ಉಗ್ರವಾದವನ್ನು ಭಾರತ ಎಂದೆಂದಿಗೂ ಸಹಿಸುವುದಿಲ್ಲ : ಎಂ.ಎಂ. ನರವಾನೆ
72ನೇ ಸೇನಾ ದಿನಾಚರಣೆಯಲ್ಲಿ ಪಾಕ್ ವಿರುದ್ಧ ಎಂ.ಎಂ. ನರವಾನೆ ವಾಗ್ಧಾಳಿ
Team Udayavani, Jan 15, 2020, 8:29 PM IST
– ಉಗ್ರವಾದಕ್ಕೆ ಕುಮ್ಮಕ್ಕು ಕೊಡುವವರನ್ನು ಬಗ್ಗು ಬಡಿಯುವ ಆಯ್ಕೆಗಳಿವೆ
– ಅಗತ್ಯ ಬಂದರೆ ಯಾವುದೇ ಹಿಂಜರಿಕೆಯಿಲ್ಲದೆ ಆಯ್ಕೆಗಳನ್ನು ಬಳಸುತ್ತೇವೆ
– ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಐತಿಹಾಸಿಕ: ನರವಾನೆ
ನವದೆಹಲಿ: “”ಉಗ್ರವಾದವನ್ನು ಭಾರತ ಎಂದೆಂದಿಗೂ ಸಹಿಸುವುದಿಲ್ಲ. ನಮ್ಮ ನೆಲದಲ್ಲಿ ಉಗ್ರವಾದವನ್ನು ಬೆಳೆಸಲು ಇಚ್ಛಿಸುವವರನ್ನು ಮಟ್ಟ ಹಾಕಲು ನಮ್ಮ ಮುಂದೆ ಅನೇಕ ಆಯ್ಕೆಗಳಿವೆ. ಸಂದರ್ಭ ಬಂದಾಗ, ಅವನ್ನು ಯಾವುದೇ ಮುಲಾಜಿಲ್ಲದೆ ನಾವು ಖಂಡಿತವಾಗಿ ಬಳಸುತ್ತೇವೆ”.
ಇದು ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜ. ಎಂ.ಎಂ. ನರವಾನೆ ನೀಡಿರುವ ಖಡಕ್ ಎಚ್ಚರಿಕೆ.
ನವದೆಹಲಿಯ ಜ.ಕೆ.ಎಂ.ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಬುಧವಾರ ನಡೆದ 72ನೇ ಸೇನಾ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಹೆಸರನ್ನೆತ್ತದೆ ವಾಗ್ಧಾಳಿ ನಡೆಸಿದರು.
ತಮ್ಮ ಮಾತುಗಳ ನಡುವೆ, ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. “”ಸಂವಿಧಾನದ 370ನೇ ಕಲಂ ರದ್ದು ಮಾಡಿದ್ದು ಒಂದು ಐತಿಹಾಸಿಕ ನಿರ್ಧಾರ. ಅದರಿಂದಾಗಿ, ಕಣಿವೆ ರಾಜ್ಯವು ಭಾರತದ ಇತರ ರಾಜ್ಯಗಳ ಜತೆಗೆ ಮುಖ್ಯವಾಹಿನಿಗೆ ಸೇರ್ಪಡೆಗೊಂಡಿತು. ಸರ್ಕಾರದ ಐತಿಹಾಸಿಕ ನಿರ್ಧಾರದಿಂದಾಗಿ, ಕಣಿವೆ ರಾಜ್ಯದಲ್ಲಿ ಅತಂತ್ರ ಸ್ಥಿತಿಯನ್ನು ಸೃಷ್ಟಿಸುವ ಹುನ್ನಾರ ನಡೆಸಿದ್ದ ನಮ್ಮ ದೇಶದ ಪಶ್ಚಿಮ ಭಾಗದ ನೆರೆ ರಾಷ್ಟ್ರ ಹಾಗೂ ಅದರ ಮಿತ್ರ ರಾಷ್ಟ್ರಗಳ ಕಾರ್ಯತಂತ್ರವನ್ನು ವಿಫಲಗೊಳಿಸಲಾಗಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಸೇನೆಯ ಪಥ ಸಂಚಲನದಲ್ಲಿ ಧನುಷ್ ಹಾಗೂ ಕೆ-ವಜ್ರ ಫಿರಂಗಿಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.
ಕರ್ನಾಟಕದ ಹೆಮ್ಮೆಯ ಸೇನಾಧಿಕಾರಿ ಜನರಲ್.ಕೆ.ಎಂ. ಕಾರ್ಯಪ್ಪ ಅವರು 1949ರಲ್ಲಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ಜ. 15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ.
ಮಹಿಳಾ ಕ್ಯಾಪ್ಟನ್ ನೇತೃತ್ವ
ಸೇನಾ ದಿನಾಚರಣೆ ಪ್ರಯುಕ್ತ ದೆಹಲಿ ಕಂಟೋನ್ಮೆಂಟ್‌ನ ಕಾರಿಯಪ್ಪ ಮೈದಾನದಲ್ಲಿ ನಡೆದ ಸೇನಾ ಪಥಸಂಚಲನದಲ್ಲಿ ಭಾಗವಹಿಸಿದ್ದ ಪುರುಷ ಸೇನಾ ಸಿಬ್ಬಂದಿಯ ಪಡೆಯನ್ನು ಮಹಿಳಾ ಸೇನಾ ತುಕಡಿಯ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ ಮುನ್ನಡೆಸಿದ್ದು ವಿಶೇಷವಾಗಿತ್ತು. ಭಾರತೀಯ ಸೇನಾ ಪಥ ಸಂಚಲನದ ಇತಿಹಾಸದಲ್ಲಿ ಹೀಗಾಗಿರುವುದು ಇದೇ ಮೊದಲು.
ಯೋಧರ ಸೇವೆಗೆ ಮೆಚ್ಚುಗೆ
ತೀವ್ರ ಹಿಮಪಾತಕ್ಕೆ ತುತ್ತಾಗಿದ್ದ ಬಾರಾಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್ ಪ್ರಾಂತ್ಯದ ದಾದ್ì ಪೋರಾ ಎಂಬ ಹಳ್ಳಿಯಿಂದ ಪ್ರಸವ ವೇದನೆಗೆ ತುತ್ತಾಗಿದ್ದ ಶಮೀಮಾ ಎಂಬ ಮಹಿಳೆಯೊಬ್ಬರನ್ನು , ಆ ಪ್ರಾಂತ್ಯದಲ್ಲಿ ಸೊಂಟದವರೆಗಿನ ಹಿಮ ಬಿದ್ದಿದ್ದ ಪರಿಸ್ಥಿತಿಯಲ್ಲಿಯೂ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಬಂದು ಬಾರಾಮುಲ್ಲಾ ಆಸ್ಪತ್ರೆಗೆ ದಾಖಲಿಸಿ ತಾಯಿ, ಮಗುವಿನ ಜೀವ ಉಳಿಸಿರುವ ಭಾರತೀಯ ಸೇನೆಯ ಖೈರಿಯತ್ (ಕುಶಲೋಪರಿ) ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮೋದಿ ಶ್ಲಾಘನೆ: ಮಹಿಳೆಯನ್ನು ಯೋಧರು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರಮ ಮೋದಿ ಕೂಡ ಆ ತುಣುಕನ್ನು ಟ್ವೀಟ್ ಮಾಡಿ ಯೋಧರ ಸೇವೆಯನ್ನು ಶ್ಲಾ ಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.