ಚಂದ್ರನತ್ತ ಭಾರತೀಯ ನಟ ದೇವ್!
ಜಪಾನ್ ಉದ್ಯಮಿ ಜತೆ ಪಯಣಿಸಲಿರುವ 8 ಮಂದಿ ಪೈಕಿ ಜೋಷಿಯೂ ಒಬ್ಬರು
Team Udayavani, Dec 10, 2022, 6:50 AM IST
ನವದೆಹಲಿ: ಜಪಾನ್‌ನ ಕೋಟ್ಯಧಿಪತಿ ಯುಸಾಕು ಮಝಾವಾ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಚಂದ್ರನತ್ತ ನಾಗರಿಕರೇ ಪ್ರಯಾಣ ಬೆಳೆಸಲಿದ್ದಾರೆ.
“ಡಿಯರ್ ಮೂನ್’ ಎಂಬ ಹೆಸರಿನ ಈ ಯೋಜನೆ ಮುಂದಿನ ವರ್ಷ ಸಾಕಾರಗೊಳ್ಳಲಿದೆ. ತಮ್ಮೊಂದಿಗೆ ಚಂದಿರನ ಕಡೆಗೆ ಪ್ರಯಾಣ ಬೆಳೆಸಲಿರುವ 8 ಮಂದಿಯ ಪಟ್ಟಿಯನ್ನು ಯುಸಾಕು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಟರೊಬ್ಬರ ಹೆಸರಿದೆ.
ಅವರ್ಯಾರು ಗೊತ್ತಾ?
ಗುಜರಾತ್‌ನ ನಟ ದೇವ್ ಡಿ. ಜೋಷಿ. ಗುಜರಾತ್‌ನಲ್ಲೇ ಹುಟ್ಟಿರುವ ಜೋಷಿ ಅವರು 20ಕ್ಕೂ ಹೆಚ್ಚು ಗುಜರಾತಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ, ಸೋನಿ ಸಾಬ್‌ನ ಬಾಲ್ ವೀರ್ ಮತ್ತು ಬಾಲ್‌ವೀರ್ ರಿಟರ್ನ್Õ ಶೋಗಳಲ್ಲಿ ಬಾಲವೀರನ ಪಾತ್ರಧಾರಿಯಾಗಿ ಅವರು ಮನೆ ಮಾತಾಗಿದ್ದಾರೆ.
ಯಾರ್ಯಾರಿದ್ದಾರೆ?
ಜೋಷಿ ಮಾತ್ರವಲ್ಲದೇ ಅಮೆರಿಕದ ಡಿಜೆ ಸ್ಟೀವ್ ಆಕಿ, ಕೊರಿಯಾದ ಸಂಗೀತಗಾರ ಚೋಯಿ ಸಂಗ್ ಹ್ಯುನ್, ಐರ್ಲೆಂಡ್‌ನ ಫೋಟೋಗ್ರಾಫಿಕ್ ಆರ್ಟಿಸ್ಟ್ ಆ್ಯಡಮ್, ಯೂಟ್ಯೂಬರ್ ಟಿಮ್ ಡೋಡ್, ಅಮೆರಿಕದ ಚಿತ್ರ ನಿರ್ದೇಶಕ ಬ್ರೆಂಡನ್ ಹಾಲ್ ಸೇರಿದಂತೆ ವಿವಿಧ ಕಲಾತ್ಮಕ ಕ್ಷೇತ್ರಗಳ 8 ಮಂದಿ ಈ ತಂಡದಲ್ಲಿದ್ದಾರೆ.
ಪಯಣ ಹೇಗೆ?
ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ 2023ರಲ್ಲಿ ಇವರೆಲ್ಲರೂ ಚಂದ್ರನತ್ತ ಹಾರಲಿದ್ದಾರೆ. ಇದು ಒಂದು ವಾರದ ಪಯಣವಾಗಿರಲಿದ್ದು, ರಾಕೆಟ್ ಚಂದ್ರನಲ್ಲಿಗೆ ಹೋಗಿ, ಎಲ್ಲರನ್ನೂ ವಾಪಸ್ ಕರೆತರಲಿದೆ. 2018ರಲ್ಲೇ ಯುಸಾಕು ಅವರು ಈ ರಾಕೆಟ್‌ನ ಎಲ್ಲ ಸೀಟುಗಳನ್ನೂ ಕಾಯ್ದಿರಿಸಿದ್ದರು. ಜತೆಗೆ, ನನ್ನೊಂದಿಗೆ ಪಯಣಿಸಲಿರುವ 8 ಮಂದಿಯನ್ನು ನಾನೇ ಜಗತ್ತಿನ ಬೇರೆ ಬೇರೆ ಮೂಲೆಗಳಿಂದ ಆಯ್ಕೆ ಮಾಡಲಿದ್ದೇನೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.