ಇಂಗಾಲ ಮಾಲಿನ್ಯದಲ್ಲಿ ಭಾರತಕ್ಕೆ 4ನೇ ಸ್ಥಾನ!
Team Udayavani, Dec 7, 2018, 6:00 AM IST
ಹೊಸದಿಲ್ಲಿ: ಅತೀ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸಿದ ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ! ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ ಎಂಬ ಸಂಸ್ಥೆ ನಡೆಸಿರುವ ಅಧ್ಯಯನ ವರದಿಯಲ್ಲಿ ಇದು ಉಲ್ಲೇಖವಾಗಿದೆ. ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ಇಂಗಾಲ ನಿಯಂತ್ರಣಕ್ಕೆ ವಿಶ್ವ ನಾಯಕರು ಪ್ರಯತ್ನಿಸುತ್ತಿರುವುದರ ನಡುವೆಯೇ ಇಂಥದ್ದೊಂದು ವರದಿ ಅಚ್ಚರಿ ಮೂಡಿಸಿದೆ. 2017ರಲ್ಲಿ ಭಾರತದಿಂದಲೇ ಶೇ.7ರಷ್ಟು ಇಂಗಾಲ ಪರಿಸರ ಸೇರಿದೆ.
ಮೊದಲ 3 ಸ್ಥಾನಗಳಲ್ಲಿ ಕ್ರಮವಾಗಿ ಚೀನ (ಶೇ. 27), ಅಮೆರಿಕ (ಶೇ. 15), ಐರೋಪ್ಯ ಒಕ್ಕೂಟ (ಶೇ. 10) ಇವೆ. 2017ರಲ್ಲಿ ವಿಶ್ವದ ಇತರ ರಾಷ್ಟ್ರಗಳು ಒಟ್ಟಾರೆಯಾಗಿ ಬಿಡುಗಡೆಗೊಳಿಸಿದ ಇಂಗಾಲದ ಡೈ ಆಕ್ಸೆ„ಡ್ ಪ್ರಮಾಣ ಶೇ. 41ರಷ್ಟಿದ್ದರೆ, ಭಾರತ, ಅಮೆರಿಕ, ಚೀನ, ಯೂರೋಪ್‌ನ ಕಾಣಿಕೆಯೇ ಶೇ. 59ರಷ್ಟಿದೆ. ಈ ನಾಲ್ಕು ದೇಶಗಳನ್ನು ಹೊರತು ಪಡಿಸಿದರೆ, ಟಾಪ್ 10ರಲ್ಲಿ ರಷ್ಯಾ, ಜಪಾನ್, ಜರ್ಮನಿ, ಇರಾನ್ ಹಾಗೂ ಸೌದಿ ಅರೇಬಿಯಾ ಇವೆ.
ಭಾರತದ ಇಂಗಾಲ ಉಗುಳುವಿಕೆ 2018ರಲ್ಲಿ ಶೇ. 6.3ರಷ್ಟಿತ್ತಾದರೂ ಕಲ್ಲಿದ್ದಲು, ತೈಲ, ಅನಿಲ ಮೂಲಗಳಿಂದ ಹೊರಬರುತ್ತಿರುವ ಇಂಗಾಲದ ಪ್ರಮಾಣ ಕ್ರಮವಾಗಿ ಶೇ. 7.1, ಶೇ. 2.9, ಶೇ. 6ರಷ್ಟು ಹೆಚ್ಚಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.