![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Apr 11, 2022, 6:55 AM IST
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ (ಇಸ್ರೋ) ಸೇರಿದ 217 ಯಂತ್ರಗಳು ಹಾಗೂ ಯಂತ್ರಗಳ ಅವಶೇಷಗಳು ಅಂತರಿಕ್ಷದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಕಟಿಸಿದ “ಆರ್ಬಿಟಲ್ ಡೆಬ್ರಿಸ್ ಕ್ವಾರ್ಟರ್ಲಿ ನ್ಯೂಸ್’ ನಿಯತಕಾಲಿಕೆಯ ಮಾರ್ಚ್ ತಿಂಗಳ ಆವೃತ್ತಿಯಲ್ಲಿ ಭಾರತದ ಇಸ್ರೋಗೆ ಸೇರಿದ ಸೇವೆಯಲ್ಲಿರುವ ಅಥವಾ ಸೇವೆಯಲ್ಲಿರದ ಒಟ್ಟು 103 ಉಪಗ್ರಗಳು ಭೂಮಂಡಲವನ್ನು ಸುತ್ತುತ್ತಿವೆ. ಜೊತೆಗೆ, ಉರಿದು ಹೋದ ರಾಕೆಟ್‌ಗಳ ಬಿಡಿಭಾಗಗಳು ಸೇರಿ 114 ಬಾಹ್ಯಾಕಾಶ ಅವಶೇಷಗಳು ಭೂಮಿಯನ್ನು ಗಿರಕಿ ಹೊಡೆಯುತ್ತಿವೆ.
ಅಲ್ಲಿಗೆ, ಇಸ್ರೋಕ್ಕೆ ಸೇರಿದ 217 ಬಾಹ್ಯಾಕಾಶ ಪರಿಕರಗಳು ಭೂಮಿಯನ್ನು ಸುತ್ತುತ್ತಿರುವುದಾಗಿ ನಾಸಾ ನಿಯತಕಾಲಿಕೆಯಲ್ಲಿ ತಿಳಿಸಲಾಗಿದ್ದು, ತನ್ನ ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡುವಲ್ಲಿ ಇಸ್ರೋ ನಿರತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಂಕಿ-ಅಂಶ:
217-ಭೂಮಂಡಲ ಸುತ್ತುತ್ತಿರುವ ಇಸ್ರೋ ಪರಿಕರಗಳ ಸಂಖ್ಯೆ
103-ಬಳಕೆಯಲ್ಲಿರುವ, ಬಳಕೆಯಲ್ಲಿರದ ಇಸ್ರೋ ಉಪಗ್ರಹಗಳು
114-ರಾಕೆಟ್ ಅವಶೇಷ ಸೇರಿ ಇನ್ನಿತರ ಯಾಂತ್ರಿಕ ಅವಶೇಷಗಳು
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.