ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನ ಕೊಡುಗೆ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ !
Team Udayavani, Sep 29, 2020, 6:27 PM IST
ಹೊಸದಿಲ್ಲಿ: ಸಾರ್ಕ್ ರಾಷ್ಟ್ರಗಳಲ್ಲಿ ಒಂದಾಗಿರುವ ಮಾಲ್ಡೀವ್ಸ್ ಗೆ ಭಾರತವು ಡೋರ್ನಿಯರ್ ಸಾಗರ ನಿಗಾ ವಿಮಾನವನ್ನು ಕೊಡುಗೆಯಾಗಿ ನೀಡಿದೆ.
2016ರಲ್ಲಿ ಅಂದಿನ ಮಾಲ್ಡೀವ್ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಯಮೀನ್ ಅವರು ಈ ವಿಮಾನಕ್ಕಾಗಿ ಭಾರತದ ಮುಂದೆ ಬೇಡಿಕೆ ಇರಿಸಿದ್ದರು.
ಈ ವಿಮಾನವು ಮಾಲ್ಡೀವ್ ರಾಷ್ಟ್ರೀಯ ರಕ್ಷಣಾ ದಳದ (MNDF) ಸುಪರ್ದಿಯಲ್ಲಿ ಕಾರ್ಯಾಚರಿಸಲಿದೆ ಹಾಗೂ ಇದರ ಕಾರ್ಯಾಚರಣೆ ವೆಚ್ಚವನ್ನು ಭಾರತವು ಭರಿಸಲಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಮಾಲ್ಡೀವ್ಸ್ ದೇಶಕ್ಕೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನಿರ್ಮಿತ ಈ ಯುಟಿಲಿಟಿ ವಿಮಾನವನ್ನು ನೀಡಿದ್ದರ ಹಿಂದೆ ಇದೀಗ ಎರಡು ಕಾರಣಗಳನ್ನು ನೀಡಲಾಗುತ್ತಿದೆ.
ದ್ವೀಪರಾಷ್ಟ್ರ ಮಾಲ್ಡೀವ್ಸ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸುವುದು ಹಾಗೂ ಈ ಭಾಗದ ಸಮುದ್ರ ಪ್ರದೇಶದಲ್ಲಿ ಚೀನಾದ ಕಳ್ಳ ವ್ಯವಹಾರದ ಮೇಲೆ ಕಣ್ಗಾವಲು ಇರಿಸುವುದೂ ಸಹ ಭಾರತದ ಉದ್ದೇಶವಾಗಿದೆ ಎಂಬ ವಿಶ್ಲೇಷಣೆ ಇದೀಗ ಕೇಳಿಬರಲಾರಂಭಿಸಿದೆ.
ಇದನ್ನೂ ಓದಿ: ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?
ಇದು ಹೇಗೆಂದರೆ, ಆ ದೇಶದೊಂದಿಗೆ ನಮ್ಮ ಬಾಂಧವ್ಯವನ್ನು ಉತ್ತಮವಾಗಿರಿಸಿಕೊಳ್ಳುವುದು ಮತ್ತು ಇದಕ್ಕಿಂತಲೂ ಮುಖ್ಯವಾಗಿ ಈ ಭಾಗದಲ್ಲಿರುವ ‘ಎಕ್ಸ್ ಕ್ಲೂಸಿವ್ ಎಕನಾಮಿಕ್ ಝೋನ್’ (ಅತಿವಿಶೇಷ ಆರ್ಥಿಕ ವಲಯ) (EEZ) ದಲ್ಲಿ ಚೀನಾ ಚಟುವಟಿಕೆಗಳ ಮೇಲೆ ಭಾರತಕ್ಕೆ ಕಣ್ಗಾವಲು ಇರಿಸಲೂ ಈ ಬೆಳವಣಿಗೆಯಿಂದ ಸಾಧ್ಯವಾಗಲಿದೆ.
ಹೀಗಾಗಿ, ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನವನ್ನು ಕೊಡುಗೆಯಾಗಿ ನೀಡಿರುವ ಭಾರತದ ರಾಜತಾಂತ್ರಿಕ ನಡೆ ಚೀನಾ ದೇಶದ ಕಣ್ಣು ಕೆಂಪಾಗಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ!
ಈ ಡೋರ್ನಿಯರ್ ಚಲಾಯಿಸಲು ಮತ್ತು ಇದರ ನಿರ್ವಹಣೆಗಾಗಿ ಪೈಲಟ್, ಏರ್ ಅಬ್ಸರ್ವರ್ ಗಳು ಮತ್ತು ತಂತ್ರಜ್ಞರು ಸೇರಿದಂತೆ ಭಾರತೀಯ ನೌಕಾದಳವು ಒಟ್ಟು ಏಳು ಜನ MDNF ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನೂ ಸಹ ನೀಡಲಿದೆ.
ಈ ಬೆಳವಣಿಗಳ ಕುರಿತಾಗಿ ಮಾಹಿತಿಯನ್ನು ಹೊಂದಿರುವ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಈ ವಿವರಗಳನ್ನು ಹಿಂದೂಸ್ತಾನ್ ಟೈಮ್ಸ್ ವೆಬ್ ಸೈಟ್ ಜೊತೆ ಹಂಚಿಕೊಂಡಿದ್ದಾರೆ.
ಈ ಬೆಳವಣಿಗೆಯ ಕುರಿತಾಗಿ ಟ್ವೀಟ್ ಒಂದನ್ನು ಮಾಡಿರುವ ಮಾಲ್ಡೀವ್ಸ್ ನಲ್ಲಿರುವ ಭಾರತೀಯ ರಾಯಭಾರಿ ಕಛೇರಿಯು, ‘ಎರಡೂ ಸರಕಾರಗಳ ನಡುವೆ 2016ರಲ್ಲಿ ಪ್ರಾರಂಭಗೊಂಡ ಒಪ್ಪಂದ ಹಾಗೂ ಚರ್ಚೆಯ ಪ್ರಕಾರ, ಡೋರ್ನಿಯರ್ ಬಂದಿಳಿದಿದೆ!
ಈ ವಿಮಾನವು ಇಲ್ಲಿ, MNDF ನಿರ್ದೇಶನ ಹಾಗೂ ನಿಯಂತ್ರಣದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಹಾಗೂ ಜಂಟಿ EEZ ನಿಗಾ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ.
MNDFನ ಬಣ್ಣ ಹಾಗೂ ಧ್ವಜವನ್ನು ಹೊಂದಿರುವ ಈ ಡೋರ್ನಿಯರನ್ನು ಮಾಲ್ಡೀವ್ ಪೈಲಟ್ ಗಳೇ ಚಲಾಯಿಸಲಿದ್ದಾರೆ’ ಎಂದು ಆ ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!
As per Govt-to-Govt Agreement & discussions started in 2016,the Dornier arrives!
It will engage in humanitarian relief efforts & joint-EEZ surveillance under command & control of #MNDF;
It proudly dons #MNDF colours & crest,and will involve Maldivian pilots in its operations. pic.twitter.com/VKjP7phjxt— India in Maldives (@HCIMaldives) September 29, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.