2026ರಲ್ಲಿ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶ
Team Udayavani, Jul 11, 2017, 12:16 PM IST
ವಿಶ್ವಸಂಸ್ಥೆ : ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ, 2026ರ ವೇಳೆಗೆ ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿ ಮೂಡಿ ಬರಲಿದೆ. ಹಾಗೆಯೇ ವಿಶ್ವದಲ್ಲಿ ಗರಿಷ್ಠ ಗೋಧಿ ಉತ್ಪಾದಿಸುವ ದೇಶವೆಂಬ ಹೆಗ್ಗಳಿಕೆಯನ್ನೂ ಪಡೆಯಲಿದೆ ಎಂದು ವಿಶ್ವಸಂಸ್ಥೆ ಮತ್ತು ಒಇಸಿಡಿ ವರದಿ ತಿಳಿಸಿದೆ.
ಮುಂದಿನ ದಶಕ ಮುಗಿಯುವುದರೊಳಗೆ ವಿಶ್ವದ ಜನಸಂಖ್ಯೆಯು ಈಗಿನ 7.3 ಬಿಲಿಯದಿಂದ 8.2 ಬಿಲಿಯ (ಶತಕೋಟಿ) ಪ್ರಮಾಣಕ್ಕೆ ಏರಲಿದೆ. ಆ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಶೇ.56ರಷ್ಟು ಜನರು ಭಾರತ ಮತ್ತು ಉಪ-ಸಹಾರಾ-ಆಫ್ರಿಕ ವಲಯದಲ್ಲಿ ಇರುತ್ತಾರೆ ಎಂದು ಓಇಸಿಡಿ-ಎಫ್ಎಓ ಸಿದ್ಧಪಡಿಸಿರುವ 2017-2026ರ ಕೃಷಿ ಮುನ್ನೋಟ ವರದಿ ಹೇಳಿದೆ.
ಭಾರತದ ಜನಸಂಖ್ಯೆ ಮುಂದಿನ ದಶಕದಲ್ಲಿ 1.3 ಬಿಲಿಯದಿಂದ 1.5 ಬಿಲಿಯಕ್ಕೆ ಏರಲಿದೆ; ಎಂದರೆ ಭಾರತದ ಜನಸಂಖ್ಯೆ ಮುಂದಿನ ಹತ್ತು ವರ್ಷಗಳಲ್ಲಿ 15 ಕೋಟಿ ಹೆಚ್ಚಲಿದೆ. ಆ ಮೂಲಕ ಭಾರತವು ಜನಸಂಖ್ಯೆಯ ಮಟ್ಟಿಗೆ ಚೀನವನ್ನು ಹಿಂದಿಕ್ಕಿ ವಿಶ್ವದ ಬೃಹತ್ ಜನಸಂಖ್ಯೆ ಹೊಂದಿರುವ ದೇಶವೆಂಬ ಹೆಗ್ಗಳಿಕೆ ಪಡೆಯಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.