2 ತಿಂಗಳಲ್ಲಿ ಮೌಂಟ್ ಎವರೆಸ್ಟ್ ಮರು ಅಳತೆ
Team Udayavani, Jan 25, 2017, 3:55 AM IST
ಹೈದರಾಬಾದ್: ನೇಪಾಲ ಭೂಕಂಪನದ ಅನಂತರ ಜಗತ್ತಿನ ಅತೀ ಎತ್ತದ ಶಿಖರ ಮೌಂಟ್ ಎವರೆಸ್ಟ್ ಕುಸಿಯುತ್ತಿದೆ ಎಂಬ ಸಂಗತಿಯನ್ನು ಸರ್ವೇ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಮರು ಅಳತೆಗೆ ಮುಂದಾಗಿದೆ. ಎರಡು ವರ್ಷಗಳ ಹಿಂದೆ ನೇಪಾಲದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಎವರೆಸ್ಟ್‌ನ ಎತ್ತರ ಕುಸಿದಿದೆ ಎಂದು ಹಲವು ಸಂಶೋಧನೆಗಳು ಹೇಳಿದ್ದವು. ಇದನ್ನೇ ಆಧರಿಸಿ ಸರ್ವೇ ಆಫ್ ಇಂಡಿಯಾ ಶಿಖರದ ಮರು ಅಳತೆಗೆ ಸಿದ್ಧವಾಗಿದೆ. ಮರು ಅಳತೆ ಮಾಡಲು 1855ರಲ್ಲಿ ಶಿಖರದ ಎತ್ತರವನ್ನು ನಿಗದಿಪಡಿಸಿದ ಸ್ಥಳಕ್ಕೆ ಶೀಘ್ರ ನಮ್ಮ ತಂಡ ತೆರಳಲಿದೆ. ಈಗಾಗಲೇ ಸಾಕಷ್ಟು ತಂಡಗಳು ಮೌಂಟ್ ಎವರೆಸ್ಟ್ ಅನ್ನು ಅಳೆದಿವೆ. ಆದರೆ, ಸರ್ವೇ ಆಫ್ ಇಂಡಿಯಾ ನಿಗದಿಪಡಿಸಿದ 29,028 ಅಡಿ ಎತ್ತರ ಎಂಬ ಅಳತೆಯನ್ನೇ ಒಪ್ಪಿಕೊಳ್ಳಲಾಗಿದೆ.
ಭೂಕಂಪನದ ಅನಂತರ ಪರ್ವತದ ಕುಸಿತದ ಬಗ್ಗೆ ವಿಜ್ಞಾನಿಗಳು ತೋರಿದ ಸಂಶಯ ಮತ್ತು ಮುಂದಿನ ಅಧ್ಯಯನಗಳಿಗೆ ಸಮೀಕ್ಷೆ ನೆರವಾಗಲಿ ಎಂಬ ಉದ್ದೇಶದಿಂದ ಮರು ಅಳತೆಗೆ ಮುಂದಾಗಿದ್ದೇವೆ’ ಎಂದು ಸರ್ವೇಯರ್ ಜನರಲ್ ಆಫ್ ಇಂಡಿಯಾದ ಸ್ವರ್ಣ ಸುಬ್ಬರಾವ್ ತಿಳಿಸಿದ್ದಾರೆ. ಮರು ಅಳತೆಯ ಯೋಜನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರ ಇಲಾಖೆಯಿಂದ ಎಲ್ಲ ರೀತಿಯ ಅನುಮತಿ ಸಿಕ್ಕಿದೆ. ಒಂದು ವೇಳೆ ನೇಪಾಳದ ಸರ್ವೇಯರ್ ಜನರಲ್ ಜತೆಗೆ ಅವರೊಂದಿಗೆ ಸಭೆ ನಡೆಸುತ್ತೇವೆ. ಇನ್ನೆರಡು ತಿಂಗಳಿನಲ್ಲಿ ನಮ್ಮ ತಂಡವನ್ನು ಮೌಂಟ್ ಎವರೆಸ್ಟ್‌ಗೆ ಕಳುಹಿಸಿಕೊಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪರ್ವತದ ಎತ್ತರ ಅಳೆಯುವ ವಿಧಾನ ಹೇಗೆ?: 1855ರ ಅಳತೆಯ ಅನಂತರ ಪರ್ವತ ಅಳೆಯುವ ಕ್ರಮದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಥಿಯೋಡ್‌ಲೈಟ್ ಸಾಧನವನ್ನು ಸದ್ಯ ಬಳಕೆಯಾಗುತ್ತದೆ. ಥಿಯೋಡ್‌ಲೈಟ್‌ನ ಸುಧಾರಿತ ರೂಪದಲ್ಲಿ ತಿರುಗುವ ಟೆಲಿಸ್ಕೋಪ್ ಅಳವಡಿಸಲಾಗಿದೆ. ಇವುಗಳಲ್ಲಿನ ಎಲೆಕ್ಟ್ರೋ ಆಪ್ಟಿಕಲ್‌ಗಳು ಪರ್ವತದ ಭುಜಗಳನ್ನು ಅಳೆಯುತ್ತಲೇ ಶಿಖರದ ಒಟ್ಟಾರೆ ಎತ್ತರವನ್ನು ನಿಖರವಾಗಿ ನಿರ್ಧರಿಸುತ್ತವೆ. 1855ರಲ್ಲಿ 500 ಕೆಜಿ ತೂಕದ ಥಿಯೋಡ್‌ಲೈಟ್ ಅನ್ನು 12 ಮಂದಿ ಶೆರ್ಫಾಗಳು ಹೊತ್ತೂಯ್ದಿದ್ದರು. ಈಗಿನ ಥಿಯೋಡ್‌ಲೈಟ್‌ಗಳು ಸ್ಮಾರ್ಟ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.