![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 26, 2022, 7:15 AM IST
ನವದೆಹಲಿ: ಗಡಿ ರೇಖೆಯ ಬಳಿ ಅನವಶ್ಯಕವಾಗಿ ಯುದ್ಧ ವಿಮಾನ ಹಾರಾಟ ನಡೆಸುತ್ತಾ ಅಧಿಕ ಪ್ರಸಂಗಿತನ ಪ್ರದರ್ಶಿಸುತ್ತಿರುವ ಚೀನಕ್ಕೆ ಸೆಡ್ಡು ಹೊಡೆಯಲು ಭಾರತ ಸದ್ಯದಲ್ಲೇ ಉತ್ತರದಲ್ಲಿ ಹಾದು ಹೋಗಿರುವ ಉಭಯ ದೇಶಗಳ ಗಡಿರೇಖೆಯ ಬಳಿ “ಎಸ್-400′ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಎರಡನೇ ತುಕಡಿಯನ್ನು ನಿಯೋಜಿಸಲು ನಿರ್ಧರಿಸಿದೆ.
ರಷ್ಯಾದಿಂದ ಭಾರತಕ್ಕೆ ಈಗಾಗಲೇ ನೀಡಲಾಗಿರುವ “ಎಸ್-400′ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಮೊದಲ ತುಕಡಿಯನ್ನು ಭಾರತ- ಚೀನ ಗಡಿಯ ವಾಯುವ್ಯ ಭಾಗದಲ್ಲಿ ನಿಯೋಜಿಸಲಾಗಿದೆ.
ಭೂಮಿಯಿಂದ ಆಕಾಶಕ್ಕೆ ಉಡಾವಣೆಗೊಳ್ಳುವ ಯಾವುದೇ ಕ್ಷಿಪಣಿಗಳ ದಾಳಿಯನ್ನು “ಎಸ್-400′ ವ್ಯವಸ್ಥೆ ನಿಗ್ರಹಿಸುತ್ತದೆ. ಮುಂದಿನ ಮೂರು ತಿಂಗಳಲ್ಲಿ “ಎಸ್-400′ ತುಕಡಿಗಳ ನಿಯೋಜನೆ ಕಾರ್ಯವನ್ನು ಪೂರ್ಣಗೊಳಿಸ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಉಭಯ ದೇಶಗಳ ಗಡಿರೇಖೆಯ ಎರಡೂ ಕಡೆಯ 10 ಕಿ.ಮೀ.ವರೆಗೆ ಯುದ್ಧ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಆದರೆ, ಇದನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಚೀನ, ಭಾರತಕ್ಕೆ ಸೆಡ್ಡು ಹೊಡೆಯುತ್ತಿದೆ. ಇದೇ ಕಾರಣಕ್ಕಾಗಿ, ಭಾರತವೂ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಗಡಿಯಲ್ಲಿ ಎಸ್-400 ತುಕಡಿಗಳ ನಿಯೋಜನೆಗೆ ನಿರ್ಧರಿಸಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.