14 ಒಪ್ಪಂದಕ್ಕೆ ಭಾರತ-ಫ್ರಾನ್ಸ್ ಸಹಿ
Team Udayavani, Mar 11, 2018, 6:00 AM IST
ಹೊಸದಿಲ್ಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಸಂಬಂಧದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ ಶನಿವಾರ ಉಭಯ ರಾಷ್ಟ್ರಗಳು ರಕ್ಷಣೆ, ಭದ್ರತೆ, ಪರಮಾಣು ಶಕ್ತಿ ಸೇರಿದಂತೆ 14 ಒಪ್ಪಂದಗಳಿಗೆ ಸಹಿ ಹಾಕಿವೆ.
4 ದಿನಗಳ ಭಾರತ ಪ್ರವಾಸ ಆರಂಭಿಸಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆಯ ಬಳಿಕ, ಅವರ ಸಮ್ಮುಖದಲ್ಲೇ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ ಸಹಕಾರ, ರಹಸ್ಯ ಅಥವಾ ಸಂರಕ್ಷಿತ ದಾಖಲೆಗಳಿಗೆ ಭದ್ರತೆ ನೀಡುವ ಒಪ್ಪಂದವೂ ಇವುಗಳಲ್ಲಿ ಸೇರಿದೆ. ಫ್ರಾನ್ಸ್‌ನಿಂದ ತರಿಸಲಾಗುತ್ತಿರುವ ರಫೇಲ್ ಯುದ್ಧವಿಮಾನಗಳ ಕುರಿತು ವಿವಾದ ಎದ್ದಿರುವಂತೆಯೇ ಇಂತಹುದೊಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ರಕ್ಷಣಾ ಸಹಕಾರವು ಅತ್ಯಂತ ಬಲಿಷ್ಠವಾಗಿದ್ದು, ಹೆಚ್ಚು ವಿಶ್ವಾಸಾರ್ಹ ರಕ್ಷಣಾ ಪಾಲುದಾರ ರಾಷ್ಟ್ರಗಳ ಪೈಕಿ ಫ್ರಾನ್ಸ್ ಕೂಡ ಒಂದು ಎಂದು ಹೇಳಿದ್ದಾರೆ. ಸಶಸ್ತ್ರಪಡೆಗಳ ನಡುವಿನ ಸಹಕಾರವು ರಕ್ಷಣಾ ಸಂಬಂಧದಲ್ಲಿ ಸುವರ್ಣ ಹೆಜ್ಜೆ ಎಂದೂ ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮ್ಯಾಕ್ರನ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಎರಡೂ ದೇಶಗಳು ಬದ್ಧವಾಗಿರಲಿದೆ ಎಂದಿದ್ದಾರೆ. ಜತೆಗೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲೂ ಉಭಯ ದೇಶಗಳು ಜತೆಯಾಗಿರಲಿವೆ ಎಂದಿದ್ದಾರೆ ಮ್ಯಾಕ್ರನ್.
ಫ್ರೆಂಡ್ ಕ್ಲಬ್ ಆರಂಭ: ಪ್ರಧಾನಿ ಮೋದಿಯವರ ಕ್ಷೇತ್ರವಾದ ವಾರಾಣಸಿಯ ಅಸ್ಸಿ ಘಾಟ್‌ನಲ್ಲಿ “ಇಂಡೋ ಫ್ರೆಂಚ್ ಫ್ರೆಂಡ್ಸ್ ಕ್ಲಬ್’ ಎಂಬ ನೂತನ ಸಂಸ್ಥೆ ಆರಂಭಿಸಲಾಗಿದೆ. ಮ್ಯಾಕ್ರನ್ ಹಾಗೂ ಪ್ರಧಾನಿ ಮೋದಿ ಸದ್ಯದಲ್ಲೇ ವಾರಾಣಸಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರು ಮತ್ತು ಫ್ರಾನ್ಸ್ ನಾಗರಿಕರು ಈ ಸಂಸ್ಥೆ ಸ್ಥಾಪಿಸಿದ್ದಾರೆ.
ವಾರಣಾಸಿಯಲ್ಲಿ ಅಧ್ಯಾತ್ಮ, ಸಂಸ್ಕೃತಿ ಅಧ್ಯಯನಕ್ಕಾಗಿ ಫ್ರಾನ್ಸ್ ನಾಗರಿಕರು ಅನೇಕ ವರ್ಷಗಳಿಂದ ನೆಲೆಸಿದ್ದಾರೆ. ಹಾಗೆ ಬರುವ ಫ್ರಾನ್ಸ್ ನಾಗರಿಕರು ಹಾಗೂ ಭಾರತೀಯರ ನಡುವಿನ ಸಂಪರ್ಕ ಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ಲಬ್ ಆರಂಭಿಸಲಾಗಿದೆ.
ವಾಯುಪಡೆಗೆ ರಫೇಲ್? ಏತನ್ಮಧ್ಯೆ, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ, ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಫೆ. 26ರಂದು ಪತ್ರ ಬರೆದಿದ್ದು, ಅದರಲ್ಲಿ ಭಾರತೀಯ ವಾಯುಪಡೆಗೆ ಈಗಾಗಲೇ ಫ್ರಾನ್ಸ್‌ನಿಂದ ಬರಬೇಕಿರುವ ರಫೇಲ್ ಯುದ್ಧ ವಿಮಾನಗಳನ್ನು ಹೊರತುಪಡಿಸಿ, ಹೆಚ್ಚುವರಿಯಾಗಿ 36 ಯುದ್ಧ ವಿಮಾನಗಳನ್ನು ಒದಗಿಸುವ ಬಗ್ಗೆ ಖಾತ್ರಿ ನೀಡಿದ್ದಾರೆ. ಈ ವಿಚಾರವನ್ನು, ಶನಿವಾರ, ಮೋದಿ-ಮ್ಯಾಕ್ರನ್ ಅವರ ಜಂಟಿ ಸುದ್ದಿಗೋಷ್ಠಿ ಯಲ್ಲಿ ಪ್ರಕಟಿಸಲಾಗಿಲ್ಲ. ಆದರೂ, ಈ ಹೊಸ ಒಪ್ಪಂದದ ವಿಚಾರದ ಬಗ್ಗೆ ಫ್ಲಾರೆನ್ಸ್ ಪತ್ರದಲ್ಲಿ ವಿವರಿಸಲಾಗಿದೆ ಎಂದು ಎನ್‌ಡಿಟಿವಿ ಹೇಳಿದೆ. .
ಸ್ಪೈಸ್‌ಜೆಟ್ ಭಾರೀ ಮೊತ್ತದ ಡೀಲ್
ವಿಮಾನಯಾನ ಕ್ಷೇತ್ರದಲ್ಲೇ ಅತಿ ದೊಡ್ಡ ಒಪ್ಪಂದವೊಂದನ್ನು ಸ್ಪೈಸ್ ಜೆಟ್ ಶನಿವಾರ ಫ್ರಾನ್ಸ್‌ನ ಸ್ಯಾಫ್ರಾನ್ ಗ್ರೂಪ್‌ನೊಂದಿಗೆ ಮಾಡಿ ಕೊಂಡಿದೆ. ಸಿಎಫ್ಎಂ ಏರ್‌ಕ್ರಾಫ್ಟ್ ಎಂಜಿನ್‌ಗೆ ಸಂಬಂಧಿಸಿದ ಒಪ್ಪಂದ ಇದಾಗಿದ್ದು, ಈ ಡೀಲ್‌ನ ಮೊತ್ತವು 80 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಎಂದು ಕಂಪನಿ ತಿಳಿಸಿದೆ. 155 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಲೀಪ್-1ಬಿ ಎಂಜಿನ್ ಖರೀದಿಸುವ ಒಪ್ಪಂದ ಇದಾಗಿದೆ.
ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಸಹಕಾರ ಸಾಧಿಸುವ ನಿಟ್ಟಿನಲ್ಲಿ ಭಾರತ-ಫ್ರಾನ್ಸ್ ಹೆಜ್ಜೆಯಿಟ್ಟಿದೆ. ಕೆಲ ಪ್ರಮುಖ ಪ್ರದೇಶಗಳಲ್ಲಿ ನೌಕೆಗಳ ಪತ್ತೆ, ಗುರುತಿಸುವಿಕೆ ಮತ್ತು ನಿಗಾಗೆ ಸಂಬಂಧಿಸಿ ಇಸ್ರೋ ಮತ್ತು ಸಿಎನ್‌ಇಎಸ್ ಒಪ್ಪಂದ ಮಾಡಿಕೊಂಡಿವೆ. ಜತೆಗೆ, ಜೈತಾಪುರ ಅಣುಶಕ್ತಿ ಸ್ಥಾವರದ ಕೆಲಸ ತ್ವರಿತಗೊಳಿಸುವ ಕುರಿತೂ ಮಾತುಕತೆ ನಡೆಸಲಾಗಿದೆ. ಇದೇ ವೇಳೆ, ಅವಶ್ಯಕ ಸಂದರ್ಭಗಳಲ್ಲಿ ಪರಸ್ಪರರ ಸೇನಾ ನೆಲೆ ಬಳಸಿಕೊಳ್ಳುವ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಸ್ತರಣಾ ಮನೋಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವ ಪಡೆದಿದೆ.
ಮೋದಿ ಅಪ್ಪುಗೆಯ ಸ್ವಾಗತ
ಶುಕ್ರವಾರ ರಾತ್ರಿ, ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಹೊಸದಿಲ್ಲಿಗೆ ವಿಮಾನದಲ್ಲಿ ಬಂದಿಳಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಖುದ್ದು ಪ್ರಧಾನಿ ಮೋದಿಯವರೇ ಆತ್ಮೀಯವಾಗಿ ಸ್ವಾಗತಿಸಿದರು. ಎಂದಿನಂತೆ, ಮೋದಿಯವರ ಅಪ್ಪುಗೆಯ ಸ್ವಾಗತ, ಮ್ಯಾಕ್ರನ್ ಅವರನ್ನು ಖುಷಿಪಡಿಸಿತು. ಆನಂತರ, ಟ್ವಿಟರ್‌ನಲ್ಲಿಯೂ ಮ್ಯಾಕ್ರನ್ ಅವರಿಗೆ ಸ್ವಾಗತ ಕೋರಿದ ಮೋದಿ, ಮ್ಯಾಕ್ರನ್ ಭೇಟಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎಂದು ಬಣ್ಣಿಸಿದರು. ಇತ್ತೀಚೆಗಷ್ಟೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಭೇಟಿ ವೇಳೆ ಪ್ರಧಾನಿ ಮೋದಿ ಖುದ್ದು ಸ್ವಾಗತಿಸಿಲ್ಲ ಎಂಬ ವಿಚಾರ ಚರ್ಚೆಗೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್‌ಪೋಲ್’
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ ಕೇಸ್
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.