ಕೆಂಪುಕೋಟೆ ಗಲಭೆ ಕ್ಯಾಪಿಟಲ್ ದಾಂಧಲೆಗೆ ಸಮ: ಭಾರತ ಅಮೆರಿಕಕ್ಕೆ
ಬ್ಯಾರಿಕೇಡ್‌ಗಳನ್ನೇ ಹಾಕಿದ್ದರಿಂದ ಪ್ರತಿಭಟನಾನಿರತ ರೈತರನ್ನು ಭೇಟಿಯಾಗುವುದು ಅಸಾಧ್ಯವಾಗಿದೆ
Team Udayavani, Feb 5, 2021, 11:31 AM IST
ನವದೆಹಲಿ: “ಜ.6ರ ಕ್ಯಾಪಿಟಲ್ ಹಿಲ್ ಗಲಭೆಗೂ, ಜ.26ರ ಕೆಂಪುಕೋಟೆ ದಾಂಧಲೆಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ’! -ಟ್ರ್ಯಾಕ್ಟರ್ ಪರೇಡ್ ನೆಪದಲ್ಲಿ ಪ್ರತಿಭಟನಾಕಾರರು ನಡೆ ಸಿದ ವಿಧ್ವಂಸಕ ಕೃತ್ಯವನ್ನು ಭಾರತ, ಅಮೆರಿಕಕ್ಕೆ ಈ ಒಂದು ತೀಕ್ಷ್ಣಸಾಲಿನ ಮೂಲಕ ಮನವರಿಕೆ ಮಾಡಿದೆ.
ಇದನ್ನೂ ಓದಿ:ಕೊಣಾಜೆ: ಶಾಲೆಯೆದುರು ಯುವಕ ಆತ್ಮಹತ್ಯೆ, ಪ್ರೇಮ ವೈಫಲ್ಯ ಶಂಕೆ!
ರೈತ ಕಾಯ್ದೆಗಳ ಬಗ್ಗೆ ಅಮೆರಿಕ ಬೆಂಬಲ ಸೂಚಿಸಿದ ಬೆನ್ನ ಲ್ಲೇ ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾ ಸ್ತವ್, “ಭಾರತ- ಅಮೆರಿಕ ಎರಡೂ ಸ್ಪಂದನಾಶೀಲ ಪ್ರಜಾಪ್ರಭುತ್ವ ಮೌಲ್ಯಗಳನ್ನು ಅಳವಡಿಸಿಕೊಂಡಿವೆ. ಕೆಂಪುಕೋಟೆಯಲ್ಲಿ ನಡೆದ ದಾಂಧಲೆಯು ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ದುರ್ಘಟನೆಯಂತೆ ಸಮಾನ ಭಾವನೆ ಮತ್ತು ಪ್ರತಿಕ್ರಿಯೆಗಳನ್ನು ಹೊಮ್ಮಿಸಿದೆ’ ಎಂದಿದ್ದಾರೆ.
“ಕೃಷಿ ಕಾಯ್ದೆಗಳ ಸುಧಾರಣೆಗೆ ಭಾರತ ಇಟ್ಟಿರುವ ಹೆಜ್ಜೆ ಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಒಪ್ಪಿಕೊಂಡಿದೆ. ಅಮೆರಿಕದ ಹೇಳಿಕೆಯನ್ನು ಗಮನಿಸಿದ್ದೇವೆ. ಇಂಥ ಸನ್ನಿ ವೇ ಶದಲ್ಲಿ ನಾವು ಅವರ ಅಭಿಪ್ರಾಯ ಸ್ವೀಕರಿಸುವುದೂ ಬಹಳ ಮುಖ್ಯ. ಇಲ್ಲಿನ ಯಾವುದೇ ಪ್ರತಿಭಟನೆಯನ್ನು ಭಾರತದ ಪ್ರಜಾಪ್ರಭುತ್ವದ ನೀತಿಗಣ್ಣಿಂದಲೇ ನೋಡಬೇಕು. ರೈತ ಸಮೂಹದ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಪ್ರಯ ತ್ನಿಸುತ್ತಲೇ ಇದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆ ಗಲಾಟೆ: “ಏಕಪಾತ್ರಾಭಿನಯ ಸಾಕು, ರೈತರೊಂದಿಗೆ ಮಾತುಕತೆ ಮುಂದುವರಿಸಿ’!- ಇದು ರಾಜ್ಯಸಭೆಯಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಮಾಡಿರುವ ಒತ್ತಾಯ! “ಬಿಜೆಪಿ ಸಚಿವರು ಏಕಪಾತ್ರಾಭಿನಯದಲ್ಲಿ ಹೆಚ್ಚು ನಂಬಿಕೆ ಹೊಂದಿದ್ದಾರೆ. ಕಂದಕಗಳನ್ನು ಕೊರೆದು, ಮುಳ್ಳುತಂತಿಗಳನ್ನು ಹಾಕಿ, ಮೊಳೆಗಳನ್ನು ನೆಟ್ಟು ರೈತರ ಮೇಲೆ ಗೆಲುವು ಸಾಧಿಸಲು ಹೊರಟಿದ್ದಾರೆ’ ಎಂದು ಆಪ್ ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವರು ಆರೋಪಿಸಿದ್ದಾರೆ.
ಫೆ.8ಕ್ಕೆ ಮೋದಿ ಉತ್ತರ: ಪ್ರಧಾನಿ ನರೆಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣಕ್ಕೆ ರಾಜ್ಯಸಭೆಯಲ್ಲಿ ಸೋಮವಾರ ದಂದು ಪ್ರತಿಕ್ರಿಯೆ ನೀಡಲಿದ್ದಾರೆ. ಅಲ್ಲದೆ, ಇದೇ ವೇಳೆ ಕೇಂದ್ರ ಬಜೆಟ್ ಕುರಿತಾಗಿಯೂ ಮಾತನಾಡಲಿದ್ದಾರೆ.
ಸಂಸದರಿಗೆ ತಡೆ: ಏತನ್ಮಧ್ಯೆ, ದೆಹಲಿಯ ಘಾಜಿಪುರ ಗಡಿ ಯಲ್ಲಿನ ಪ್ರತಿಭಟನೆಯ ಸ್ಥಳಕ್ಕೆ ತೆರಳುತ್ತಿದ್ದ ವಿಪಕ್ಷ ನಾಯ ಕರ ಗುಂಪನ್ನು ಪೊಲೀಸರು ತಡೆದಿದ್ದಾರೆ. ಶಿರೋಮಣಿ ಅಕಾಲಿದಳ, ಡಿಎಂಕೆ, ಎನ್ ಸಿಪಿ ಸೇರಿ ದಂತೆ 10 ವಿಪಕ್ಷ ಗಳ 15 ಸಂಸದರು ಘಾಜಿಪುರ ದತ್ತ ಹೊರಟಿದ್ದರು. ಹಾದಿ ತುಂಬಾ ಬ್ಯಾರಿಕೇಡ್‌ಗಳನ್ನೇ ಹಾಕಿದ್ದರಿಂದ ಇವರಿಗೆ ಪ್ರತಿಭಟನಾನಿರತ ರೈತರನ್ನು ಭೇಟಿಯಾಗುವುದು ಅಸಾಧ್ಯವಾಗಿದೆ. ಇದರಿಂದಾಗಿ ಸಂಸದರಾದ ಕೌರ್ ಬಾದಲ್, ಸುಪ್ರಿಯಾ ಸುಳೆ, ಕನ್ನಿ ಮೋಳಿ, ಸುಗತಾ ರಾಯ್ ಸೇರಿದಂತೆ ಹಲವು ಸಂಸದರು ವಿಧಿಯಿಲ್ಲದೆ ಮರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.