ಸೇನೆಗೆ 3,000ಕ್ಕೂ ಅಧಿಕ ಮಿಲಾನ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್
Team Udayavani, Jan 21, 2019, 9:46 AM IST
ಹೊಸದಿಲ್ಲಿ : ಭಾರತೀಯ ಸೇನೆಯ ಪದಾತಿದಳವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಫ್ರಾನ್ಸ್ನಿಂದ 1,000 ಕೋಟಿ ರೂ. ವೆಚ್ಚದಲ್ಲಿ 3,000ಕ್ಕೂ ಅಧಿಕ ಮಿಲಾನ್ 2ಟಿ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.
ಈ ಖರೀದಿ ಪ್ರಸ್ತಾವವು ರಕ್ಷಣಾ ಸಚಿವಾಲಯದ ಉಚ್ಚ ಮಟ್ಟದ ಸಭೆಯಲ್ಲಿ ಶೀಘ್ರವೇ ಚರ್ಚೆಗೆ ಬರಲಿದೆ. ಟ್ಯಾಂಕ್ ನಿಗ್ರಹ ನಿರ್ದೇಶಿತ ಕ್ಷಿಪಣಿಗಳನ್ನು ಖರೀದಿಸುವಲ್ಲಿ ಫ್ರೆಂಚ್ ಸಂಸ್ಥೆಯೊಂದಿಗೆ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಭಾಗೀದಾರಿಕೆಯನ್ನು ಹೊಂದಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿವೆ.
ನಿಜಕ್ಕಾದರೆ ಭಾರತೀಯ ಸೇನೆಗೆ ವಿವಿಧ ಬಗೆಯ ಸುಮಾರು 7,000 ಟ್ಯಾಂಕ್ ನಿಗ್ರಹ ನಿರ್ದೇಶಿತ ಕ್ಷಿಪಣಿಗಳು ಬೇಕಿವೆ. ಜತೆಗೆ ಸುಮಾರು 850 ವಿವಿಧ ನಮೂನೆಯ ಲಾಂಚರ್ಗಳು ಬೇಕಿವೆ.
ಭಾರತೀಯ ಸೇನೆ ಮೂರನೇ ತಲೆಮಾರಿನ ಎಟಿಜಿಂ ಗಳನ್ನು ಖರೀದಿಸಲು ಬಯಸಿದೆ. ಈಗ ಸೇನೆಯ ಬಳಿಯಿರುವ ಮಿಲಾನ್ 2ಟಿ ಮತ್ತು ಕಾಂಕರ್ ಎಟಿಜಿಎಂ ಗಳಿಗಿಂತ ದೂರ ವ್ಯಾಪ್ತಿ ಹೊಂದಿರುವ ಮೂರನೇ ತಲೆಮಾರಿನ ಎಟಿಜಿಎಂ ಗಳು ಹೆಚ್ಚು ಪರಿಣಾಮಕಾರಿಯೂ ಅಧಿಕ ದಾಳಿ ಸಾಮರ್ಥ್ಯದವುಗಳೂ ಆಗಿರುತ್ತವೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.