ದಶಕದಿಂದ ನಡೆದಿತ್ತು ಸಿದ್ಧತೆ

ದಾಳಿ ಸಾಧ್ಯತೆಗೆ ಪಾಕ್‌-ಚೀನ ಜತೆಗೂಡುವ ಬಗ್ಗೆ ಊಹಿಸಿದ್ದ ಸಂಸತ್‌ ಸಮಿತಿ ವರದಿ

Team Udayavani, Jul 3, 2020, 7:21 AM IST

Indo-China

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಡಾಖ್‌/ಹೊಸದಿಲ್ಲಿ: ಚೀನ, ಪಾಕ್‌ ಏಕಕಾಲದಲ್ಲಿ ಯುದ್ಧಕ್ಕೆ ಧಾವಿಸಿ ಬಂದರೂ ಎರಡೂ ಪಡೆಗಳನ್ನೂ ಹುಟ್ಟಡಗಿಸಲು ಭಾರತೀಯ ಸೇನೆ ಸಜ್ಜಾಗಿದೆ.

10 ವರ್ಷಗಳಿಂದ ಭಾರತ ಉಭಯ ನೆರೆ ರಾಷ್ಟ್ರಗಳ ಆಕ್ರಮಣಕ್ಕೆ ಉತ್ತರ ಕೊಡಲು ಸೇನೆಯನ್ನು ಬಲಪಡಿಸಿಕೊಂಡು ಬಂದಿದೆ.

ಚೀನ- ಪಾಕ್‌ ಗೆಳೆತನ ಸಾಧಿಸಿ ಭಾರತದ ಮೇಲೆ ಯುದ್ಧ ಸಾರಬಹುದು ಎಂಬ ವರದಿಯನ್ನು ಸಂಸದೀಯ ಸ್ಥಾಯಿ ಸಮಿತಿ ದಶಕದ ಹಿಂದೆಯೇ ವರದಿ ತಯಾರಿಸಿತ್ತು.

ಭಾರತದಲ್ಲಿನ ಚೀನ ವೀಕ್ಷ­ಕರೂ ಇದನ್ನೇ ಎಚ್ಚರಿಸುತ್ತಾ ಬಂದಿದ್ದರು. 2014­ರಲ್ಲೂ ವಾಯುಸೇನೆಯ ಉನ್ನತ ಅಧಿಕಾರಿ­ಯೊಬ್ಬರು ‘ಚೀನ ಲಡಾಖ್‌ ಗಡಿಯಲ್ಲಿ ಮುನ್ನುಗ್ಗಿ ಬಂದರೆ ಅದೇ ವೇಳೆ ಪಾಕ್‌ ಹಗೆತನ ಸಾಧಿಸ­ಬಹುದು’ ಎಂದು ಎಚ್ಚರಿಸಿ ದ್ದರು. ಆದರೆ ಭಾರತ- ಪಾಕ್‌ ನಡುವೆ ಉದ್ವಿಗ್ನತೆ ಸಂಭವಿ­ಸಿದರೆ ಚೀನ ಆಕ್ರಮಣಕ್ಕೆ ಇಳಿವ ಸಾಧ್ಯತೆ ಕಡಿಮೆ ಎಂದಿದ್ದರು.

ಯುದ್ಧ ಸಾಧ್ಯತೆ ಕಡಿಮೆ: “ಪರಮಾಣು ಸಶಸ್ತ್ರ ಹೊಂದಿದ ಮೂರೂ ರಾಷ್ಟ್ರಗಳು ಒಂದೇ ಸಮಯ­ದಲ್ಲಿ ಯುದ್ಧಕ್ಕಿಳಿಯುವುದಿಲ್ಲ. ಆದರೆ, ಚೀನ ಮತ್ತು ಪಾಕಿಸ್ಥಾನಗಳು ಆಪ್ತ ರೀತಿಯಲ್ಲಿ ಮಿಲಿಟರಿ ಸಂಪರ್ಕವನ್ನು ಹೊಂದಿವೆ. ಭಾರತೀಯ ಪಡೆ ಈ ಸಂಭಾವ್ಯ ದಾಳಿಗೆ ಅಗತ್ಯ ತಯಾರಿ ಮಾಡಿಕೊಂಡಿರಬೇಕು’ ಎಂದು ನಿವೃತ್ತ ಕಮಾಂಡರ್‌ ಲೆ|ಜ| ಡಿ.ಎಸ್‌. ಹೂಡಾ ಸಲಹೆ ನೀಡಿದ್ದಾರೆ.

ಹುತಾತ್ಮರಿಗೆ ವೈಟ್‌ಹೌಸ್‌ ಸಂತಾಪ: ಗಾಲ್ವಾನ್‌ನಲ್ಲಿ ಹುತಾತ್ಮರಾದ 20 ಭಾರತೀಯ ವೀರ ಯೋಧರಿಗೆ ವೈಟ್‌ಹೌಸ್‌ ಸಂತಾಪ ಸೂಚಿಸಿದೆ.

ಮುಂದೂಡಿಕೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಶುಕ್ರವಾರದ ಲಡಾಖ್‌ ಭೇಟಿ ಮುಂದೂಡ­ಲ್ಪಟ್ಟಿದೆ. ಶೀಘ್ರವೇ ಹೊಸ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

ಚೀನ ಮೇಲೆ ಡಿಜಿಟಲ್‌ ಸ್ಟ್ರೈಕ್‌: ರವಿಶಂಕರ್‌
ದೇಶದ ಜನರ ಸುರಕ್ಷತೆಗಾಗಿ 59 ಚೀನೀ ಆ್ಯಪ್ ಗಳಳನ್ನು ನಿಷೇಧಿಸಿದ್ದೇವೆ. ಇದು ಚೀನದ ಮೇಲೆ ಭಾರತ ಕೈಗೊಂಡಿರುವ ಡಿಜಿಟಲ್‌ ಸ್ಟ್ರೈಕ್‌ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ವ್ಯಾಖ್ಯಾನಿಸಿದ್ದಾರೆ. ‘ಈಗ ನೀವು ಎರಡು “ಸಿ’ಗಳನ್ನು ಕೇಳುತ್ತಿದ್ದೀರಿ. ಒಂದು ಕೋವಿಡ್ 19 ವೈರಸ್‌ ಮತ್ತೂಂದು ಚೀನ. ನಾವು ಶಾಂತಿಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಚರ್ಚೆಯ ಮೂಲಕ ಗಡಿಬಿಕ್ಕಟ್ಟಿಗೆ ಪರಿಹಾರ ಬಯಸುತ್ತಿದ್ದೇವೆ. ಆದರೆ ಯಾರಾದರೂ ದುಷ್ಟರು ವಿನಾಕಾರಣ ನಮ್ಮ ಮೇಲೆ ಕಣ್ಣುಹಾಕಿದರೆ ಅತ್ಯಂತ ಸಮರ್ಥವಾಗಿ ಪ್ರತ್ಯುತ್ತರ ನೀಡುತ್ತೇವೆ’ ಎಂದು ಚೀನಕ್ಕೆ ಎಚ್ಚರಿಸಿದರು.

‘ಗೂಗಲ್‌ ಸೂಚನೆ: ಚೀನೀ ಆ್ಯಪ್ ಗಳ ನಿಷೇಧದ ಕುರಿತು ಗೂಗಲ್‌ ಸಂಬಂಧಪಟ್ಟ ಆ್ಯಪ್‌ ಡೆವಲಪರ್‌ಗಳಿಗೆ ಅಧಿಕೃತವಾಗಿ ಸೂಚನೆ ರವಾನಿಸಿದೆ.

ಮ್ಯಾನ್ಮಾರ್‌ ಉಗ್ರರ ಜತೆ ಚೀನ ಗೆಳೆತನ
ಪಾಕ್‌, ನೇಪಾಲವನ್ನು ಚೀನವು ಭಾರತದ ಮೇಲೆ ಛೂಬಿಟ್ಟಿದ್ದಾಯ್ತು. ಈಗ ಆಗ್ನೇಯ ಏಷ್ಯಾದ ಆಪ್ತಮಿತ್ರ ಮ್ಯಾನ್ಮಾರ್‌ ಅನ್ನು ಭಾರತದ ಮೇಲೆ ಎತ್ತಿಕಟ್ಟುವ ಸಾಧ್ಯತೆ ದಟ್ಟವಾಗಿದೆ. ಮ್ಯಾನ್ಮಾರ್‌ನ ಉಗ್ರ ಸಂಘಟನೆ­ಗಳನ್ನು ಇದಕ್ಕಾಗಿಯೇ ಚೀನ ಹಲವು ವರ್ಷಗಳಿಂದ ಸಾಕಿದೆ.

ರಷ್ಯಾದ ಸರ್ಕಾರಿ ಟಿವಿ ಚಾನಲ್‌ಗೆ ಸಂದರ್ಶನ ನೀಡಿದ ಮ್ಯಾನ್ಮಾರ್‌ನ ಜನರಲ್‌ ಮಿನ್‌ ಆಂಗ್‌ ಹ್ಲೇಂಗ್‌ ಈ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅರಾಕನ್‌ ಉಗ್ರ ಪಡೆಗಳಿಂದ ಚೀನ ಜಾಗತಿಕ ಸಹಕಾರ ಬಯಸುತ್ತಿದೆ. ಇದಕ್ಕಾಗಿ ಈ ಉಗ್ರರಿಗೆ ಶಸ್ತ್ರಾಸ್ತ್ರ ಗಳನ್ನು ಖರೀದಿಸಲು ಅಪಾರ ಪ್ರಮಾಣದಲ್ಲಿ ದುಡ್ಡು ಸುರಿಯುತ್ತಿದೆ’ ಎಂದು ಹೇಳಿದ್ದಾರೆ. ಚೀನದ ಈ ಪಿತೂರಿ ಬಗ್ಗೆ ಮ್ಯಾನ್ಮಾರ್‌ ಆಕ್ಷೇಪ ತೆಗೆದಿದೆ.

ಚೀನ ನಿಲುವಿಗೆ ತಡೆ
ಕರಾಚಿಯಲ್ಲಿರುವ ಪಾಕಿಸ್ಥಾನ ಸ್ಟಾಕ್‌ಎಕ್ಸ್‌ಚೇಂಜ್‌ ಕಟ್ಟಡ ಮೇಲಿನ ದಾಳಿಗೆ ಭಾರತವೇ ಕಾರಣ ಎಂಬ ನಿರ್ಣಯ ಅಂಗೀಕರಿಸುವ ಬಗ್ಗೆ ಚೀನ ಕಿತಾಪತಿ ನಡೆಸಿತ್ತು. ಈ ಬಗ್ಗೆ ಸಿದ್ಧಪಡಿಸಲಾಗಿರುವ ನಿರ್ಣಯಕ್ಕೆ ಅಮೆರಿಕ ಮತ್ತು ಜರ್ಮನಿ ತಡೆಯೊಡ್ಡಿವೆ. ಮಂಗಳವಾರ ಈ ಘಟನೆ ನಡೆದಿದೆ. ಪಾಕಿಸ್ಥಾನ ಸರಕಾರ ಘಟನೆಗೆ ಭಾರತವೇ ಕಾರಣ ಎಂದು ದೂರಿತ್ತು. ಅದನ್ನು ಆಧರಿಸಿ ಚೀನ ವಿಶ್ವಸಂಸ್ಥೆಯಲ್ಲಿ ಭಾರತದ ವರ್ಚಸ್ಸಿಗೆ ಚ್ಯುತಿ ತರುವ ಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ.

ಅಧಿಕಾರಿಗಳ ಹೆಚ್ಚಳ: ಕಠ್ಮಂಡುವಿನಲ್ಲಿರುವ ಚೀನ ರಾಯಭಾರ ಕಚೇರಿಯಲ್ಲಿ ಬೇಹುಗಾರರ ಸಂಖ್ಯೆ ಹೆಚ್ಚಿಸಿದೆ. ಈ ಮೂಲಕ ನೇಪಾಲದಲ್ಲಿ ಪ್ರಭಾವ ಹೆಚ್ಚಿಸುವ ಪ್ರಯತ್ನ ಮಾಡಿದೆ. ವೈದ್ಯರ ರೂಪದಲ್ಲಿ ಅವರು ನೇಪಾಲದಲ್ಲಿ ಭಾರತ ವಿರೋಧಿ ಧೋರಣೆ ಬೆಳೆಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಭಾರತ ವಿರೋಧಿ ಹೇಳಿಕೆಯಿಂದ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿ ರುವ ಪ್ರಧಾನಿ ಕೆ.ಪಿ.ಓಲಿ ಸಂಸತ್‌ ಅಧಿವೇಶನ ಮುಂದೂಡುವ ಬಗ್ಗೆ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿಯ ಒಪ್ಪಿಗೆ ಪಡೆದಿದ್ದಾರೆ.

ಭಾರತದಲ್ಲಿ ಚೀನೀ ಮಾಧ್ಯಮ ನಿರ್ಬಂಧಿಸಿ: ಐಎನ್‌ಎಸ್‌ ಒತ್ತಾಯ
ಚೀನದಲ್ಲಿ ಭಾರತದ ಸುದ್ದಿಪತ್ರಿಕೆಗಳ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತದಲ್ಲೂ ಚೀನೀ ಸುದ್ದಿವಾಹಿನಿ, ಪತ್ರಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ದಿ ಇಂಡಿಯನ್‌ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್‌) ಕೇಂದ್ರ ಸರಕಾರಕ್ಕೆ ಒತ್ತಾಯಿಸಿದೆ. ಭಾರತೀಯ ಮಾಧ್ಯಮ ಸಂಸ್ಥೆಗಳಲ್ಲಿ ಚೀನ ಹೂಡಿಕೆ ಮಾಡಿದ್ದರೆ, ಕೂಡಲೇ ಅಂಥ ಚೀನೀ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದೆ.

ಮಾಧ್ಯಮಗಳು ಬೇಜವಾಬ್ದಾರಿ­ಯಿಂದ ಈ ವರದಿ ಮಾಡಿವೆ. ಸ್ಕಾರ್ಡು ವಾಯುನೆಲೆಯನ್ನು ಚೀನ ಬಳಸುತ್ತಿದೆ ಎನ್ನುವ ಸುದ್ದಿ ಕೂಡ ಸುಳ್ಳು. ಪಾಕಿಸ್ಥಾನ ಭಾರತದ ಗಡಿಯಲ್ಲಿ ಸೇನೆ ನಿಯೋಜಿಸಿ ಯುದ್ಧಕ್ಕೆ ಪ್ರಚೋದನೆ ನೀಡುತ್ತಿಲ್ಲ. ಪಾಕಿಸ್ಥಾನದಲ್ಲಿ ಚೀನ ಸೈನ್ಯದ ಉಪಸ್ಥಿತಿ­ಯನ್ನು ಕೂಡ ನಾವು ನಿರಾಕರಿಸುತ್ತೇವೆ
– ಮೇ.ಜ. ಬಾಬರ್‌ ಇಫ್ತಿಖಾರ್‌, ಪಾಕ್‌ ಸೇನೆಯ ಅಧಿಕಾರಿ

ಟಾಪ್ ನ್ಯೂಸ್

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.