ಓಮಿಕ್ರಾನ್ ನ ಬಿಎಫ್ 7 ಉಪತಳಿ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಬೇಡಿ; ಚೀನ ಸ್ಥಿತಿ ಭಾರತಕ್ಕೆ ಎದುರಾಗಲ್ಲ…
ಔಷಧ ಮತ್ತು ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಬೇಕು
Team Udayavani, Dec 24, 2022, 12:22 PM IST
ನವದೆಹಲಿ: ಚೀನಾ ಜನರನ್ನು ತತ್ತರಿಸುವಂತೆ ಮಾಡಿರುವ ಬಿಎಫ್ 7 ಕೋವಿಡ್ ಉಪತಳಿಯು ಓಮಿಕ್ರಾನ್ ಇತರ ತಳಿಯಂತೆಯೇ ಅಷ್ಟೇ. ಬಿಎಫ್ 7 ವೇಗವಾಗಿ ಹರಡಬಲ್ಲದು, ಆದರೆ ಇದು ತೀವ್ರ ಸ್ವರೂಪದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಮಾಜಿ ವಿಜ್ಞಾನಿ ನ್ಯೂಸ್ 18 ಡಾಟ್ ಕಾಮ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ದುಬಾರಿ ಓಲಾ ಸ್ಕೂಟರ್ ಬಳಸಿಕೊಂಡು ಕ್ರಿಕೆಟ್ ಕಾಮೆಂಟ್ರಿ ಮಾಡಿದ ವ್ಯಕ್ತಿ.! ವಿಡಿಯೋ ವೈರಲ್
ಐಸಿಎಂಆರ್ ನ ಡಾ.ಸಮೀರನ್ ಪಾಂಡಾ ಅವರ ಪ್ರಕಾರ, ಬಿಎಫ್ 7 ಕೋವಿಡ್ ಉಪತಳಿಯ ಮಾರಕತೆಯ ಬಗ್ಗೆ ತಪ್ಪು ಮಾಹಿತಿ ಹರಡದಿರುವಂತೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕೆಂದು ತಿಳಿಸಿದ್ದಾರೆ.
ಆಸ್ಪತ್ರೆಯ ಹಾಸಿಗೆಗಳು, ಔಷಧ ಮತ್ತು ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಬೇಕು ಎಂದಿರುವ ಡಾ.ಪಾಂಡಾ, ಮುಖ್ಯವಾಗಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ನಿಗಾ ಇಡಬೇಕೆಂದು ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
ಬಿಎಫ್ 7 ಕೋವಿಡ್ ಉಪತಳಿಯ ಕುರಿತು ಸಾಮಾಜಿಕ ಜಾಲತಾಣ, ವಾಟ್ಸಪ್ ಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಸಂದೇಶಗಳಿಂದ ಜನರು ಭೀತಿಗೆ ಒಳಗಾಗುವಂತಾಗಿದೆ ಎಂದು ಡಾ.ಪಾಂಡಾ ತಿಳಿಸಿದ್ದಾರೆ.
ಜನರಲ್ಲಿ ಅನಾವಶ್ಯಕವಾಗಿ ಗೊಂದಲ, ಭೀತಿ ಮೂಡಿಸುವ ಸುದ್ದಿಗಳ ಕುರಿತು ಫ್ಯಾಕ್ಟ್ ಚೆಕಿಂಗ್ ಸಂವಹನದ ಮೂಲಕ ಅನುಮಾನವನ್ನು ಹೋಗಲಾಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕಾಗಿದೆ ಎಂದು ಡಾ.ಪಾಂಡಾ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.