ಪಾಕಿಸ್ಥಾನದ ಎಫ್-16 ಧ್ವಂಸ ; ಭಾರತದ ಪೈಲಟ್ ನಾಪತ್ತೆ
Team Udayavani, Feb 27, 2019, 10:33 AM IST
ಮಂಗಳವಾರ ಬಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಪಾಕ್ ನೆಲದಲ್ಲಿದ್ದ ಜೈಶ್ ಉಗ್ರ ತರಬೇತಿ ಶಿಬಿರಗಳನ್ನು ನಾಶಪಡಿಸಿದ ಬಳಿಕ ಭಾರತ-ಪಾಕ್ ಗಡಿಯಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಬೆಳಿಗ್ಗೆ ಭಾರತದ ಯುದ್ಧ ವಿಮಾನವನ್ನು ನಾವು ಹೊಡೆದುರುಳಿಸಿದ್ದೇವೆ ಮತ್ತು ಅದರ ಪೈಲಟ್ ನಮ್ಮ ವಶದಲ್ಲಿದ್ದಾರೆ ಎಂಬ ಹೇಳಿಕೆಯನ್ನು ಪಾಕಿಸ್ಥಾನ ಸೇನೆ ಹೆಳಿಕೊಂಡಿತ್ತು. ಇತ್ತ ಭಾರತವು ಪಾಕ್ ನ ಎಫ್-16 ಯುದ್ಧ ವಿಮಾನವನ್ನು ನಾವು ಹೊಡೆದುರುಳಿಸುವುದಾಗಿ ಹೆಳಿಕೊಂಡಿತ್ತು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಇಲಾಖೆಯು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಇಂದಿನ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ನೀಡಿದೆ. ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿರುವ ಹೇಳಿಕೆ ಈ ರೀತಿಯಾಗಿದೆ:
‘ಬುಧವಾರ ಬೆಳಿಗ್ಗೆ ಭಾರತದ ವಾಯುಪ್ರದೇಶದೊಳಗೆ ಪ್ರವೇಶಿಸಿದ್ದ ಪಾಕಿಸ್ಥಾನದ ಯುದ್ಧ ವಿಮಾನ ಎಫ್-16ನ್ನು ನಮ್ಮ ವಾಯುಪಡೆಯ ಮಿಗ್-21 ವಿಮಾನಗಳು ಹೊಡೆದುರುಳಿಸಿದೆ. ಆದರೆ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ದುರದೃಷ್ಟವಶಾತ್ ನಮ್ಮ ಒಂದು ಮಿಗ್-21 ವಿಮಾನ ಪತನಗೊಂಡಿದೆ ಮತ್ತು ಅದರಲ್ಲಿದ್ದ ಪೈಲಟ್ ಕಾಣೆಯಾಗಿದ್ದಾರೆ. ಕಾಣೆಯಾಗಿರುವ ಭಾರತ ವಾಯುಪಡೆಯ ಪೈಲಟ್ ನಮ್ಮ ವಶದಲ್ಲಿದೆ ಎಂದು ಪಾಕಿಸ್ಥಾನವು ಹೆಳಿಕೊಳ್ಳುತ್ತಿದೆ, ಈ ವಿಚಾರವನ್ನು ನಾವು ಪರಾಮರ್ಶಿಸುತ್ತಿದ್ದೇವೆ’ ಎಂದು ವಿದೇಶಾಂಗ ಇಲಾಖೆ ಮಾಧ್ಯಮಕ್ಕೆ ನೀಡಿರುವ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.
ಈ ಮೂಲಕ ಪಾಕಿಸ್ಥಾನವು ಭಾರತದ ವಾಯುನೆಲೆಯೊಳಗೆ ಪ್ರವೆಶಿಸಿದ್ದು ನಿಜ ಮತ್ತು ಅದಕ್ಕೆ ನಮ್ಮ ವಾಯುಪಡೆಗಳು ದಿಟ್ಟ ಪ್ರತ್ಯುತ್ತರವನ್ನು ನೀಡಿರುವುದನ್ನು ಸರಕಾರವೇ ಖಚಿತಪಡಿಸಿದೆ. ಆದರೆ ಮಿಗ್-21ರ ಪೈಲಟ್ ನಾಪತ್ತೆಯಾಗಿರುವುದು ಮಾತ್ರ ಭಾರತದ ಪಾಲಿಗೆ ಆತಂಕದ ಸಂಗತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.