ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ
"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯ
Team Udayavani, Dec 1, 2022, 7:40 AM IST
ನವದೆಹಲಿ:ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣ. ಡಿ.1ರ ಗುರುವಾರ ಭಾರತವು ಅಧಿಕೃತವಾಗಿ ಪ್ರತಿಷ್ಠಿತ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಒಂದಿಡೀ ವರ್ಷ “ಜಿ-20 ಸಾರಥ್ಯ’ ಭಾರತದ ಕೈಯ್ಯಲ್ಲಿರಲಿದ್ದು, ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ 2 ದಿನಗಳ ಶೃಂಗವನ್ನೂ ಆಯೋಜಿಸಲಿದೆ. ಇದು ದೇಶದಲ್ಲಿ ನಡೆಯಲಿರುವ ಅತಿದೊಡ್ಡ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿರಲಿದೆ.
ಈ ಶೃಂಗವು “ಅಭೂತಪೂರ್ವ ಮತ್ತು ವಿಶಿಷ್ಟವಾದ ಭಾರತೀಯ ಅಸ್ಮಿತೆ’ಯನ್ನು ಹೊಂದಿರಲಿದ್ದು, ಬ್ರ್ಯಾಂಡ್ ಇಂಡಿಯಾವನ್ನು ಜಗತ್ತಿಗೇ ತೋರಿಸಿಕೊಡುವ ಪ್ರಯತ್ನ ಇದಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ವಾರಾಂತ್ಯದಲ್ಲಿ ಜಿ20ಯ ಸದಸ್ಯ ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳು ಉದಯಪುರದಲ್ಲಿ ಸಭೆ ಸೇರುವ ಸಾಧ್ಯತೆಯಿದೆ.
2023ರ ಶೃಂಗದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ, ಲಡಾಖ್ ಸೇರಿದಂತೆ ದೇಶಾದ್ಯಂತ ಸುಮಾರು 200 ಪ್ರದೇಶಗಳಲ್ಲಿ ಸಿದ್ಧತಾ ಸಭೆಗಳು ನಡೆಯಲಿವೆ.
ಚರ್ಚೆಗೆ ಬರಲಿರುವ ವಿಷಯಗಳು
ಭಯೋತ್ಪಾದನೆ ನಿಗ್ರಹ, ಆರ್ಥಿಕ ಚೇತರಿಕೆ, ಪೂರೈಕೆ ಸರಪಳಿಯಲ್ಲಿನ ಅಡ್ಡಿ ಸರಿಪಡಿಸುವುದು, ಎಲ್ಲರನ್ನೊಳಗೊಂಡ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸುವುದು, ಹವಾಮಾನ ಬದಲಾವಣೆ, ವಿವಿಧ ದೇಶಗಳ ಸಾಲದ ಸಮಸ್ಯೆ, ಬ್ರೆಟ್ಟನ್ ವುಡ್ಸ್ ಇನ್‌ಸ್ಟಿಟ್ಯೂಷನ್ಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನಂಥ ಸಂಸ್ಥೆಗಳಲ್ಲಿ ಸುಧಾರಣೆ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಭಜನೆಗೊಂಡಿರುವ ದೇಶಗಳನ್ನು ಬೆಸೆಯುವ ಸೇತುವಾಗಿ ಕೆಲಸ ಮಾಡುವುದು ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ಇಂದು ಏನೇನು ಕಾರ್ಯಕ್ರಮ?
– ದೇಶದ ಎಫ್ಎಂ ರೇಡಿಯೋಗಳಿಗೆಂದೇ ವಿಶೇಷವಾದ ಜಿ-20 ಜಿಂಗಲ್ ಅನಾವರಣ
– ದೇಶದ 100 ಸ್ಮಾರಕಗಳಲ್ಲಿ “ಜಿ20 ಲೋಗೋ’ದ ವಿಶೇಷ ಲೈಟಿಂಗ್ ವ್ಯವಸ್ಥೆ
– ಶೃಂಗಕ್ಕೆ ಸಂಬಂಧಿಸಿದ ವಿಶೇಷ ಆಡಿಯೋ-ವಿಡಿಯೋ ಕ್ಲಿಪ್‌ಗ್ಳ ಬಿಡುಗಡೆ
– ಜಿ-20 ಲೋಗೋದೊಂದಿಗೆ ಸೆಲ್ಫಿ ಎಂಬ ಸ್ಪರ್ಧೆ
– ನಾಗಾಲ್ಯಾಂಡ್‌ನ ಜನಪ್ರಿಯ ಹಾರ್ನ್ಬಿಲ್ ಉತ್ಸವದ ಪ್ರದರ್ಶನ
– ಪುರಿಯಲ್ಲಿ ಮರಳುಶಿಲ್ಪಿಗಳಿಂದ ಜಿ-20 ಲೋಗೋದ ಮರಳುಶಿಲ್ಪ ರಚನೆ
– ಶಾಲೆಗಳಲ್ಲಿ ಜಿ20 ಕುರಿತ ವಿವಿಧ ಕಾರ್ಯಕ್ರಮಗಳ ಆಯೋಜನೆ
– 75 ಕಾಲೇಜು, ವಿವಿಗಳ ವಿದ್ಯಾರ್ಥಿಗಳೊಂದಿಗೆ ವಿದೇಶಾಂಗ ಸಚಿವ ಜೈಶಂಕರ್ ಸಂವಾದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.