ಉತ್ತರ ಪ್ರದೇಶ: ಅವಳಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ
Team Udayavani, Aug 24, 2022, 6:45 AM IST
ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್ ನೋಯ್ಡಾದಲ್ಲಿ ನಿರ್ಮಿಸಿದ ಅವಳಿ ವಸತಿ ಸಮುಚ್ಚಯವನ್ನು ಭಾನುವಾರ (ಆ.28) ಕೆಡವಿ ಹಾಕಲಾಗುತ್ತದೆ. ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಬೇಕಾಗಿರುವ ಸಿದ್ಧತೆಗಳೂ ಭರದಿಂದ ಸಾಗಿವೆ. ಅಪೆಕ್ಸ್ ಮತ್ತು ಸಿಯೇನ್ ಎಂಬ ಹೆಸರಿನ ವಸತಿ ಸಮುತ್ಛಯಗಳು ನವದೆಹಲಿಯಲ್ಲಿ ಇರುವ ಕುತುಬ್ ಮಿನಾರ್‌ಗಿಂತ ಎತ್ತರವಾಗಿವೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಎತ್ತರದ ಕಟ್ಟಡಗಳನ್ನು ಕೆಡವಿ ಹಾಕಲಾಗುತ್ತದೆ.
ಪ್ರಕರಣದ ಹಿನ್ನೋಟ
2014ರಲ್ಲಿ ಅಲಹಾಬಾದ್ ಹೈಕೋರ್ಟ್ ಸೂಪರ್‌ಟೆಕ್ ಕಂಪನಿ ನಿರ್ಮಿಸಿದ ಅವಳಿ ವಸತಿ ಸಮುಚ್ಚಯಗಳನ್ನು ಕೆಡವಿ ಹಾಕುವ ಬಗ್ಗೆ ಆದೇಶ ನೀಡಿತ್ತು. ಪರಿಸರ ಉದ್ದೇಶಕ್ಕಾಗಿ ಮೀಸಲಾಗಿ ಇರಿಸಲಾಗಿರುವ ಸ್ಥಳದಲ್ಲಿ ಅದನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ಕಳೆದ ವರ್ಷದ ಆ.31ರಂದು ಮೂರು ತಿಂಗಳ ಒಳಗಾಗಿ ಕಟ್ಟಡ ಕೆಡವಿ ಹಾಕುವ ಬಗ್ಗೆ ಆದೇಶ ಪ್ರಕಟಗೊಂಡಿತ್ತು. ವಿಳಂಬವಾದದ್ದಕ್ಕೆ ನೋಯ್ಡಾ ನಗರಾಭಿವೃದ್ಧಿ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು ಮತ್ತು ಆ.28ರ ದಿನ ನಿಗದಿ ಮಾಡಿತ್ತು.
ಅವಳಿ ಕಟ್ಟಡಗಳ ಬಗ್ಗೆ
103 ಮೀಟರ್- ಕಟ್ಟಡದ ಎತ್ತರ
957- ನಿರ್ಮಾಣಗೊಂಡಿರುವ ಫ್ಲಾಟ್‌ಗಳು
21- ಮಳಿಗೆಗಳು
32- ಅಪೆಕ್ಸ್‌ನಲ್ಲಿರುವ ಮಹಡಿಗಳು
29- ಸಿಯೇನ್‌ನಲ್ಲಿರುವ ಮಹಡಿಗಳು
7,50,000 ಚದರ ಅಡಿ- 2 ಕಟ್ಟಡಗಳು ಇರುವ ವ್ಯಾಪ್ತಿ
3,700 ಕೆಜಿ- ಸ್ಫೋಟಿಸಲು ಬೇಕಾಗುವ ಸ್ಫೋಟಕಗಳ ಪ್ರಮಾಣ
15 ದಿನ- ಅವುಗಳನ್ನು ಅಳವಡಿಸಲು ಬೇಕಾಗಿದ್ದ ದಿನಗಳು
10 ಸೆಕೆಂಡುಗಳು- ಕೆಡವಿ ಬೀಳಲು ಬೇಕಾಗಿರುವ ಅವಧಿ
ಆ.28, 2022- ಸ್ಫೋಟಿಸುವ ದಿನ
ಮಧ್ಯಾಹ್ನ 2.30 – ಸಮಯ
ಯಾರ ಉಸ್ತುವಾರಿ?
ಮುಂಬೈನ ಈಡಿಫಸ್ ಎಂಜಿನಿಯರಿಂಗ್ ಸಂಸ್ಥೆ ಕಟ್ಟಡವನ್ನು ಕೆಡವಿ ಹಾಕುವ ಹೊಣೆ ಹೊತ್ತುಕೊಂಡಿದೆ. ದಕ್ಷಿಣ ಆಫ್ರಿಕಾದ ಜೆಟ್ ಡೆಮಾಲಿಷನ್ ನೆರವು ಕೊಡಲಿದೆ. 5 ಸಾವಿರಕ್ಕೂ ಅಧಿಕ ಮಂದಿಯನ್ನು ಮುಂಚಿತವಾಗಿಯೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು.
ಕೆಡವಿ ಹಾಕಿದ ಬಳಿಕ
30,000 ಟನ್- ಸಿಗಬಹುದಾದ ಅವಶೇಷಗಳ ಪ್ರಮಾಣ
12 ಮೀಟರ್ ಎತ್ತರ- ಅವಶೇಷಗಳಿಂದ ಉಂಟಾಗುವ ರಾಶಿ
ಅವುಗಳನ್ನು ಏನು ಮಾಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ
ಹಿಂದಿನ ಪ್ರಕರಣ
ಕೊಚ್ಚಿಯ ಮರಾಡುವಿನಲ್ಲಿ ಕರಾವಳಿ ನಿಯಂತ್ರಣ ವಲಯ ನಿಯಮ ಉಲ್ಲಂ ಸಿದ್ದಕ್ಕೆ 2019ರಲ್ಲಿ ಅಪಾರ್ಟ್‌ಮೆಂಟ್ ಅನ್ನು ಸ್ಫೋಟಿಸಿ ಕೆಡವಲಾಗಿತ್ತು.
65 ಮೀಟರ್- ಕೆಡವಲಾಗಿದ್ದ ಕಟ್ಟಡದ ಎತ್ತರ
122- ಅದರಲ್ಲಿ ಇದ್ದ ಫ್ಲಾಟ್‌ಗಳು
1,800 ಕೆಜಿ- ಬಳಕೆ ಮಾಡಲಾಗಿದ್ದ ಸ್ಫೋಟಕ ಪ್ರಮಾಣ
07 ದಿನ- ಸ್ಫೋಟಕಗಳನ್ನು ಇರಿಸಲುಬೇಕಾಗಿದ್ದ ದಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.