ಶೀಘ್ರದಲ್ಲೇ ಬ್ರಿಟನ್‌ಗಿಂತ ಭಾರತ ಶ್ರೀಮಂತ
Team Udayavani, Jun 5, 2018, 6:00 AM IST
ನವದೆಹಲಿ: ಭಾರತ ಸದ್ಯ 185 ಲಕ್ಷ ಕೋಟಿ ರೂ. ಆರ್ಥಿಕತೆಯ ದೇಶವಾಗಿದ್ದು, ವಿಶ್ವದಲ್ಲೇ ಶ್ರೀಮಂತ ರಾಷ್ಟ್ರವಾಗಿದೆ. ಇನ್ನು ಕೇವಲ 60 ಲಕ್ಷ ಕೋಟಿ ರೂ. ವಿಸ್ತರಿಸಿದರೆ ಭಾರತ ಇಂಗ್ಲೆಂಡ್ ಮತ್ತು ಫ್ರಾನ್ಸ್ ಅನ್ನೂ ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿಯಲಿದೆ. ಸದ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳೆರಡೂ ಭಾರತಕ್ಕಿಂತ ಸ್ವಲ್ಪವೇ ಮುಂದಿವೆ ಎಂದು ಇತ್ತೀಚಿನ ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿಯಲ್ಲಿ ತಿಳಿದುಬಂದಿದೆ.
ಕಳೆದ ತ್ತೈಮಾಸಿಕದಲ್ಲಿ ಭಾರತ ಶೇ. 7.7ರ ಪ್ರಗತಿ ದಾಖಲಿಸಿದ್ದು, ಈ ವಿತ್ತ ವರ್ಷದಲ್ಲಿ ಸರಾಸರಿ ಶೇ. 7ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂಗ್ಲೆಂಡ್‌ನ ಜಿಡಿಪಿ ಬೆಳವಣಿಗೆ ಜನವರಿ-ಮಾರ್ಚ್ ತ್ತೈಮಾಸಿಕದಲ್ಲಿ ಶೇ. 0.1ರಷ್ಟಾಗಿದೆ. ಮೆರಿಲ್ ಲಿಂಚ್ ಜಾಗತಿಕ ಸಂಶೋಧನೆ ಮುನ್ಸೂಚನೆಯ ಪ್ರಕಾರ, ಈ ವರ್ಷವೇ ಭಾರತವು ಆರ್ಥಿಕತೆಯಲ್ಲಿ ಫ್ರಾನ್ಸ್ ಅನ್ನು ಹಿಂದಿಕ್ಕಲಿದೆ. 2019ರ ಅವಧಿಯಲ್ಲಿ ಇಂಗ್ಲೆಂಡ್ ಅನ್ನು ಹಿಂದಿಕ್ಕಲಿದೆ. ಇನ್ನೊಂದೆಡೆ ಮಾರ್ಗನ್ ಸ್ಟಾನ್ಲ ವರದಿಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಭಾರತ 400 ಲಕ್ಷ ಕೋಟಿ ರೂ. ದಾಟಲಿದ್ದು, ಜರ್ಮನಿ ಮತ್ತು ಜಪಾನನ್ನು ಹಿಂದಿಕ್ಕಲಿದೆ.
ಸರ್ಕಾರದ ಕ್ರಮದಿಂದಲೇ ಜಿಡಿಪಿ ಏರಿಕೆ
ಕಳೆದ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 7.7ರಷ್ಟು ಏರಿಕೆ ಕಂಡಿದ್ದರ ಹಿಂದೆ ಸರ್ಕಾರದ ಶ್ರಮವೇ ಹೆಚ್ಚಿದೆ ಎಂದು ಹೇಳಲಾಗಿದೆ. ಅಭಿವೃದ್ಧಿಯ ಅಂಕಿ ಅಂಶದ ಪ್ರಕಾರ ಸಾಮಾನ್ಯವಾಗಿ ಒಟ್ಟು ಮೌಲ್ಯ ವರ್ಧನೆ (ಜಿವಿಎ), ಜಿವಿಎ ಮೇಲೆ ಸರ್ಕಾರದ ವೆಚ್ಚ, ನಿರ್ಮಾಣ ಕ್ಷೇತ್ರ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ವಿತ್ತೀಯ ಕೊರ ತೆಯು ಪ್ರಮುಖ ಅಂಶವಾಗಿರುತ್ತದೆ. ಈ ಪೈಕಿ ಜಿವಿಎ ಖಾಸಗಿ ವಲಯದ ಅಭಿವೃದ್ಧಿಯನ್ನು ಸೂಚಿಸುತ್ತಿದ್ದು, ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಉತ್ಪಾದನೆ ಮತ್ತು ಕೃಷಿ ವಲಯ ಪ್ರಗತಿ ಕಂಡಿದ್ದರೂ, ರಫ್ತು ಮತ್ತು ಖಾಸಗಿ ವಲಯ ಕುಸಿದಿದೆ. ಹೀಗಾಗಿ ಸರ್ಕಾರದ ವೆಚ್ಚವೇ ಕಳೆದ ತ್ತೈಮಾಸಿಕದಲ್ಲಿ ಅಭಿವೃದ್ಧಿ ದರ ಏರಿಕೆಗೆ ಕಾರಣವಾಗಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.