2021ರಲ್ಲಿ ಕೋವಿಡ್ ಲಸಿಕೆ ವಿತರಣೆಗೆ 80 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ: ಸೇರಂ
ಸೇರಂ ಆಕ್ಸ್ ಫರ್ಡ್-ಆಸ್ಟ್ರಾಜೆನಿಕಾ ಲಸಿಕೆ ಉತ್ಪಾದನಾ ಆಸ್ಟ್ರಾಜೆನಿಕಾ ಸಂಸ್ಥೆ ಜತೆ ಪಾಲುದಾರಿಕೆ ಹೊಂದಿದೆ.
Team Udayavani, Dec 19, 2020, 5:40 PM IST
ನವದೆಹಲಿ: ಮುಂದಿನ ಒಂದು ವರ್ಷದ ಕಾಲ ಕೋವಿಡ್ ಲಸಿಕೆ ವಿತರಿಸಲು ಸುಮಾರು 80 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಅಗತ್ಯವಿದೆ ಎಂದು ಪುಣೆ ಮೂಲದ ಲಸಿಕೆ ತಯಾರಿಕಾ ಸೇರಂ ಸಂಸ್ಥೆ ತಿಳಿಸಿದೆ. ಸೇರಂ ಆಕ್ಸ್ ಫರ್ಡ್-ಆಸ್ಟ್ರಾಜೆನಿಕಾ ಲಸಿಕೆ ಉತ್ಪಾದನಾ ಆಸ್ಟ್ರಾಜೆನಿಕಾ ಸಂಸ್ಥೆ ಜತೆ ಪಾಲುದಾರಿಕೆ ಹೊಂದಿದೆ.
2021ರಲ್ಲಿ ಮೊದಲ ಹಂತವಾಗಿ ಸುಮಾರು 30 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಯೋಜನೆ ಸಿದ್ದಪಡಿಸಿದೆ. ಇದರಲ್ಲಿ ಸುಮಾರು ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಆಶಾ ಕಾರ್ಯಕರ್ತೆಯರು ಹಾಗೂ ತುರ್ತು ಅಗತ್ಯದ ಕಾರ್ಯಕರ್ತರು ಮತ್ತು 27 ಕೋಟಿ ಹಿರಿಯ ವ್ಯಕ್ತಿಗಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ವರದಿ ವಿವರಿಸಿದೆ.
ಸೇರಂ ಇನ್ಸ್ ಟ್ಯೂಟ್, ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಮತ್ತು ಪೈಜ್ನರ್ ಲಸಿಕೆ ಸಂಸ್ಥೆಗಳು ತುರ್ತು ಲಸಿಕೆ ನೀಡುವ ಅನುಮತಿಗಾಗಿ ಕಾಯುತ್ತಿರುವುದಾಗಿ ವರದಿ ತಿಳಿಸಿದೆ. ಹೆಚ್ಚುವರಿ ಅಂಕಿಅಂಶಕ್ಕಾಗಿ ಸೇರಂ ಮತ್ತು ಭಾರತ್ ಬಯೋಟೆಕ್ ಗೆ ಅನುಮತಿ ಪಡೆಯುವಂತೆ ಸಿಡಿಎಸ್ ಸಿಒ ಸೂಚಿನೆ ನೀಡಿದೆ.
ಇದನ್ನೂ ಓದಿ:ಬದಲಾದ ಜೀವನ ಶೈಲಿ, ಜಂಕ್‌ಫುಡ್ ಸಂಸ್ಕೃತಿ…ಇದು ಹೃದಯಾಘಾತಕ್ಕೆ ಕಾರಣ
ಲಸಿಕೆ ವಿತರಣೆ ಬಗ್ಗೆ ಅನುಮತಿ ಪಡೆದ ಸೇರಂ ಕಾರ್ಯಕಾರಿ ನಿರ್ದೇಶಕ ಡಾ.ಸತೀಶ್ ಡಿ.ರಾವೆಟ್ಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರೀ ಪ್ರಮಾಣದ ಲಸಿಕೆ ವಿತರಣೆಗೆ ಬೃಹತ್ ಮೊತ್ತದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ಕೋವಿಡ್ ಲಸಿಕೆ ವಿತರಣೆಗೆ ಅಗತ್ಯವಿರುವ 80,000 ಕೋಟಿ ರೂಪಾಯಿ ಮೊತ್ತ ನೀಡಲು ಕೇಂದ್ರ ಸರ್ಕಾರ ಸಿದ್ದವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.