ಭಾರತೀಯ ಕಾನ್ಸುಲೇಟ್ ಅಧಿಕಾರಿಗೆ ಕಿರುಕುಳ: ಪಾಕಿಗೆ ಭಾರತದ ಪ್ರತಿಭಟನೆ
Team Udayavani, Nov 23, 2018, 12:15 PM IST
ಹೊಸದಿಲ್ಲಿ : ಭಾರತೀಯ ಸಿಕ್ಖ್ ಯಾತ್ರಿಕರ ಭೇಟಿಯ ವೇಳೆ ಅವರನ್ನು ಭೇಟಿಯಾಗುವುದಕ್ಕೆ ಮತ್ತು ಕಾನ್ಸುಲೇಟ್ ಸೇವೆ ನೀಡುವುದಕ್ಕೆ ಅವಕಾಶ ನೀಡದೆ ಕಿರುಕುಳ ನೀಡಿರುವ ಪಾಕ್ ಅಧಿಕಾರಿಗಳ ಕ್ರಮ ಮತ್ತು ಅಪಪ್ರಚಾರದ ಯತ್ನವನ್ನು ಭಾರತ ಅತ್ಯಂತ ಪ್ರಬಲವಾಗಿ ಪ್ರತಿಭಟಿಸಿದೆ.
ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗುರುದ್ವಾರ ನಾಂಕಾನಾ ಸಾಹಿಬ್ ಗೆ ಬುಧವಾರದಂದು ಮತ್ತು ಗುರುದ್ವಾರ ಸಚ್ಚಾ ಸೌಧಕ್ಕೆ ಗುರುವಾರ ದಿನ ಭೇಟಿ ನೀಡಲು ಬಂದಿದ್ದ ಭಾರತೀಯ ಸಿಕ್ಖ್ ಯಾತ್ರಿಕರನ್ನು ಭೇಟಿಯಾಗುವುದಕ್ಕೆ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳಿಗೆ ಅವಕಾಶ ನೀಡದೆ ಕಿರುಕುಳ ನೀಡಲಾಗಿತ್ತು ಮತ್ತು ಅಪಪ್ರಚಾರ ನಡೆಸಲಾಗಿತ್ತು. ಇದರಿಂದ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಯಾತ್ರಿಕರಿಗೆ ನೆರವಾಗುವ ತಮ್ಮ ಕರ್ತವ್ಯವನ್ನು ನಿರ್ವಹಿಸಲಾಗದೆ ಇಸ್ಲಾಮಾಬಾದ್‌ಗೆ ಮರಳಬೇಕಾಯಿತು.
ಭಾರತೀಯ ಸಿಕ್ಖ್ ಯಾತ್ರಿಕರು ಪಾಕ್ ವಿದೇಶ ಸಚಿವಾಲಯದ ಸೂಕ್ತ ಪ್ರಯಾಣ ಅನುಮತಿ ಪತ್ರ ಹೊಂದಿಯೇ ಪಾಕಿಸ್ಥಾನಕ್ಕೆ ಹೋಗಿದ್ದರು. ಆದಾಗ್ಯೂ ಅವರಿಗೆ ಭಾರತೀಯ ಕಾನ್ಸುಲೇಟ್ ಸೇವೆಯನ್ನು ನಿರಾಕರಿಸಲಾಯಿತು ಎಂದು ಭಾರತ ಪಾಕಿಸ್ಥಾನಕ್ಕೆ ತನ್ನ ಪ್ರಬಲ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.