ವಿಮಾನ ಯಾನ: ಹೊಸ ನಿಯಮಾವಳಿ: ಅನುಚಿತ ವರ್ತನೆ ಆಜೀವ ನಿರ್ಬಂಧ

Team Udayavani, Sep 9, 2017, 1:15 PM IST

Air-India-Flight-900.jpg

ಹೊಸದಿಲ್ಲಿ: ಇನ್ನು ಮುಂದೆ ವಿಮಾನದಲ್ಲಿ ಕುಳಿತು ಎಗರಾಡಿದರೆ, ಅತಿರೇಕಿಗಳಾದರೆ, ಹುಚ್ಚಾಟ ನಡೆಸಿದರೆ ಆಜೀವ ಪರ್ಯಂತ ವಿಮಾನ ಹತ್ತುವ ಭಾಗ್ಯವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು! ಹೌದು, ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ‘ನೋ-ಫ್ಲೈ’ ಪಟ್ಟಿ ಬಿಡುಗಡೆ ಮಾಡಿದ್ದು ವಿಮಾನದೊಳಗೆ ಕೋತಿಯಾಟ ಆಡುವವರನ್ನು ನಿರ್ಬಂಧಿಸುವ ನಿಯಮ ಮಾಡಿದೆ. ಮಹಾರಾಷ್ಟ್ರದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್‌, ಏರ್‌ಲೈನ್‌ ಸಿಬಂದಿಗೆ 25 ಬಾರಿ ಚಪ್ಪಲಿ ಯಿಂದ ಹೊಡೆದ ಪ್ರಕರಣದ ಅನಂತರ ವಿದೇಶಗಳಲ್ಲೂ ಇರುವ ಹಾಗೆ ನೋ-ಫ್ಲೈ ಪಟ್ಟಿ ರೂಪಿಸಲು ಒತ್ತಾಯ ಕೇಳಿಬಂದಿತ್ತು. ಈಗ ಡಿಜಿಸಿಎ ನಿಯಮ ರೂಪಿಸಿದ್ದು, ಕಡೇ ಪಕ್ಷ 3 ತಿಂಗಳಿಂದ ಆಜೀವ ಪರ್ಯಂತ ವಿಮಾನ ಹತ್ತದ ಶಿಕ್ಷೆ ಕೊಡಬಹುದಾಗಿದೆ.

ಹೇಗಿದೆ ನಿಯಮಾವಳಿ?
ಕೇಂದ್ರ ಸರಕಾರ ಶಿಕ್ಷೆ ಪ್ರಮಾಣವನ್ನು 3 ಭಾಗಗಳಲ್ಲಿ ವಿಂಗಡಿಸಿದೆ. ಅಂದರೆ, ಬೈಗುಳ, ದೈಹಿಕ ಹಲ್ಲೆ, ಜೀವ ಬೆದರಿಕೆ ಎಂದು ವಿಭಾಗ ಮಾಡಿದೆ.

ಬೈಗುಳಕ್ಕೆ 3 ತಿಂಗಳ ನಿರ್ಬಂಧ: ಅತಿರೇಕಿಗಳಾಗಿ ವರ್ತನೆ, ಸಿಬಂದಿಗೆ ಬಾಯಿಗೆ ಬಂದಂತೆ ಬಯ್ಯುವುದು, ಕುಡಿದು ಗಲಾಟೆ ಮಾಡಿದರೆ ಕನಿಷ್ಠ 3 ತಿಂಗಳ ವರೆಗೆ ವಿಮಾನ ಹತ್ತದಂತೆ ನಿರ್ಬಂಧ ಹೇರಬಹುದಾಗಿದೆ.

ದೈಹಿಕ ಹಲ್ಲೆಗೆ 6 ತಿಂಗಳ ನಿರ್ಬಂಧ: ವಿಮಾನದಲ್ಲಿನ ಸಿಬಂದಿಯನ್ನು ತಳ್ಳಾಡುವುದು, ಹೊಡೆಯುವುದು, ಹಲ್ಲೆ ಮಾಡುವುದು, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದರೆ ಆರು ತಿಂಗಳವರೆಗೆ ವಿಮಾನ ಯಾನ ಮಾಡದಂತೆ ನಿರ್ಬಂಧಿಸಬಹುದಾಗಿದೆ.

ಜೀವ ಬೆದರಿಕೆಗೆ ಆಜೀವ ನಿಷೇಧ: ವಿಮಾನದೊಳಗಿನ ವ್ಯವಸ್ಥೆ ಹಾಳು ಮಾಡುವುದು, ಸಿಬಂದಿಗೆ ಜೀವ ಬೆದರಿಕೆ ಹಾಕುವುದು ಮಾಡಿದರೆ ಕನಿಷ್ಠ 2 ವರ್ಷ ಅಥವಾ ಆಜೀವ ಪರ್ಯಂತ ನಿಷೇಧ ಹೇರಬಹುದಾಗಿದೆ.

ನಿರ್ಬಂಧ ಶಿಕ್ಷೆ ಹೇಗೆ ತೀರ್ಮಾನ?: ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರ ನೇತೃತ್ವದ ಸಮಿತಿ ರಚಿಸಿ ಪ್ರಕರಣದ ವಿಚಾರಣೆ. ಸಮಿತಿ ಘಟನೆ ನಡೆದ ಒಂದು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಎಷ್ಟು ಸಮಯದವರೆಗೆ ನಿರ್ಬಂಧ ಹೇರಬಹುದು ಎಂದು ತೀರ್ಮಾನಿಸುತ್ತದೆ.

ವಿಮಾನದಲ್ಲಿ ಅನುಚಿತವಾಗಿ ವರ್ತಿಸುವವರಿಗೆ ನೋ-ಫ್ಲೈ ಪಟ್ಟಿಯಲ್ಲಿರುವ ನಿಯಮಗಳೇ ಅಲ್ಲ, ಇದರ ಜತೆ ಸದ್ಯ ಕಾನೂನಿನಲ್ಲಿ ಇರುವ ಇತರೆ ನಿಯಮಗಳ ಅಡಿಯಲ್ಲೂ ಕ್ರಮ ಕೈಗೊಳ್ಳಬಹುದು. ಇತರೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕ್ರಮ ಅನಿವಾರ್ಯ.
– ಅಶೋಕ್‌ ಗಜಪತಿ ರಾಜು, ವಿಮಾನಯಾನ ಸಚಿವ

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.