ಕಲ್ಲಿದ್ದಲು ಸಂಗ್ರಹದ ಕೊರತೆ: ವಿದ್ಯುತ್ ಅಭಾವದ ಭೀತಿ
Team Udayavani, Apr 13, 2022, 7:25 AM IST
ಚೆನ್ನೈ: ದೇಶದಲ್ಲಿ ಈಗಲೂ ಕಲ್ಲಿದ್ದಲಿನಿಂದಲೇ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ಸಂಸ್ಕರಣಾ ಕೇಂದ್ರಗಳಲ್ಲಿ ಕಲ್ಲಿದ್ದಲು ಸಂಗ್ರಹವೇ ಕಡಿಮೆಯಿದೆ.
ಹಾಗಾಗಿ ವಿದ್ಯುತ್ ಉತ್ಪಾದನೆ ಕಡಿತಗೊಳ್ಳಬಹುದು, ಜೊತೆಗೆ ವಿದ್ಯುತ್ ಅಭಾವವೂ ಉಂಟಾಗಬಹುದು…! ಹೀಗೆಂದು ವರದಿಯೊಂದು ಹೇಳಿದೆ.
ಮನೆಗಳಲ್ಲಿ, ಕೈಗಾರಿಕೆಗಳಲ್ಲಿ ವಿದ್ಯುತ್ ಕಡಿತದ ಸಂಭಾವ್ಯತೆ ದಟ್ಟವಾಗಿದೆ. ಇದರಿಂದ ಸರಕುಗಳ ಉತ್ಪಾದನೆಯ ಮೇಲೂ ಹೊರೆ ಬೀಳುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಭಾರೀ ಹೊಡೆತ ತಿಂದಿದ್ದ ಉತ್ಪಾದನಾ ವಲಯ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ವಿದ್ಯುತ್ ಅಭಾವ ಎದುರಾದರೆ ಮತ್ತೆ ಕುಸಿಯಬಹುದು ಎಂಬ ಆತಂಕ ಉಂಟಾಗಿದೆ.
ಇದನ್ನೂ ಓದಿ:ಬಾಲಿವುಡ್‌ನ ಆಲಿಯಾ ಭಟ್ -ರಣಬೀರ್ ಕಪೂರ್ ಮದುವೆ ಮುಂದೂಡಿಕೆ?
ಕಳೆದ ವಾರದಲ್ಲಿ ಶೇ.1.4 ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಈಗ ಶೇ.1 ವಿದ್ಯುತ್ ಕೊರತೆಯಿದೆ. ಇದಕ್ಕೆ ಕಾರಣ ಕಲ್ಲಿದ್ದಲ್ಲು ಸಂಗ್ರಹದ ಕೊರತೆ. ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ ಏ.1ರಿಂದ ಕೇವಲ 9 ದಿನಗಳಿಗೆ ಆಗುವಷ್ಟು ಮಾತ್ರ ಕಲ್ಲಿದ್ದಲು ಇದೆ.
ಸರ್ಕಾರಿ ನಿರ್ದೇಶನದ ಪ್ರಕಾರ ಕಲ್ಲಿದ್ದಲು ಸಂಸ್ಕರಣಾ ಘಟಕಗಳು 24 ದಿನಗಳಿಗೆ ಆಗುವಷ್ಟು ಸಂಗ್ರಹ ಹೊಂದಿರಬೇಕು. ಆದರೂ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇದೆ ಎಂದು ಇಂಡಿಯನ್ ಕ್ಯಾಪ್ಟಿವ್ ಪವರ್ ಪ್ರೊಡ್ನೂಸರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಜೀವ್ ಅಗರ್ವಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.