Modi; ಮೂರನೇ ಅವಧಿಯಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆ: ಪ್ರಧಾನಿ
ಸೂರತ್ ವಜ್ರ ಉದ್ಯಮವು 8 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ...
Team Udayavani, Dec 17, 2023, 6:47 PM IST
ಸೂರತ್ :ತನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ವಿಸ್ತಾರವಾದ ಸೂರತ್ ಡೈಮಂಡ್ ಬೋರ್ಸ್ ಅನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ”ಇದು ನವ ಭಾರತದ ಶಕ್ತಿ ಮತ್ತು ನಿರ್ಣಯದ ಸಂಕೇತ. ಸೂರತ್ ವಜ್ರ ಉದ್ಯಮವು 8 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ ಮತ್ತು ಹೊಸ ಬೋರ್ಸ್‌ನಿಂದ ಇನ್ನೂ 1.5 ಲಕ್ಷ ಉದ್ಯೋಗಗಳು ಸೇರ್ಪಡೆಯಾಗಲಿವೆ, ಇದು ಅಂತಾರಾಷ್ಟ್ರೀಯ ವಜ್ರಾಭರಣ ವ್ಯವಹಾರಕ್ಕೆ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಿದೆ” ಎಂದರು.
“ಕಳೆದ 10 ವರ್ಷಗಳಲ್ಲಿ ಭಾರತವು 10 ನೇ ಸ್ಥಾನದಿಂದ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಈಗ, ಮೋದಿಯ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ಸರಕಾರವು ಮುಂದಿನ 25 ವರ್ಷಗಳ ಗುರಿಗಳನ್ನು ಸಹ ನಿಗದಿಪಡಿಸಿದೆ. ನಾವು USD 5-10 ಟ್ರಿಲಿಯನ್ ಆರ್ಥಿಕತೆಯಾಗುವುದರ ಜತೆಗೆ ರಫ್ತುಗಳನ್ನು ದಾಖಲೆಯ ಎತ್ತರಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸೂರತ್ ಡೈಮಂಡ್ ಬೋರ್ಸ್ (SDB) ಕಟ್ಟಡವು ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದ್ದು, 67 ಲಕ್ಷ ಚದರ ಅಡಿಗಳಷ್ಟು ಮಹಡಿಯನ್ನು ಹೊಂದಿದೆ, ಇದು ಸೂರತ್ ನಗರದ ಸಮೀಪವಿರುವ ಖಾಜೋಡ್ ಗ್ರಾಮದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
MUST WATCH
ಹೊಸ ಸೇರ್ಪಡೆ
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.