ಭಾರತ ಜಗತ್ತಿನ ಆರನೇ ಸಿರಿವಂತ ದೇಶ

Team Udayavani, Jan 31, 2018, 7:15 AM IST

india.jpg

ನವದೆಹಲಿ: ಭಾರತ ಇನ್ನು ಬಡದೇಶ ಅಲ್ಲವೇ ಅಲ್ಲ! ಹೌದು, ನ್ಯೂ ವರ್ಲ್x ವೆಲ್ತ್‌ನ ಪ್ರಕಾರ ಭಾರತ ಜಗತ್ತಿನಲ್ಲೇ ಆರನೇ ಸಿರಿವಂತ ದೇಶ. 2017ಕ್ಕೆ ಅಂತ್ಯವಾದಂತೆ ಭಾರತದ ಒಟ್ಟಾರೆ ಸಂಪತ್ತಿನ ಮೌಲ್ಯ 8,230 ಶತಕೋಟಿ ಡಾಲರ್‌. ಕೆಲ ತಿಂಗಳುಗಳ ಹಿಂದಷ್ಟೇ ಏಳನೇ ಸ್ಥಾನದಲ್ಲಿದ್ದ ಭಾರತ ಸದ್ಯದಲ್ಲೇ ಫ್ರಾನ್ಸ್‌ ಅನ್ನು ಹಿಂದಕ್ಕೆ ತಳ್ಳಿ ಆರನೇ ಸ್ಥಾನಕ್ಕೆ ಏರಲಿದೆ ಎಂದು ವರದಿಯಾಗಿತ್ತು. ಇದೀಗ ಇದಕ್ಕೆ ಪೂರಕವಾಗಿ ಸಿರಿವಂತ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು ಆರನೇ ಸ್ಥಾನಕ್ಕೆ ಜಿಗಿದಿದೆ. 

ಮೊದಲ ಸ್ಥಾನದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕವೇ ಇದೆ. ಸದ್ಯ ಆ ದೇಶದ ಒಟ್ಟಾರೆ ಸಂಪತ್ತಿನ ಮೌಲ್ಯ 64,584 ಶತಕೋಟಿ ಡಾಲರ್‌ ಆಗಿದೆ. ಎರಡನೇ ಸ್ಥಾನದಲ್ಲಿರುವ ಚೀನಾದ ಸಂಪತ್ತಿನ ಮೌಲ್ಯ 24,803 ಶತಕೋಟಿ ಡಾಲರ್‌. ಇನ್ನು ಜಪಾನ್‌ ಮೂರನೇ ಸ್ಥಾನದಲ್ಲಿದ್ದು 19,522 ಶತಕೋಟಿ ಡಾಲರ್‌ ಸಂಪತ್ತು ಹೊಂದಿದೆ. 

ನಾಲ್ಕನೇ ಸ್ಥಾನದಲ್ಲಿ ಬ್ರಿಟನ್‌ ದೇಶವಿದೆ. ಈ ದೇಶದ ಒಟ್ಟಾರೆ ಸಂಪತ್ತು 9,919 ಶತಕೋಟಿ ಡಾಲರ್‌ಗಳಾಗಿದೆ. ಜರ್ಮನಿ  ಐದನೇ ಸ್ಥಾನದಲ್ಲಿದ್ದು 9,660 ಶತಕೋಟಿ ಡಾಲರ್‌ ಆಸ್ತಿ ಮೌಲ್ಯ ಹೊಂದಿದೆ. ಈ ಸಂಪತ್ತಿನ ಮೌಲ್ಯವನ್ನು ದೇಶದ ಎಲ್ಲಾ ಖಾಸಗಿ ವ್ಯಕ್ತಿಗಳು ಹೊಂದಿರುವ ಒಟ್ಟಾರೆ ಆಸ್ತಿ, ಹಣ, ಲಾಭಾಂಶಗಳು, ವ್ಯಾಪಾರ ಆಸಕ್ತಿಗಳು ಸೇರಿವೆ. ಆದರೆ, ಸರ್ಕಾರದ ನಿಧಿಗಳನ್ನು ಇದರಿಂದ ಹೊರಗಿಡಲಾಗಿದೆ. 

2017 ಭಾರತಕ್ಕೆ ಹರ್ಷದ ವರ್ಷ: ಕಳೆದ ವರ್ಷ ಭಾರತದ ಪಾಲಿಗೆ ಖುಷಿ ತಂದ ವರ್ಷವಾಗಿದೆ. 2016ರಲ್ಲಿ ಭಾರತದ ಸಂಪತ್ತು 6,584 ಶತಕೋಟಿ ಡಾಲರ್‌ಗಳಾಗಿತ್ತು. ಆದರೆ 2017ರಲ್ಲಿ ಭಾರತದ ಒಟ್ಟಾರೆ ಆಸ್ತಿ 8,230 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. 

ಅಂದರೆ, ಶೇ.25ರಷ್ಟು ಪ್ರಗತಿ ಸಿಕ್ಕಿದೆ. ಇದೇ ಅವಧಿಯಲ್ಲಿ ಚೀನಾದ ಆಸ್ತಿ ಶೇ.22ರಷ್ಟು ಹೆಚ್ಚಾಗಿದ್ದರೆ, ಇಡೀ ಜಗತ್ತಿನ ಸಂಪತ್ತು ಶೇ.12 ರಷ್ಟು ಜಾಸ್ತಿಯಾಗಿದೆ. ಇನ್ನು 2007ರಿಂದ 2017ರ ವರೆಗೆ ಭಾರತದ ಆಸ್ತಿಯಲ್ಲಿ ಶೇ.160 ರಷ್ಟು ಹೆಚ್ಚಾಗಿದೆ. 2007ರಲ್ಲಿ ಭಾರತದ ಒಟ್ಟಾರೆ ಸಂಪತ್ತು 3,165 ಶತಕೋಟಿ ಡಾಲರ್‌ ಮಾತ್ರ ಆಗಿತ್ತು. ಅದೇ ಈಗ 8,230 ಶತಕೋಟಿ ಡಾಲರ್‌ಗೆ ತಲುಪಿದೆ. 

ಕುಬೇರರ ಪಟ್ಟಿಯಲ್ಲೂ ಮೂರನೇ ಸ್ಥಾನ
ಬಿಲಿಯನೇರ್‌ಗಳ ಲೆಕ್ಕದಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಮೊದಲೆರಡು ಸ್ಥಾನಗಳನ್ನು ಅಮೆರಿಕ ಮತ್ತು ಚೀನಾ ಹಂಚಿಕೊಂಡಿವೆ. ಭಾರತದಲ್ಲಿ ಇಂಥ 119 ಶತಕೋಟ್ಯಧಿಪತಿಗಳಿ ದ್ದಾರೆ. ಇನ್ನು ಭಾರತವು ಒಟ್ಟಾರೆ ಮಲ್ಟಿ ಮಿಲಿಯನೇರ್‌ಗಳ ಸಂಖ್ಯೆಯಲ್ಲಿ ಇಡೀ ಜಗತ್ತಿನಲ್ಲೇ ಏಳನೇ ಸ್ಥಾನದ ಲ್ಲಿದೆ. ಅಂದರೆ, ಇಲ್ಲಿ 20,730 ಮಿಲಿಯನೇರ್‌ಗಳಿದ್ದಾರೆ. 

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.