ಲಸಿಕಾ ಅಭಿಯಾನದಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ : ಕೇಂದ್ರ ಆರೋಗ್ಯ ಸಚಿವಾಲಯ
Team Udayavani, Jun 28, 2021, 5:13 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ಈವರೆಗೆ ನೀಡಲಾದ ಒಟ್ಟು ಕೋವಿಡ್ 19 ಲಸಿಕೆಗಳ ಪ್ರಮಾಣದಲ್ಲಿ ಅಮೆರಿಕಾವನ್ನು ಹಿಂದಿಕ್ಕಿದೆ ಎಂದು ಇಂದು(ಸೋಮವಾರ, ಜೂನ್ 28) ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜನವರಿ 16 ರಂದು ಲಸಿಕಾ ಅಭಿಯಾನವನ್ನು ಆರಂಭಿಸಿದ ಭಾರತ ಸರ್ಕಾರ ಈವರೆಗೆ ಒಟ್ಟು 323.6 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡಿದೆ. ಆದರೇ, ಕಳೆದ ವರ್ಷ ಡಿಸೆಂಬರ್ ನಲ್ಲಿ 14 ರಂದು ಲಸಿಕಾ ಅಭಿಯಾನವನ್ನು ಆರಂಭಿಸಿದ ಅಮೆರಿಕಾ, ಈವರೆಗೆ ಒಟ್ಟು 323.3 ಮಿಲಿಯನ್ ಕೋವಿಡ್ ಲಸಿಕೆಗಳನ್ನು ನೀಡಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : ಡಿಕೆ ಶಿವಕುಮಾರ್ ಭೇಟಿಯಾದ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು
ಈ ಮುಖೇನ ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶದಾದ್ಯಂತ ಕೋವಿಡ್ ಲಸಿಕಾ ಅಭಿಯಾನವನ್ನು ಆರಂಭಿಸಿ, ಕಡಿಮೆ ಅವಧಿಯಲ್ಲಿ ಈ ವರೆಗೆ ಒಟ್ಟು 323.6 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡುವ ಮೂಲಕ ಮತ್ತೊಂದು ದಾಖಲೆ ಮಾಡಿದೆ ಎಂದು ಸಚಿವಾಲಯ ಅಭಿಪ್ರಾಯ ಪಟ್ಟಿದೆ.
ಭಾರತದಲ್ಲಿ ವ್ಯಾಕ್ಸಿನೇಷನ್ ಅಥವಾ ಲಸಿಕಾ ಅಭಿಯಾನ ಭಾನುವಾರದವರೆಗೆ 323.6 ಮಿಲಿಯನ್ ಮೀರಿದೆ. ಒಟ್ಟು 32,36,63,297 ಲಸಿಕೆ ಡೋಸ್ ಗಳನ್ನು ಈವರೆಗೆ ದೇಶದಾದ್ಯಂತ ನೀಡಲಾಗಿದೆ.
ಇನ್ನು, ಕಳೆದ 24 ಗಂಟೆಗಳಲ್ಲಿ 17,21,268 ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಯಾರ್ ಯಾರಿಗೆ ಲಸಿಕೆಗಳನ್ನು ನೀಡಲಾಗಿದೆ..?
1,01,98,257 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ತೆಗೆದುಕೊಂಡಿದ್ದರೆ, 72,07,617 ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.
1,74,42,767 ಫ‍್ರಂಟ್ ಲೈನ್ ವರ್ಕರ್ಸ್ ಮೊದಲ ಡೋಸ್ ಪಡೆದಿದ್ದರೆ, 93,99,319 ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. 18-44 ವಯೋಮಾನದವರಲ್ಲಿ 8,46,51,696 ಮಂದಿ ಮೊದಲ ಡೋಸ್ ತೆಗೆದುಕೊಂಡರೆ, 19,01,190 ಜನರು ಎರಡನೇ ಡೋಸ್ ಪಡೆದಿದ್ದಾರೆ.
45-59 ವಯೋಮಾನದವರಲ್ಲಿ, 8,71,11,445 ಜನರಿಗೆ ಮೊದಲ ಡೋಸ್ ನೀಡಿದರೆ, 1,48,12,349 ಜನರು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.
ಅಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟ 6,75,29,713 ಮಂದಿ ಮೊದಲ ಡೋಸ್ ಪಡೆದಿದ್ದರೆ, 2,34,08,944 ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ತನ್ನ ಬಳಕೆದಾರರಿಗೆ ಮತ್ತೆರಡು ವಿಶೇಷತೆಗಳನ್ನು ನೀಡುತ್ತಿದೆ ವಾಟ್ಸ್ಯಾಪ್ ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Mine Tragedy: ಇಂದು ಮತ್ತೆ ಮೂರು ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.