ಬ್ಲಾಕ್‌ಬೆರ್ರಿಸ್ ಕ್ಯಾಷುವಲ್‌ನಿಂದ ಇಂಡಿಯಾ ಖಾಕಿ ಸಪ್ತಾಹ
Team Udayavani, May 8, 2018, 12:31 PM IST
ನವದೆಹಲಿ: ಪ್ರಸಿದ್ಧ ರೆಡಿಮೇಡ್ ಉಡುಪು ತಯಾರಕ ಬ್ಲಾಕ್‌ಬೆರ್ರಿಸ್ ಕ್ಯಾಷುವಲ್ಸ್, ಬಾಲಿವುಡ್ ನಟ ಪುಲಕಿತ್ ಸಾಮ್ರಾಟ್ ಜತೆಗೂಡಿ ದೇಶಾದ್ಯಂತ “ಇಂಡಿಯಾ ಖಾಕಿ ಸಪ್ತಾಹ’ ಆಚರಿಸುತ್ತಿದೆ. ದೆಹಲಿಯ ಕನ್ಹಾಟ್‌ಪ್ಲೇಸ್ ಮಳಿಗೆಯಲ್ಲಿ ಸಪ್ತಾಹಕ್ಕೆ ಚಾಲನೆ ನೀಡಿದ ಪುಲಕಿತ್ ಸಾಮ್ರಾಟ್, ನೆರೆದಿದ್ದ ಪ್ರೇಕ್ಷಕರಿಗೆ ಫ್ಯಾಷನ್ ಬಗ್ಗೆ ಸಲಹೆ ನೀಡಿದರು.
ಫ್ಯಾಷನ್‌ಲೋಕದಿಂದ ಸಿನಿಮಾ ಪ್ರಪಂಚಕ್ಕೆ ಅವರು ಪ್ರವೇಶ ಪಡೆದ ರೀತಿ ಸೇರಿ ಹಲವು ಸಂಗತಿಗಳನ್ನು ಹಂಚಿಕೊಂಡರು. ನಮ್ಮ ದೇಶದಲ್ಲಿ ಖಾಕಿಗೆ ಒಂದು ವಿಶಿಷ್ಟ ಸ್ಥಾನ ನೀಡಲಾಗಿದೆ. ವೃತ್ತಿಪರರಿಗೆ ಖಾಕಿ ಅಗತ್ಯ ವಸ್ತ್ರಗಳಾಗಿವೆ. ಬ್ಲಾಕ್‌ಬೆರ್ರಿಸ್‌ನಲ್ಲಿ ಅದ್ಭುತ ಕಲೆಕ್ಷನ್ ಇರುವುದಲ್ಲದೆ, ಇವುಗಳು ದೀರ್ಘ ಬಾಳಿಕೆಯ ಉಡುಪುಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬ್ರ್ಯಾಂಡ್ ಎಕ್ಸ್‌ಪಿರೀಯನ್ಸ್ ವಿಭಾಗದ ಉಪಾಧ್ಯಕ್ಷ ರಮೇಶ್ ಕೌಶಿಕ್ ಮಾತನಾಡಿ, ಬ್ಲಾಕ್‌ಬೆರ್ರಿಸ್ ಇಂಡಿಯಾ ಖಾಕಿ ಸಪ್ತಾಹದ ಪ್ರಥಮ ಆವೃತ್ತಿಯನ್ನು ಸ್ಮಾರ್ಟ್ ಕ್ಯಾಷುವಲ್ ವಸ್ತ್ರಗಳೊಂದಿಗೆ ಆಚರಿಸುತ್ತಿದೆ. ಈ ಫ್ಯಾಷನ್ ಉಡುಪುಗಳು ವಿಶ್ವಾಸಾರ್ಹವಾಗಿದ್ದು, ಪುರುಷರಿಗೆ ಇಷ್ಟವಾಗುತ್ತವೆ. ಎಲ್ಲ ಸಂದರ್ಭ (ಕಾಲಗಳಲ್ಲೂ)ಗಳಲ್ಲೂ ಆಕರ್ಷಕ ಹಾಗೂ ಆರಾಮದ ಅನುಭೂತಿ ನೀಡುವ ವಸ್ತ್ರಗಳು ಇವಾಗಿವೆ ಎಂದು ತಿಳಿಸಿದ್ದಾರೆ.
ಬ್ಲಾಕ್‌ಬೆರ್ರಿ ಒಳ ಉಡುಪುಗಳು, ಶೂ ಹಾಗೂ ಪುರುಷರ ಇತರ ವಸ್ತುಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ದೇಶ 350 ನಗರಗಳಲ್ಲಿ 230 ಬ್ರ್ಯಾಂಡ್ ಔಟ್‌ಲೆಟ್‌ಗಳನ್ನು ಹಾಗೂ 800ಕ್ಕೂ ಅಧಿಕ ಮಲ್ಟಿ ಬ್ರ್ಯಾಂಡ್ ಔಟ್‌ಲೆಟ್‌ಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್
Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ
ಆಸೀಸ್ ರೀತಿ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್ ಮಾಡಿಲ್ಲ: ಐಟಿ ಕಾರ್ಯದರ್ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.