ಇದೇ ಮೊದಲ ಬಾರಿಗೆ ಪುರುಷರನ್ನು ಹಿಂದಿಕ್ಕಿದ ಸ್ತ್ರೀಯರು
Team Udayavani, Nov 26, 2021, 8:30 AM IST
ಹೊಸದಿಲ್ಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂದು ಸರಕಾರಿ ಅಂಕಿಅಂಶಗಳು ಮಾಹಿತಿ ನೀಡಿವೆ.
ಮಾತ್ರವಲ್ಲದೆ ದೇಶದಲ್ಲಿ ಶಿಶು ಜನನ ದರವೂ ಇಳಿಕೆಯಾಗಿದೆ ಎಂಬ ಅಂಶ ಬಹಿರಂಗವಾಗಿದೆ. ಆರೋಗ್ಯ ಇಲಾಖೆಯು ಗುರುವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಈಗ ಪ್ರತೀ ಒಂದು ಸಾವಿರ ಪುರುಷರಿಗೆ 1,020 ಮಹಿಳೆ ಯರಿದ್ದಾರೆ. 1876ರಲ್ಲಿ ನಡೆದ ಮೊದಲ ರಾಷ್ಟ್ರೀಯ ಜನಗಣತಿಯ ಬಳಿಕ ಸರಕಾರಿ ಅಂಕಿಅಂಶವೊಂದು ಮಹಿಳೆಯರ ಸಂಖ್ಯೆ ಹೆಚ್ಚಿರುವುದನ್ನು ದಾಖಲಿಸಿರುವುದು ಇದೇ ಪ್ರಥಮ.
ಲಿಂಗಾನುಪಾತದಲ್ಲಿ ಆಗಿರುವ ಈ ಬದಲಾವಣೆ ಧನಾತ್ಮಕವಾಗಿದೆ ಮತ್ತು ಸರಿಯಾದ ದಿಕ್ಕಿನಲ್ಲಿದೆ. ಆದರೆ ಲಿಂಗ ಸಮಾನತೆಯ ವಿಚಾರದಲ್ಲಿ ಸಾಧಿಸಬೇಕಾದದ್ದು ಇನ್ನೂ ಸಾಕಷ್ಟಿದೆ ಎಂದು ಭಾರತೀಯ ಜನಸಂಖ್ಯಾ ಪ್ರತಿಷ್ಠಾನದ ಆರೋಗ್ಯ ವಿಜ್ಞಾನಿ ಸಂಘಮಿತ್ರ ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.