ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ –4 ಕ್ಷಿಪಣಿ ಪ್ರಯೋಗ ಯಶಸ್ವಿ
Team Udayavani, Jun 7, 2022, 12:23 AM IST
ಹೊಸದಿಲ್ಲಿ: ಪರಮಾಣು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯವುಳ್ಳ, “ಅಗ್ನಿ-4′ ಕ್ಷಿಪಣಿಯನ್ನು ಒಡಿಶಾದ ಕರಾವಳಿ ಪ್ರದೇಶದಲ್ಲಿ ಸೋಮವಾರ ಯಶಸ್ವಿಯಾಗಿ ಪ್ರಯೋಗಿಸಲಾಯಿತು.
ಒಡಿಶಾದ ಕರಾವಳಿ ಪ್ರದೇಶದಲ್ಲಿರುವ ಡಾ| ಅಬ್ದುಲ್ ಕಲಾಂ ದ್ವೀಪದಲ್ಲಿ ಸಂಜೆ 7.30ರ ಸುಮಾರಿಗೆ ಕ್ಷಿಪಣಿಯನ್ನು ಉಡಾವಣೆ ಗೊಳಿಸಲಾಗಿತ್ತು.
ಸುಮಾರು 4 ಸಾವಿರ ಕಿ.ಮೀ. ದೂರದಲ್ಲಿ ನಿಗದಿಗೊಳಿಸಲಾಗಿದ್ದ ಗುರಿಯನ್ನು ಕ್ಷಿಪಣಿಯು ಯಶಸ್ವಿಯಾಗಿ ಮುಟ್ಟಿದೆ. ಇದರಿಂದ, “ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್’ ವತಿಯಿಂದ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಕ್ಷಿಪಣಿಯು ಅಂದುಕೊಂಡಂತೆ ಗುರಿಯನ್ನು ಮುಟ್ಟಿದೆ.
ಈ ಕ್ಷಿಪಣಿಯ ಸೇರ್ಪಡೆಯು, ಭಾರತೀಯ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ಹೊಸ ಶಕ್ತಿಯನ್ನು ತಂದುಕೊಡಲಿದೆ ಎಂದು ರಕ್ಷಣ ಇಲಾಖೆ ಬಣ್ಣಿಸಿದೆ. ಅಗ್ನಿ-4 ಕ್ಷಿಪಣಿಯು ಅಗ್ನಿ ಸರಣಿಯಲ್ಲಿ ಭಾರತವು ತಯಾರಿಸಿರುವ ನಾಲ್ಕನೇ ಅಸ್ತ್ರವಾಗಿದೆ.
ಇದಕ್ಕೆ ಮೊದಲು “ಅಗ್ನಿ-2 ಪ್ರೈಮ್’ ಎಂದು ಹೆಸರಿಡಲಾಗಿತ್ತು. ಈಗ ಅದನ್ನು ಅಗ್ನಿ-4 ಎಂದು ಬದಲಾಯಿಸಲಾಗಿದೆ. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದರ ನಿರ್ಮಾತೃ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.