ಪೆಟ್ರೋಲ್ನಲ್ಲಿ 10% ಎಥೆನಾಲ್ ಮಿಶ್ರಣ :ಕ್ರಾಂತಿಕಾರಿ ಬೆಳವಣಿಗೆ ಎಂದ ಪೆಟ್ರೋಲಿಯಂ ಸಚಿವ
ಇದೊಂದು ಪರಿವರ್ತಕ, 5 ತಿಂಗಳ ಮೊದಲೇ ಗುರಿ ತಲುಪಿದ ಭಾರತ
Team Udayavani, Jun 5, 2022, 1:16 PM IST
ನವದೆಹಲಿ : ನಿಗದಿತ ಅವಧಿಗಿಂತ ಐದು ತಿಂಗಳ ಮುಂಚಿತವಾಗಿಯೇ ಭಾರತವು ಪೆಟ್ರೋಲ್ನಲ್ಲಿ 10% ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಇದೊಂದು ಪರಿವರ್ತಕ ಮತ್ತು ಕ್ರಾಂತಿಕಾರಿ ಬೆಳವಣಿಗೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಇಂದು ಭಾರತವು ಪೆಟ್ರೋಲ್ನಲ್ಲಿ 10% ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದೆ.ನಿಗದಿತ ಅವಧಿಗಿಂತ 5 ತಿಂಗಳ ಮೊದಲೇ ಭಾರತ ಈ ಗುರಿಯನ್ನು ತಲುಪಿದೆ ಎಂದು ವಿಜ್ಞಾನ ಭವನದಲ್ಲಿ ಇಶಾ ಫೌಂಡೇಶನ್ ಆಯೋಜಿಸಿದ್ದ ‘ಮಣ್ಣು ಉಳಿಸಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
2014 ರಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇಕಡಾ ಎರಡರಿಂದ ಶೇಕಡಾ 10 ಕ್ಕೆ ಏರಿಸಿದ್ದು, ಇಂಗಾಲದ ಹೊರಸೂಸುವಿಕೆಯನ್ನು 27 ಲಕ್ಷ ಟನ್ಗಳಷ್ಟು ಕಡಿಮೆ ಮಾಡಿದೆ ಮತ್ತು 41,000 ಕೋಟಿ ಫಾರೆಕ್ಸ್ ಮೀಸಲು ಉಳಿಸಿದೆ. ಇದರಿಂದ ರೈತರಿಗೆ 40,000 ಕೋಟಿ ಆದಾಯ ಬಂದಿದೆ ಎಂದರು.
ತಮ್ಮ ಭಾಷಣದಲ್ಲಿ, ಭಾರತವು ತನ್ನ ಸ್ಥಾಪಿತ ವಿದ್ಯುತ್ ಉತ್ಪಾದನೆಯ 40 ಪ್ರತಿಶತವನ್ನು ಪಳೆಯುಳಿಕೆ ರಹಿತ ಇಂಧನ ಆಧಾರಿತ ಮೂಲಗಳಿಂದ ಗಡುವಿನ ಒಂಬತ್ತು ವರ್ಷಗಳ ಮೊದಲು ಹೊಂದುವ ಗುರಿಯನ್ನು ಸಾಧಿಸಿದೆ ಎಂದು ಪ್ರಧಾನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.