ಗಣತಂತ್ರಕ್ಕೆ ಭಾರತ ತಾಯಿ: ಬಿಹಾರದಲ್ಲಿ ಪ್ರಧಾನಿ ಪ್ರತಿಪಾದನೆ; ವೈಶಾಲಿ ಸಾಮ್ರಾಜ್ಯ ಉದಾಹರಣೆ
Team Udayavani, Jul 13, 2022, 1:05 AM IST
ಹೊಸದಿಲ್ಲಿ: ವಿಶ್ವದಲ್ಲಿನ ಎಲ್ಲ ಪ್ರಜಾಪ್ರಭುತ್ವಗಳಿಗೆ ಭಾರತವೇ ಜನ್ಮದಾತೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಬಿಹಾರದ ವಿಧಾನ ಸಭೆಯು ನಿರ್ಮಾಣವಾಗಿ ನೂರು ವರ್ಷಗಳು ಸಂದ ನೆನಪಿಗಾಗಿ ವಿಧಾನಸಭೆಯ ಆವರಣದಲ್ಲಿ ನೂತನ ವಾಗಿ ನಿರ್ಮಿಸಲಾಗಿರುವ ಸ್ತಂಭವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
“ಅನೇಕರು ಭಾರತಕ್ಕೆ ಪ್ರಜಾಪ್ರಭುತ್ವವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂತು ಎಂದು ಹೇಳುತ್ತಾರೆ. ಆದರೆ ಭಾರತದಲ್ಲಿ ನಾಗರಿಕ ಪದ್ಧತಿಗಳು ಬಹುಹಿಂದಿ ನಿಂದಲೂ ಚಾಲ್ತಿಯಲ್ಲಿದ್ದವು. ಬಿಹಾರದಲ್ಲಿ ಶತಮಾನ ಗಳ ಹಿಂದಿದ್ದ ವೈಶಾಲಿ ಸಾಮ್ರಾಜ್ಯದಲ್ಲಿ ಪ್ರಜಾಪ್ರಭುತ್ವ ಚಾಲ್ತಿಯಲ್ಲಿತ್ತು. ಶತಮಾನಗಳ ಹಿಂದೆಯೇ ಇಂಥದ್ದೊಂದು ಪ್ರಬುದ್ಧ ವಾದ ಪ್ರಜಾಪ್ರಭುತ್ವ ನಮ್ಮಲ್ಲಿ ಚಾಲ್ತಿಯಲ್ಲಿತ್ತು’ ಎಂದು ಹೇಳಿದರು.
“ಭಾರತದ ಪ್ರಜಾಪ್ರಭುತ್ವವು ಸಮಾನತೆಯ ತತ್ತ್ವದಡಿಯೇ ನಿಂತಿದೆ. ನಾವು ಆಗಾಗ್ಗೆ, ಭಾರತವು ವಿಶ್ವದ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯೆಂದು ಹೇಳುತ್ತಿರುತ್ತೇವೆ. ಆದರೆ ಕೇವಲ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯಲ್ಲ, ವಿಶ್ವದೆಲ್ಲೆಡೆ ಇರುವ ಪ್ರಜಾಪ್ರಭುತ್ವಗಳಿಗೆ ಭಾರತವೇ ಜನನಿ ಎಂದು ನಾನು ಹೇಳಬಯಸುತ್ತೇನೆ’ ಎಂದು ವಿವರಿಸಿದರು.
“ಶಾರ್ಟ್‌ಕಟ್’ನಿಂದ “ಶಾರ್ಟ್ ಸರ್ಕ್ಯೂಟ್’!: ಬಿಹಾರ ಭೇಟಿಗೂ ಮುನ್ನ ಮಂಗಳವಾರ ಬೆಳಗ್ಗೆ ಝಾರ್ಖಂಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಲ್ಲಿ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜತೆಗೆ, ಅನೇಕ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಈ ಯೋಜನೆಗಳ ಒಟ್ಟಾರೆ ಮೊತ್ತ 16,800 ಕೋಟಿ ರೂ.ಗಳಾಗಿವೆ.
ದೇವಗಢದಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಶಾರ್ಟ್ ಕಟ್ ಹಾದಿಗಳನ್ನು ಹಿಡಿದ ಎಲ್ಲ ಪಕ್ಷಗಳು ಶಾರ್ಟ್ ಸಕ್ಯೂಟ್‌ಗೆ ತುತ್ತಾಗಬೇಕಾಗುತ್ತದೆ ಎಂಬ ಲಘು ಹಾಸ್ಯದ ಮೂಲಕ ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದರು.
ದೇಶದಲ್ಲಿರುವ ಪುಣ್ಯಸ್ಥಳಗಳು, ಈ ದೇಶಕ್ಕೊಂದು ಅಸ್ಮಿತೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಥ ಪುಣ್ಯಕ್ಷೇತ್ರಗಳಲ್ಲಿ ಆಧುನಿಕ ಸವಲತ್ತುಗಳನ್ನು ನಿರ್ಮಿಸಲು ನಮ್ಮ ಸರಕಾರ ಕಾರ್ಯೋನ್ಮುಖವಾಗಿದೆ. ಹಾಗಾಗಿ ಅಯೋಧ್ಯೆ, ವಾರಾಣಸಿ, ಕಾಶಿ, ಬೈದ್ಯನಾಥ ಮುಂತಾದೆಡೆ ಉತ್ತಮ ವಿಶ್ವದರ್ಜೆಯ ಸೌಕರ್ಯಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಬೈದ್ಯನಾಥನಿಗೆ ಮೋದಿ ಪೂಜೆ
ಮಂಗಳವಾರ ಬೆಳಗ್ಗೆ ಝಾರ್ಖಂಡ್‌ನ ದೇವಧರ್‌ನಲ್ಲಿರುವ, ದೇಶದ 12 ಜ್ಯೋತಿರ್ಲಿಂಗಗಳಲ್ಲೊಂದಾದ ಬಾಬಾ ಬೈದ್ಯನಾಥ್ ದೇಗುಲಕ್ಕೆ ಭೇಟಿ ನೀಡಿದ ಮೋದಿ, ಅಲ್ಲಿನ ಶಿವಲಿಂಗಕ್ಕೆ ಅಭಿಷೇಕ, ಪೂಜೆ ನೆರವೇರಿಸಿದರು. ಬೆಳಗ್ಗೆ ದೇಗುಲದ ವಿಐಪಿ ದ್ವಾರಕ್ಕೆ ಮೋದಿಯವರು ಆಗಮಿಸಿದಾಗ, ವೇದ ಮಂತ್ರಘೋಷ ಹಾಗೂ ಶಂಖನಾದಗಳಿಂದ ಸ್ವಾಗತ ನೀಡಲಾಯಿತು. ದ್ವಾರದ ಬಳಿ ನಿಂತಿದ್ದ 11 ಪುರೋಹಿತರು ಅವರಿಗೆ ಹೂಗುತ್ಛವನ್ನು ನೀಡಿ ಸ್ವಾಗತಿಸಿದರು. ಆನಂತರ ಅವರನ್ನು ದೇಗುಲದ ಸುಮುಖ ದ್ವಾರದ ಕಡೆಗೆ ಗಣೇಶನ ಪೂಜೆಗಾಗಿ ಕರೆದೊಯ್ಯಲಾಯಿತು.
ದೇವಗಢದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ
ದೇವಗಢದಲ್ಲಿ ಬುಧವಾರ 401 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಉಪಸ್ಥಿತರಿದ್ದರು. ಈ ನಿಲ್ದಾಣಕ್ಕೆ 2018, ಮೇ 25ರಂದು ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.