ಸೇನೆಗೆ ಜೋರಾವರ್ ಬಲ; ದೇಶದ ಸೇನೆಗೆ ಶೀಘ್ರವೇ ಸೇರ್ಪಡೆ; ಏನಿದು “ಜೋರಾವರ್’?
Team Udayavani, Aug 27, 2022, 7:44 AM IST
ಹೊಸದಿಲ್ಲಿ: ದೇಶಕ್ಕೆ ಚೀನ ಮತ್ತು ಪಾಕಿಸ್ಥಾನದಿಂದ ಯಾವತ್ತೂ ಅಪಾಯ ಇರುವುದರಿಂದ ಸೇನೆಯನ್ನು ಆಧು ನೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ಹಲವು ಹೆಜ್ಜೆಗಳನ್ನು ಇರಿಸಿದೆ.
ಪರ್ವತ ಪ್ರದೇಶಗಳಲ್ಲಿ ಯುದ್ಧ ನಡೆಸುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಭೂಸೇನೆ “ಜೋರಾವರ್’ ಎಂಬ ಹಗುರ ಯುದ್ಧ ಟ್ಯಾಂಕ್ಗಳನ್ನು ಸೇರ್ಪಡೆಗೊಳಿಸಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಹಲವು ವರ್ಷಗಳು ಬೇಕಾಗುವ ಸಾಧ್ಯತೆ ಇದೆ.
ಹಗುರವಾಗಿರುವ ಈ ಯುದ್ಧ ಟ್ಯಾಂಕನ್ನು ಸ್ವದೇಶೀಯವಾಗಿಯೇ ನಿರ್ಮಿಸಲು ಉದ್ದೇಶಿಸಲಾಗಿದೆ. ಪೂರ್ವ ಲಡಾಖ್ನಲ್ಲಿ ಚೀನ ಸೇನೆಯ ತಂಟೆ ಉಂಟಾದ ಬಳಿಕ ಭೂಸೇನೆಗೆ ಇಂಥ ಅತ್ಯಾಧುನಿಕ ಯುದ್ಧ ಸೌಕರ್ಯ ಹೊಂದುವುದು ಅನಿವಾರ್ಯವೇ ಆಗಿದೆ. ಏಕೆಂದರೆ ಗಾಲ್ವನ್ ಗಲಾಟೆಯ ಬಳಿಕ ಚೀನ ಸರಕಾರ ಕೂಡ ಹೆಚ್ಚಿನ ಸಂಖ್ಯೆಯ ಸೇನೆಯನ್ನು ನಿಯೋಜಿಸಿದೆ.
ಮುಂದಿನ ತಿಂಗಳು ಸಭೆ: ಮುಂದಿನ ತಿಂಗಳು ರಕ್ಷಣ ಖರೀದಿ ಸಮಿತಿ ಸಭೆ (ಡಿಎಸಿ) ನಡೆಯಲಿದ್ದು, ಅದರಲ್ಲಿ “ಜೋರಾವರ್’ ಅನ್ನು ಸೇರ್ಪಡೆ ಮಾಡುವ ಬಗ್ಗೆ ತೀರ್ಮಾನವಾಗಲಿದೆ.
ಏನಿದು “ಜೋರಾವರ್’?
25 ಟನ್ ಸಾಮರ್ಥ್ಯ ಇರುವ ಯುದ್ಧ ಟ್ಯಾಂಕ್. ಸಾಮಾನ್ಯವಾಗಿ ಬಳಕೆಯಾಗುವಂಥ ಟ್ಯಾಂಕ್ನಂತೆಯೇ ಕೆಲಸ ಮಾಡಲಿದೆ. ಒಂದು ಕಾಲದಲ್ಲಿ ಜಮ್ಮುವನ್ನು ಆಳುತ್ತಿದ್ದ ರಾಜಾ ಗುಲಾಬ್ ಸಿಂಗ್ನ ಸೇನಾಪತಿ ಜೋರಾವರ್ ಸಿಂಗ್ ಖಲೂರಿಯಾ ಅವರ ಹೆಸರನ್ನು ಯೋಜನೆಗೆ ಇರಿಸಲಾಗಿದೆ. ಖಲೂರಿಯಾ ಅವರು ಲಡಾಖ್ ಅನ್ನು ಗೆದ್ದು ಸಾಮರ್ಥ್ಯ ಮೆರೆದಿದ್ದರು. ಸುಮಾರು 350 ಟ್ಯಾಂಕ್ಗಳನ್ನು ಉತ್ಪಾದಿಸುವ ಬಗ್ಗೆ ಕೇಂದ್ರ ಸರಕಾರ ಗುರಿ ಹಾಕಿಕೊಂಡಿದೆ. ಅದು ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಯೂ ಕೆಲಸ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.