ಸ್ವಿಸ್ ಖಾತೆ ವಿವರಗಳು ಸೆಪ್ಟಂಬರ್‌ನಲ್ಲಿ ಲಭ್ಯ
Team Udayavani, Jul 11, 2019, 5:00 AM IST
ಹೊಸದಿಲ್ಲಿ: ಕಪ್ಪುಹಣದ ವಿರುದ್ಧದ ಸರಕಾರದ ಹೋರಾಟಕ್ಕೆ ಮಹತ್ವದ ಜಯ ಸೆಪ್ಟಂಬರ್‌ನಲ್ಲಿ ಸಿಗಲಿದ್ದು, ಸ್ವಿಸ್‌ಬ್ಯಾಂಕ್‌ನಲ್ಲಿ ಎಲ್ಲ ಭಾರತೀಯರು ಹೊಂದಿರುವ ಖಾತೆ ವಿವರಗಳು ಲಭ್ಯವಾಗಲಿವೆ. ಅಷ್ಟೇ ಅಲ್ಲ, 2018ರಲ್ಲಿ ಬ್ಯಾಂಕ್ ಖಾತೆ ಮುಚ್ಚಿದವರ ವಿವರಗಳೂ ಭಾರತಕ್ಕೆ ಸಿಗಲಿದೆ. ಮಾಹಿತಿ ಸ್ವಯಂಚಾಲಿತ ವರ್ಗಾವಣೆ ಒಪ್ಪಂದದ ಅಡಿಯಲ್ಲಿ ಈ ಮಾಹಿತಿ ವರ್ಗಾವಣೆ ಮಾಡಲಾಗುತ್ತಿದೆ.
ಖಾತೆ ಸಂಖ್ಯೆ, ಖಾತೆಯಲ್ಲಿರುವ ಹಣ ಮತ್ತು ಎಲ್ಲ ಹಣಕಾಸು ಮಾಹಿತಿಯೂ ಇದರಲ್ಲಿ ಸೇರಿರಲಿದೆ. ಸೆಪ್ಟಂಬರ್‌ನಲ್ಲಿ ಮೊದಲ ಕಂತಿನಲ್ಲಿ ಮಾಹಿತಿ ಲಭ್ಯವಾಗಲಿದ್ದು, ಅನಂತರ ಪ್ರತಿ ವರ್ಷ ಇದೇ ರೀತಿ ಮಾಹಿತಿ ಭಾರತಕ್ಕೆ ಸ್ವಿಸ್ ಬ್ಯಾಂಕ್‌ಗಳಿಂದ ಸಿಗಲಿದೆ. ಈಗಾಗಲೇ ಆಯ್ದ 100 ಭಾರತೀಯ ವ್ಯಕ್ತಿ ಹಾಗೂ ಸಂಸ್ಥೆಗಳ ಖಾತೆ ಮಾಹಿತಿಯನ್ನು ಸ್ವಿಸ್ ಬ್ಯಾಂಕ್‌ಗಳು ಭಾರತದೊಂದಿಗೆ ಹಂಚಿಕೊಂಡಿವೆ. ಈ ಖಾತೆಗಳ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಿನಂತಿಯ ಮೇರೆಗೆ ಸ್ವಿಸ್ ಬ್ಯಾಂಕ್‌ಗಳು ನೀಡಿದ್ದವು. ಆದರೆ ಈಗ ಸ್ವಯಂಚಾಲಿತ ವ್ಯವಸ್ಥೆ ಯಲ್ಲಿ ಮಾಹಿತಿಯನ್ನು ಸ್ವಿಸ್ ಬ್ಯಾಂಕ್‌ಗಳು ನೀಡಲಿವೆ.
ಇದರಿಂದ ಎಷ್ಟು ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಪ್ರಸ್ತುತ ಖಾತೆ ಹೊಂದಿದ್ದಾರೆ ಎಂಬುದು ತಿಳಿದು ಬರಲಿದ್ದು, ಇವರು ತೆರಿಗೆ ಪಾವತಿ ಮಾಡಿ ವಿದೇಶಕ್ಕೆ ಹಣವನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಭಾರತದ ತೆರಿಗೆ ಅಧಿಕಾರಿಗಳು ಪರಿಶೀಲಿಸಲು ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
MUST WATCH
ಹೊಸ ಸೇರ್ಪಡೆ
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.