ರ ಕ್ಷಿಪಣಿಗಳನ್ನು ಭಾರತ ಈಗ ಅಭಿವೃದ್ದಿಪಡಿಸುತ್ತಿದೆ ಎಂದು ಅಮೆರಿಕದ ಇಬ್ಬರು ಉನ್ನತ ಅಣ್ವಸ್ಸ ತಜ್ಞರು ಹೇಳಿದ್ದಾರೆ.
ಭಾರತ ಅತ್ಯಂತ ವಿನಾಶಕಾರಿಯಾಗಬಲ್ಲ 150ರಿಂದ 200 ಅಣು ಸಿಡಿತಲೆಗಳನ್ನು ತಯಾರಿಸುವಷ್ಟು ಪ್ಲುಟೋನಿಯಂ ಅನ್ನು ತನ್ನ ಸಂಗ್ರಹದಲ್ಲಿ ಹೊಂದಿದೆ; ಈಗಾಗಲೇ ಬಹುತೇಕ ಅದು 120ರಿಂದ 130ರಷ್ಟು ಅಣುಸಿಡಿತಲೆಗಳನ್ನು ಉತ್ಪಾದಿಸಿರಬಹುದು ಎಂದು “ಆಫ್ಟರ್ ಮಿಡ್‌ನೈಟ್’ ಎಂಬ ಹೆಸರಿನ ವಿದ್ಯುನ್ಮಾನ ನಿಯತಕಾಲಿಕದ ಜುಲೈ-ಆಗಸ್ಟ್ ಸಂಚಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಈ ಅಮೆರಿಕನ್ ಪರಿಣತರು ಹೇಳಿದ್ದಾರೆ.
ಭಾರತ ಈ ವರೆಗೂ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ಥಾನವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ಅಣ್ವಸ್ತ್ರಗಳನ್ನು ಸಿದ್ಧಪಡಿಸುತ್ತಿತ್ತು. ಆದರೆ ಕಮ್ಯುನಿಸ್ಟ್ ದಿಗ್ಗಜ ದೇಶವಾಗಿರುವ ಚೀನದಿಂದ ತನಗೆ ಎದುರಾಗುವ ಸವಾಲುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಭಾರತ ತನ್ನ ಅಣ್ವಸ್ತ್ರಗಳನ್ನು ಆಧುನೀಕರಿಸುತ್ತಿರುವಂತೆ ತೋರಿ ಬರುತ್ತಿದೆ ಎಂದು ಹ್ಯಾನ್ಸ್ ಎಂ ಕ್ರಿಸ್ಟನ್‌ಸನ್ ಮತ್ತು ರಾಬರ್ಟ್ ಎಸ್ ನೋರಿಸ್ ಅವರು “ದಿ ಇಂಡಿಯನ್ ನ್ಯೂಕ್ಲಿಯರ್ ಫೋರ್‌ಸಸ್ 2017′ ಎಂಬ ಶೀರ್ಷಿಕೆಯ ಲೇಖನದಲ್ಲಿ ಬರೆದಿದ್ದಾರೆ.
ಚೀನದೊಂದಿಗಿನ ಭವಿಷ್ಯದ ತನ್ನ ವ್ಯೂಹಾತ್ಮಕ ಸಂಬಂಧಗಳಿಗೆ ಭಾರತ ಹೆಚ್ಚು ಒತ್ತು ನೀಡುತ್ತಿರುವುದರಿಂದ ತನ್ನ ಅಣ್ವಸ್ತ್ರಗಳ ಸಂಗ್ರಹವನ್ನು ಆಧುನೀಕರಿಸುವ ದಿಶೆಯಲ್ಲಿ ಅದು ಅತ್ಯಂತ ಕ್ರಿಯಾಶೀಲವಾಗಿದೆ ಎಂದು ಅವರು ಬರೆದಿದ್ದಾರೆ.
ಭಾರತವು ಈಗಾಗಲೇ ಶಸ್ತ್ರಾಸ್ತ್ರ ದರ್ಜೆಯ 600 ಕಿಲೋಗ್ರಾಂ ಪ್ಲುಟೋನಿಯಂ ಅನ್ನು ಬಹುತೇಕ ಉತ್ಪಾದಿಸಿದೆ. ಇದು 150 – 200 ಅಣ್ವಸ್ತ್ರ ಸಿಡಿ ತಲೆಗಳ ನಿರ್ಮಾಣಕ್ಕೆ ಸಾಕಾಗುತ್ತದೆ. ಹಾಗಿದ್ದರೂ ಭಾರತದ ತನ್ನ ಸಂಗ್ರಹದಲ್ಲಿರುವ ಪ್ಲುಟೋನಿಯಂ ನ ಪೂರ್ಣ ಪ್ರಮಾಣವನ್ನು ಶಸ್ತ್ರಾಸ್ತ್ರ ದರ್ಜೆಗೆ ಪರಿವರ್ತಿಸಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ.
ಕ್ರಿಸ್ಟನ್‌ಸನ್ ಮತ್ತು ನೋರಿಸ್ ಅವರ ಪ್ರಕಾರ ಅಗ್ನಿ 1 ಮತ್ತು ಸುಧಾರಿತ ಅಗ್ನಿ 2 ಎರಡು ಹಂತಗಳ ಅಣ್ವಸ್ತ್ರ ಕ್ಷಿಪಣಿಗಳು ಪಶ್ಚಿಮ, ಮಧ್ಯ ಹಾಗೂ ದಕ್ಷಿಣ ಚೀನದ ಎಲ್ಲ ಗುರಿಗಳನ್ನು ಭೆದಿಸಲು ಅಗತ್ಯವಿರುವ 2,000 ಕಿ.ಮೀ.ಗಳನ್ನು ಕ್ರಮಿಸಬಲ್ಲ ದೂರ ವ್ಯಾಪ್ತಿ ಸಾಮರ್ಥ್ಯವನ್ನು ಹೊಂದಿವೆ. ಇದನ್ನೂ ಮೀರಿಸುವ ಅಗ್ನಿ 4 ಅಣ್ವಸ್ತ್ರ ಕ್ಷಿಪಣಿಯನ್ನು ಈಶಾನ್ಯ ಭಾರತದಿಂದ ಉಡಾಯಿಸಿದ್ದೇ ಆದಲ್ಲಿ ಅದು ಬೀಜಿಂಗ್ ಮತ್ತು ಶಾಂಘೈ ಸಹಿತ ಇಡಿಯ ಚೀನದ ಎಲ್ಲ ಗುರಿಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
ED: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಫ್ಲ್ಯಾಟ್ ಇ.ಡಿ.ವಶಕ್ಕೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.