ಜ.15ಕ್ಕೆ ಸೇನೆಯ ಹೊಸ ಸಮವಸ್ತ್ರ ಅನಾವರಣ
Team Udayavani, Jan 12, 2022, 7:30 AM IST
ನವದೆಹಲಿ: ಭಾರತೀಯ ಸೇನೆಯ ಯೋಧರಿಗೆಂದು ತಯಾರಿಸಲಾಗಿರುವ ನೂತನ ಸಮವಸ್ತ್ರವನ್ನು ಸೇನಾ ದಿನವಾದ ಜ.15ರಂದು ಅನಾವರಣಗೊಳಿಸಲಾಗುವುದು. ನಂತರ ಹಂತ ಹಂತವಾಗಿ ಎಲ್ಲ ಯೋಧರಿಗೆ ವಿತರಿಸಲಾಗುವುದು.
ನೂತನ ಸಮವಸ್ತ್ರ ತಯಾರಿಕೆಗೆಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು 15 ಮರೆಮಾಚುವಂತಹ ವಿನ್ಯಾಸಗಳು, ನಾಲ್ಕು ಬಗೆಯ ಡಿಸೈನ್‌ಗಳು ಮತ್ತು ಎಂಟು ಬಗೆಯ ಬಟ್ಟೆಯ ಆಯ್ಕೆಯನ್ನು ಸೇನೆಗೆ ಕೊಟ್ಟಿತ್ತು. ಅದರಲ್ಲಿ ಸೇನೆ 4 ಮರೆಮಾಚುವಂತಹ ವಿನ್ಯಾಸಗಳು, 3 ಡಿಸೈನ್ ಮತ್ತು 5 ಬಟ್ಟೆ ಮಾದರಿಯನ್ನು ಆಯ್ಕೆ ಮಾಡಿತ್ತು. ಈ ಬಗೆಯ ಸಮವಸ್ತ್ರಗಳನ್ನು 150 ಯೋಧರಿಗೆ ತೊಡಿಸಿ, ಅವರಿಂದ ಪ್ರತಿಕ್ರಿಯೆ ಪಡೆದ ನಂತರ ಸಮವಸ್ತ್ರ ಮಾದರಿಯನ್ನು ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿ:ಗೂಗಲ್ ಸಂಸ್ಥೆಯ ಜಿ-ಮೇಲ್ ಆ್ಯಪ್ ಸಾವಿರ ಕೋಟಿ ಡೌನ್‌ಲೋಡ್!
ಸಮವಸ್ತ್ರವನ್ನು ಹತ್ತಿ ಮತ್ತು ಪಾಲಿಸ್ಟರ್‌ನ್ನು 70:30 ಪ್ರಮಾಣದಲ್ಲಿ ಹಾಕಿ ತಯಾರಿಸಲಾಗಿದೆ. ಜಾಕೆಟ್ ಅನ್ನೂ ಒಳಗೊಂಡಿರುವ ಸಮವಸ್ತ್ರ ಕಡಿಮೆ ತೂಕದ್ದಾಗಿರಲಿದೆ. ಈಗಿನ ಸಮವಸ್ತ್ರ ಎಲ್ಲೆಡೆ ಸಿಗುವಂತೆ, ಈ ಸಮವಸ್ತ್ರ ಎಲ್ಲೆಡೆ ಸಿಗುವುದಿಲ್ಲ. ಎಲ್ಲ ಯೋಧರಿಗೆ ಸಮವಸ್ತ್ರ ವಿತರಿಸಲು 2 ವರ್ಷಗಳ ಕಾಲಾವಕಾಶ ಬೇಕಾಗಲಿದೆ ಎಂದೂ ಮಾಹಿತಿ ಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.