ಮಲ್ಯ ಗಡೀಪಾರು: ನ. 3ರಂದು ಭಾರತದಿಂದ ಸಾಕ್ಷ್ಯಾಧಾರ ಸಲ್ಲಿಕೆ
Team Udayavani, Oct 14, 2017, 9:10 AM IST
ಹೊಸದಿಲ್ಲಿ: ಉದ್ಯಮಿ ವಿಜಯ ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ಭಾರತ ಸರಕಾರ ನ.3ರಂದು ಸಾಕ್ಷ್ಯಾಧಾರಗಳನ್ನು ಬ್ರಿಟನ್ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಬ್ರಿಟನ್ನ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಡಿ.4ಕ್ಕೆ ನಡೆಸಲಿದೆ. ವಿಜಯ್ ಮಲ್ಯ ಗಡೀಪಾರಿಗೆ ಸಂಬಂಧಿಸಿದ ಮನವಿಯನ್ನು ಈ ವರ್ಷದ ಫೆ.17ರಂದು ಹೊಸದಿಲ್ಲಿಯಲ್ಲಿ ಬ್ರಿಟನ್ ಹೈಕಮಿಷನ್ಗೆ ಸಲ್ಲಿಸಲಾಗಿತ್ತು. ಅದರಂತೆ ಈ ವರ್ಷದ ಎ.18ರಂದು ವಿಜಯ್ ಮಲ್ಯರನ್ನು ಬಂಧಿಸಿ ಲಂಡನ್ನಲ್ಲಿನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ನ ಮುಂದೆ ಹಾಜರುಪಡಿಸಲಾಗಿತ್ತಾದರೂ ನ್ಯಾಯಾಲಯ ಷರತ್ತುಬದ್ದ ಜಾಮೀನಿನ ಮೇಲೆ ವಿಜಯ್ ಮಲ್ಯರನ್ನು ಬಿಡುಗಡೆಗೊಳಿಸಿತ್ತು.
ಸೆ.14ರಂದು ನಡೆದ ಎರಡನೇ ಪರಿಶೀಲನ ಸಭೆಯ ವೇಳೆ ಭಾರತ ಸರಕಾರ ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ಕೆಲವೊಂದು ಸಾಕ್ಷ್ಯಾಧಾರಗಳನ್ನು ಬ್ರಿಟನ್ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ಗೆ ಸಲ್ಲಿಸಿತ್ತು. ಅ.4ರಂದು ವಿಜಯ್ ಮಲ್ಯರನ್ನು ಎರಡನೇ ಬಾರಿಗೆ ಬಂಧಿಸಲಾಗಿತ್ತಾದರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.