ಎಸ್-400 ಬೂಸ್ಟರ್ ; ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ
ಪುತಿನ್-ಮೋದಿ ಮಾತುಕತೆ ವೇಳೆ ನಿರ್ಧಾರ
Team Udayavani, Dec 7, 2021, 6:50 AM IST
ಹೊಸದಿಲ್ಲಿ: “ಭಾರತಕ್ಕೆ ಬೂಸ್ಟರ್ ಡೋಸ್’ ಎಂದೇ ಪರಿಗಣಿಸಲಾಗಿರುವ ಬಹು ನಿರೀಕ್ಷಿತ ಎಸ್-400 ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಪೂರೈಕೆಯನ್ನು ರಷ್ಯಾ ಈಗಾಗಲೇ ಆರಂಭಿಸಿದ್ದು, ಭಾರತ ಮತ್ತು ರಷ್ಯಾ ನಡುವಿನ ಮಿತ್ರತ್ವವು ಮತ್ತಷ್ಟು ಗಟ್ಟಿಯಾಗಿದೆ.
ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ, ರಕ್ಷಣೆ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರ ಗಳಲ್ಲಿ ಸಹಭಾಗಿತ್ವ, ಅಫ್ಘಾನಿಸ್ಥಾನದ ಬೆಳ ವಣಿಗೆಗಳು, ಸಾಗರೋತ್ತರ ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ಪುತಿನ್-ಮೋದಿ ಮಾತುಕತೆಯ ಬಳಿಕ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, “ಭಾರತಕ್ಕೆ ಪುತಿನ್ ಭೇಟಿ ಫಲಪ್ರದವಾಗಿದ್ದು, ಎರಡೂ ದೇಶಗಳ ನಡುವೆ 28 ಒಪ್ಪಂದಗಳು ನಡೆದಿವೆ. ಎಸ್-400 ಪೂರೈಕೆ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೂ ಮುಂದುವರಿಯಲಿದೆ. ಇಂಧನ ದಂತಹ ವ್ಯೂಹಾತ್ಮಕ ಕ್ಷೇತ್ರದಲ್ಲೂ ಸಹಕಾರ ಸಾಧಿಸುವ ನಿಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆದಿದೆ. ನಾವು ಕೂಡ ತೈಲ ಮತ್ತು ಅನಿಲ ಕ್ಷೇತ್ರ, ಪೆಟ್ರೋಕೆಮಿಕಲ್ಸ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದೇವೆ’ ಎಂದಿದ್ದಾರೆ.
ಉಗ್ರ ನಿಗ್ರಹದ ವಿಚಾರವು ಎರಡೂ ದೇಶಗಳ ಸಮಾನ ಹಿತಾಸಕ್ತಿಗೆ ಸಂಬಂಧಿ ಸಿದ್ದು. ಹೀಗಾಗಿ ಮಾತುಕತೆಯಲ್ಲಿ ಈ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಅಫ್ಘಾನಿಸ್ಥಾನದಲ್ಲಿ ಉಗ್ರವಾದ, ಮಾದಕವಸ್ತುಗಳ ಸಾಗಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಬೆಳವಣಿಗೆಗಳ ಬಗ್ಗೆ ಉಭಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಆ ದೇಶದ ವಿಚಾರದಲ್ಲಿ ಭಾರತ ಮತ್ತು ರಷ್ಯಾ ಸಮನ್ವಯ ಮುಂದು ವರಿಸಲೂ ನಿರ್ಧರಿಸಿದ್ದಾರೆ. ಆಫ^ನ್ ನೆಲವನ್ನು ಯಾವುದೇ ಕಾರಣಕ್ಕೂ ಭಯೋತ್ಪಾದಕರಿಗೆ ಆಶ್ರಯ, ತರಬೇತಿ ನೀಡಲು, ಉಗ್ರ ಚಟುವ ಟಿಕೆಗಳಿಗೆ ಸಂಚು ರೂಪಿಸಲು ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’
ಮೋದಿಗೆ ಆಹ್ವಾನ: ಒಂದು ದಿನದ ಭೇಟಿ ಮುಗಿಸಿ ಸೋಮವಾರ ರಾತ್ರಿಯೇ ಪುತಿನ್ ರಷ್ಯಾಕ್ಕೆ ವಾಪಸಾಗಿದ್ದಾರೆ. 2022ರಲ್ಲಿ ರಷ್ಯಾಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನವನ್ನೂ ನೀಡಿದ್ದಾರೆ.
ಚೀನ ಅಪ್ರಚೋದಿತ ವರ್ತನೆಗೆ ಕಿಡಿ: ಮೋದಿ-ಪುತಿನ್ ಭೇಟಿಗೂ ಮುನ್ನ ಭಾರತ-ರಷ್ಯಾ 2+2 ಮಾತುಕತೆ ನಡೆದಿದ್ದು, ಚೀನದ ದುಸ್ಸಾಹಸ ಯತ್ನಗಳ ಬಗ್ಗೆಯೂ ಚರ್ಚಿಸಲಾಗಿದೆ. ನೆರೆಯ ರಾಷ್ಟ್ರದಿಂದ “ತೀವ್ರ ಮಿಲಿಟರೀಕರಣ’ ಮತ್ತು ಉತ್ತರದ ಗಡಿಯಲ್ಲಿ ಚೀನದ “ಅಪ್ರಚೋದಿತ ಆಕ್ರಮಣಕಾರಿ ನೀತಿ’ಗಳ ಸವಾಲನ್ನು ಭಾರತ ಎದುರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆದರೆ ಬಲಿಷ್ಠ ರಾಜಕೀಯ ಇಚ್ಛಾಶಕ್ತಿ ಮತ್ತು ದೇಶವಾಸಿಗಳ ಸಾಮರ್ಥ್ಯದ ಮೂಲಕ ಇಂಥ ಎಲ್ಲ ಸವಾಲುಗಳನ್ನೂ ನಾವು ಸಮರ್ಥವಾಗಿ ಎದುರಿಸಬಲ್ಲೆವು ಎಂಬ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ.
ಭಾರತಕ್ಕೆ ಎಸ್-400 ಬಲ: ರಷ್ಯಾದ ಎಸ್-400 ಸುಧಾರಿತ ಕ್ಷಿಪಣಿಗಳು ಸುಮಾರು 400 ಕಿ.ಮೀ. ದೂರದಿಂದ ಬರುವ ವೈಮಾನಿಕ ದಾಳಿಯನ್ನೂ ಸಮರ್ಥವಾಗಿ ಎದುರಿಸುವ ಛಾತಿ ಹೊಂದಿವೆ. ಈಗಾಗಲೇ ಈ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಬಳಕೆಗೆ ಸಂಬಂಧಿಸಿ ಭಾರತೀಯ ಸಿಬ್ಬಂದಿಗೆ ರಷ್ಯಾ ತರಬೇತಿ ನೀಡಿದೆ. ಚೀನಾ ಮತ್ತು ಪಾಕಿಸ್ಥಾನ ಎರಡೂ ದೇಶಗಳಿಂದ ಆಗುವ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಮೊದಲಿಗೆ ದೇಶದ ಪಶ್ಚಿಮ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆಯಿದೆ. 2018ರಲ್ಲೇ ಭಾರತ ಮತ್ತು ರಷ್ಯಾವು ಎಸ್-400 ವ್ಯವಸ್ಥೆಯ ಖರೀದಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅಮೆರಿಕ, “ಭಾರತವೇನಾದರೂ ಈ ಒಪ್ಪಂದವನ್ನು ಮುಂದುವರಿಸಿದರೆ ನಿರ್ಬಂಧವನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಅಮೆರಿಕದ ಬೆದರಿಕೆಗೆ ಮಣಿಯದೇ ಭಾರತವು ಈ ಒಪ್ಪಂದವನ್ನು ಮುಂದುವರಿಸಿಕೊಂಡು ಬಂದಿದೆ.
ಸವಾಲುಗಳ ನಡುವೆಯೂ ಸದೃಢ ಸ್ನೇಹ: ಮೋದಿ
ಹಲವಾರು ಸವಾಲುಗಳ ನಡುವೆಯೂ ಭಾರತ ಮತ್ತು ರಷ್ಯಾ ನಡುವಿನ ಆತ್ಮೀಯ ಸಂಬಂಧ ಹಾಗೂ ಸ್ನೇಹವು ಸ್ಥಿರವಾಗಿದೆ. ಕೊರೊನಾ ಸೋಂಕಿನ ನಡುವೆಯೂ ಪುತಿನ್ ಅವರು ಭಾರತಕ್ಕೆ ಭೇಟಿ ನೀಡಿರುವುದು ಉಭಯ ದೇಶಗಳ ಸಂಬಂಧದಲ್ಲಿ ಅವರಿಗಿರುವ ಬದ್ಧತೆಯನ್ನು ತೋರಿಸಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಅತ್ಯಂತ
ಶ್ರೇಷ್ಠ ಶಕ್ತಿ: ಪುತಿನ್
ಭಾರತವು ಅತ್ಯಂತ ಶ್ರೇಷ್ಠ ಶಕ್ತಿಯಾಗಿದ್ದು, ನಮ್ಮ ಸದಾಕಾಲದ ಮಿತ್ರ ರಾಷ್ಟ್ರವೂ ಆಗಿದೆ ಎಂದು ರಷ್ಯಾ ಅಧ್ಯಕ್ಷ ಪುತಿನ್ ಶ್ಲಾ ಸಿ ದ್ದಾರೆ. ನಮ್ಮ ದೇಶಗಳ ನಡುವಿನ ಸಂಬಂಧವು ಮತ್ತಷ್ಟು ಬೆಳೆಯು ತ್ತಿದ್ದು, ಭವಿಷ್ಯದತ್ತ ನಾವು ಮುಖ ಮಾಡಿದ್ದೇವೆ ಎಂದೂ ಹೇಳಿದ್ದಾರೆ.
ಪ್ರಮುಖ ಒಪ್ಪಂದಗಳು
-ಉತ್ತರಪ್ರದೇಶದ ಅಮೇಠಿಯ ಘಟಕದಲ್ಲಿ 6 ಲಕ್ಷದಷ್ಟು ಎಕೆ-203 ರೈಫಲ್‌ಗಳನ್ನು ಜಂಟಿಯಾಗಿ ತಯಾರಿಸುವುದು
-10 ವರ್ಷಗಳ ಕಾಲ ಭಾರತ-ರಷ್ಯಾ ಸೇನಾ ಸಹಭಾಗಿತ್ವವನ್ನು ಮುಂದುವರಿಸುವುದು
-2019ರ ಫೆಬ್ರವರಿಯಲ್ಲಿ ನಡೆದ ಕಲಾಶ್ನಿಕೋವ್ ಸರಣಿಗಳ ಉತ್ಪಾದನೆ ಒಪ್ಪಂದದಲ್ಲಿ ತಿದ್ದುಪಡಿ ತರಲು ನಿರ್ಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.