ಭಾರತ ಹಿಂದೂ ದೇಶ; ಮುಸ್ಲಿಮರಿಂದಾಗಿ ಸಮಸ್ಯೆ: ಬಿಜೆಪಿ ನಾಯಕ
Team Udayavani, Jan 2, 2018, 11:42 AM IST
ಲಕ್ನೋ : ”ಭಾರತ ಹಿಂದೂ ದೇಶ, ಹಿಂದೂ ಧರ್ಮವನ್ನು ಅನುಸರಿಸುವವರಿಗೆ ಮಾತ್ರವೇ ಇರುವ ದೇಶ” ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕರೋರ್ವರು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
”ಭಾರತದ ಹೆಸರು ಹಿಂದುಸ್ಥಾನ; ಹಾಗಾಗಿ ಇದು ಹಿಂದುಗಳ ದೇಶ ಎನ್ನುವುದು ಸ್ಪಷ್ಟವಿದೆ” ಎಂದು ಬಿಜೆಪಿ ಶಾಸಕ ವಿಕ್ರಮ್ ಸಾಯಿನಿ ಹೇಳಿದರು.
“ಇವತು ಪ್ರತಿಯೊಬ್ಬರು ತಮ್ಮ ಜಾತಿ ಏನೇ ಇರಲಿ – ಸರಕಾರದಿಂದ ಸಿಗುವ ಸವಲತ್ತುಗಳನ್ನು ಲಾಭಗಳನ್ನು ಪಡೆಯುತ್ತಿದ್ದಾರೆ’ ಎಂದು ಹೇಳಿದ ವಿಕ್ರಮ್ ಸಾಯಿನಿ, “ಈ ಹಿಂದೆ ಉದ್ದನೆಯ ಗಡ್ಡ ಬಿಟ್ಟವರಿಗೆ ಮಾತ್ರವೇ ದೊಡ್ಡ ಮೊತ್ತದ ಚೆಕ್ಕುಗಳು ಸರಕಾರದಿಂದ ಸಿಗುತ್ತಿದ್ದವು’ ಎಂದು ಹಿಂದಿನ ಸರಕಾರದ ಮೇಲೆ ದಾಳಿ ನಡೆಸುತ್ತಾ ಹೇಳಿದರು.
”ನಾನೊಬ್ಬ ಕಟ್ಟರ್ ಹಿಂದೂವಾದಿ” ಎಂದು ಬಿಜೆಪಿ ನಾಯಕ ವಿಕ್ರಂ ಸಾಯಿನಿ ಅವರು ಸೋಮವಾರ ಉತ್ತರ ಪ್ರದೇಶದ ಮುಜಫರನಗರದಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
“ಹಿಂದೆ ಕೆಲವು ಅದಕ್ಷ ಜನರು ಮುಸ್ಲಿಮರು ದೇಶ ಬಿಟ್ಟು ಹೋಗದಂತೆ ತಡೆದರು; ಅದರ ಪರಿಣಾಮವಾಗಿ ನಾವಿಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ; ಒಂದೊಮ್ಮೆ ಅವರು ಅಂದೇ ದೇಶ ಬಿಟ್ಟು ತೊಲಗಿದ್ದರೆ ಭರತ ಖಂಡದ ಎಲ್ಲ ಭೂಮಿ ನಮ್ಮದೇ ಆಗಿರುತ್ತಿತ್ತು’ ಎಂದು ಸಾಯಿನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.