ಗಡಿಯತ್ತ ಟ್ಯಾಂಕರ್‌ಗಟ್ಟಲೆ ತೈಲ ರವಾನೆ ; ಸೇನೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಈ ಕ್ರಮ
ಚೀನ ವಸ್ತು ಆಮದು ತಡೆಗೆ ಸಲಹೆ ಕೋರಿದ ಪಿಎಂಒ
Team Udayavani, Jun 22, 2020, 7:49 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತ – ಚೀನ ಗಡಿಯಲ್ಲಿ ಏರ್ಪಟ್ಟಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಭಾರತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾರಂಭಿಸಿದೆ.
ಗಡಿಯಲ್ಲಿ ಚೀನ ಕಡೆಯಿಂದ ಆಗಿರುವ ಹೆಚ್ಚುವರಿ ಸೇನೆ ನಿಯೋಜನೆಗೆ ಪ್ರತಿಯಾಗಿ ಭಾರತವೂ ಹೆಚ್ಚುವರಿ ಸೇನೆ ನಿಯೋಜನೆಗೆ ಮುಂದಾಗಿದೆ.
ಮತ್ತೊಂದೆಡೆ, ವಾಯುಪಡೆಯು ಲಡಾಖ್ ಹಾಗೂ ಲೇಹ್ನಲ್ಲಿರುವ ವಾಯು ನೆಲೆಗಳಿಗೆ ಸುಖೋಯ್ ಮುಂತಾದ ಯುದ್ಧ ವಿಮಾನಗಳನ್ನು ರವಾನಿಸಿದೆ. ಇದೆಲ್ಲದರ ಜೊತೆಯಲ್ಲೇ, ದೇಶೀಯ ತೈಲ ಕಂಪನಿಗಳು ಲಡಾಖ್‌ನಲ್ಲಿರುವ ಸೇನಾ ತೈಲ ಭಂಡಾರಕ್ಕೆ ಅಪಾರ ಪ್ರಮಾಣದ ತೈಲವನ್ನು ಸರಬರಾಜು ಮಾಡಲಾರಂಭಿಸಿವೆ.
ಭಾರತೀಯ ವಾಯುಪಡೆ, ಲೇಹ್ ಹಾಗೂ ಶ್ರೀನಗರದಲ್ಲಿರುವ ತನ್ನ ವಾಯುನೆಲೆಗಳಿಗೆ ಸುಖೋಯ್ 30 ಎಂಕೆಐ, ಜಾಗ್ವಾರ್, ಮಿರಾಜ್ 2000 ಯುದ್ಧ ವಿಮಾನಗಳನ್ನು ರವಾನಿಸಿದೆ. ಆ ವಿಮಾನಗಳಿಗಾಗಿ ಲಡಾಖ್‌ನಲ್ಲಿರುವ ತೈಲ ಭಂಡಾರಕ್ಕೆ ಅಗತ್ಯವಿರುವ ತೈಲವನ್ನು ರವಾನಿಸಲು ತೈಲ ಕಂಪನಿಗಳು ನಿರತವಾಗಿವೆ. ಜೊತೆಯಲ್ಲೇ, ಜೆಟ್ ಯುದ್ಧ ವಿಮಾನಗಳಿಗೆ ಬೇಕಾಗುವ ಇಂಧನವನ್ನು ಅಗಾಧ ಪ್ರಮಾಣದಲ್ಲಿ ಲಡಾಖ್‌ಗೆ ಕಳುಹಿಸಲಾಗುತ್ತಿದೆ.
ದಿನವೊಂದಕ್ಕೆ 100 ಟ್ಯಾಂಕರ್ ತೈಲ: ಜಮ್ಮು, ಜಲಂಧರ್, ಸಂಗ್ರೂರ್‌ನಲ್ಲಿರುವ ಇಂಡಿಯನ್ ಆಯಿಲ್ ತೈಲಾಗಾರಗಳಿಂದ ದಿನಕ್ಕೆ ಏನಿಲ್ಲವೆಂದರೂ, 100 ಟ್ಯಾಂಕರ್‌ಗಳಷ್ಟು ತೈಲ ರವಾನೆಯಾಗುತ್ತಿದೆ. ಡೀಸೆಲ್, ಜೆಟ್ ಇಂಧನ, ಸೀಮೆ ಎಣ್ಣೆ, ಪೆಟ್ರೋಲನ್ನು ಕಾರ್ಗಿಲ್, ಲೇಹ್ ಹಾಗೂ ಗಡಿ ರೇಖೆಯ ಸನಿಹಕ್ಕೆ ಕೊಂಡೊಯ್ಯಲಾಗುತ್ತಿದೆ. ಪಂಜಾಬ್‌ನ ಭಟಿಂಡಾದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ತೈಲಾಗಾರದಿಂದಲೂ ತೈಲ ರವಾನೆಯಾಗುತ್ತಿದೆ.
ಆಮದು ತಡೆಗೆ ಕ್ರಮ: ಹೆಚ್ಚುತ್ತಿರುವ ಚೀನ ಸಾಮಗ್ರಿ ಬಹಿಷ್ಕಾರದ ಕೂಗಿಗೆ ಸ್ಪಂದಿಸಿರುವ ಕೇಂದ್ರ ಸರಕಾರ, ಈ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯನ್ನಿಟ್ಟಿದೆ. ದೇಶೀಯ ಮಾರುಕಟ್ಟೆಯ ವರ್ತಕರ ಸಮೂಹಕ್ಕೆ ಸೂಚನೆ ರವಾನಿಸಿರುವ ಪ್ರಧಾನಿ ಕಚೇರಿ (ಪಿಎಂಒ), ಚೀನದಿಂದ ಭಾರತಕ್ಕೆ ಅಗ್ಗದ ರೂಪದಲ್ಲಿ ಯಾವ ಸಾಮಗ್ರಿಗಳು ಆಮದಾಗುತ್ತಿವೆ, ಅದೇ ಮಾದರಿಯ ಭಾರತೀಯ ಸಾಮಗ್ರಿಗಳಿಗೂ, ಚೀನ ಸಾಮಗ್ರಿಗಳಿಗೆ ಬೆಲೆ ವ್ಯತ್ಯಾಸವೇನಿದೆ, ಭಾರತೀಯ ಸಾಮಗ್ರಿಗಳ ಮೇಲೆ ತೆರಿಗೆಯಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿದರೆ ಅದೇ ಸಾಮಗ್ರಿಗಳನ್ನು ಇಲ್ಲಿಂದಲೇ ಪಡೆಯಬಹುದೇ ಎಂಬ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಿದೆ.
ಇದಲ್ಲದೆ, ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವ ಜೊತೆಯಲ್ಲೇ, ಕಚ್ಚಾ ವಸ್ತುಗಳ ಮೇಲೆ ನಾವು ಚೀನ ಉತ್ಪಾದನಾ ರಂಗವನ್ನು ಅವಲಂಬಿಸುವುದನ್ನೂ ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲು ಇದು ನೆರವಾಗುತ್ತದೆ ಎಂದು ಪ್ರಧಾನಿಯವರ ಕಚೇರಿ ಮೂಲಗಳು ತಿಳಿಸಿವೆ.
ಹೃದಯ ವೈಶಾಲ್ಯ: ಗಾಲ್ವನ್ ಘರ್ಷಣೆ ನಡೆದ ಮರುದಿನ ಅಂದರೆ ಜೂ. 16ರಂದು ಹಿಂಸಾಚಾರ ನಡೆದಿದ್ದ ಜಾಗದಲ್ಲಿ ಭಾರತೀಯ ಯೋಧರು ಶತ್ರುಗಳ ಬಗ್ಗೆಯೂ ಹೃದಯ ವೈಶಾಲ್ಯತೆ ಮೆರೆದಿದ್ದರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಜೂ. 15ರ ತಡರಾತ್ರಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. 40ಕ್ಕೂ ಹೆಚ್ಚು ಚೀನ ಸೈನಿಕರು ಸಾವನ್ನಪ್ಪಿದ್ದರು.
ಮರುದಿನ ಬೆಳಗ್ಗೆ ಗಮನಿಸಿದಾಗ ಘರ್ಷಣೆ ನಡೆದ ಜಾಗದಲ್ಲಿ ಎಲ್ಲೆಂದರಲ್ಲಿ ಚೀನ ಸೈನಿಕರ ಶವಗಳು ಬಿದ್ದಿದ್ದವು.
ಚೀನ ಸೈನಿಕರ ವರ್ತನೆ ಬಗ್ಗೆ ರಕ್ತ ಕುದಿಯುತ್ತಿದ್ದರೂ, ಆ ಸಂದರ್ಭದಲ್ಲಿ ಮಾನವೀಯ ದೃಷ್ಟಿ ಹರಿಸಿದ ಭಾರತೀಯ ಸೈನಿಕರು, ಆ ಶವಗಳನ್ನು ಚೀನ ಸೇನೆಗೆ ಒಪ್ಪಿಸಿದರು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಕಾರು-ಮೊಪೆಡ್ ಪರಸ್ಪರ ಢಿಕ್ಕಿ: ಗಾಯ
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.