ಭಾರತ-ನೇಪಾಲ ರೈಲು ಬಂಧ
Team Udayavani, Nov 5, 2018, 8:36 AM IST
ಹೊಸದಿಲ್ಲಿ: ಬಹು ನಿರೀಕ್ಷಿತ ಭಾರತ- ನೇಪಾಲ ನಡುವಿನ ಪ್ರಯಾಣಿಕ ರೈಲು ಸಂಚಾರಕ್ಕೆ ಇದೇ ಡಿಸೆಂಬರ್ನಲ್ಲಿ ಚಾಲನೆ ಸಿಗುವ ನಿರೀಕ್ಷೆಯಿದೆ. ಬಿಹಾರದ ಜಯನಗರ ಹಾಗೂ ನೇಪಾಲದ ಆಗ್ನೇಯ ಭಾಗದಲ್ಲಿರುವ ಧನುಸಾ ಜಿಲ್ಲೆಯ ಕುರ್ತಾ (34 ಕಿ.ಮೀ.) ಎಂಬ ಊರಿನ ನಡುವೆ ಮೊದಲ ಸಂಚಾರ ಆರಂಭವಾಗಲಿದೆ.
ನೇಪಾಲದೊಂದಿಗೆ ರೈಲು ಸಂಪರ್ಕ ಬೆಸೆ ಯಲು ಚೀನ ನಡೆಸುತ್ತಿರುವ ಯತ್ನಗಳಿಗೆ ಸಡ್ಡು ಹೊಡೆಯಲು ಭಾರತ ಈ ರೈಲು ಸಂಚಾರ ಆರಂಭಿಸಲಿದೆ. ಉಭಯ ದೇಶಗಳ ನಡುವೆ ನಾಲ್ಕು ರೈಲು ಮಾರ್ಗಗಳು ಅನುಷ್ಠಾ ನಕ್ಕೆ ಬರಲಿದ್ದು, ಜಯನಗರ-ಕುರ್ತಾ ರೈಲು ಮಾರ್ಗ ಇವುಗಳಲ್ಲಿ ಮೊದಲನೆಯದ್ದು.
ಭಾರತ-ನೇಪಾಲ ರೈಲು ಮಾರ್ಗ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ನೇಪಾಲದ ಮಟ್ಟೊಹರಿ ಅರಣ್ಯ ವಲಯದಿಂದ ಭಾರತಕ್ಕೆ ನೇರ ಸಂಪರ್ಕವಿತ್ತು. ಆದರೆ, 15 ವರ್ಷಗಳ ಹಿಂದೆ, ಬಿ ಸೇತುವೆಯು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಈ ರೈಲು ಸಂಚಾರ ರದ್ದಾಗಿತ್ತು. ಈ ಮಾರ್ಗದ ಪುನರುತ್ಥಾನಕ್ಕಾಗಿ ಭಾರತ 550 ಕೋಟಿ ರೂ., ನೇಪಾಲ 880 ಕೋಟಿ ರೂ. ಖರ್ಚು ಮಾಡಿವೆ. ಮೊದಲ ಹಂತದಲ್ಲಿ, ಬಿಹಾರದ ಜಯನಗರ-ಕುರ್ತಾ ಮಾರ್ಗ ನಿರ್ಮಿಸಲಾಗಿದ್ದು, 2ನೇ ಹಂತದಲ್ಲಿ ಕುರ್ತಾ-ಭಂಗಹ (18 ಕಿ.ಮೀ.), 3ನೇ ಹಂತದಲ್ಲಿ ಭಂಗಹ-ಬಾರ್ಡಿಬಸ್ (17 ಕಿ.ಮೀ.) ಸದ್ಯದಲ್ಲೇ ನಿರ್ಮಾಣಗೊಳ್ಳಲಿವೆ. ಮಾರ್ಗದ ಒಟ್ಟಾರೆ ಉದ್ದದಲ್ಲಿ ಕೇವಲ 3 ಕಿ.ಮೀ. ಮಾತ್ರ ಭಾರತದ ಗಡಿಯೊಳಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.