ಇಂಡಿಯನ್ ಬ್ಯಾಂಕ್ ಸಿಎಂಡಿ ಪದ್ಮಜಾ ಚುಂದೂರು
Team Udayavani, Sep 26, 2018, 11:36 AM IST
ಚೆನ್ನೈ: ಸಾರ್ವಜನಿಕ ಕ್ಷೇತ್ರದ ಇಂಡಿಯನ್ ಬ್ಯಾಂಕ್ ನೂತನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ಪದ್ಮಜಾ ಚುಂದೂರು ಅವರು ಸೆ.21 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಮುಂಬೈನ ಎಸ್ಬಿಐ ಕಾರ್ಪೋರೆಟ್ ಸೆಂಟರ್ನಲ್ಲಿ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ (ಡಿಎಂಡಿ-ಜಾಗತಿಕ ಮಾರುಕಟ್ಟೆ ಮತ್ತು ಡಿಜಿಟಲ್ ಬ್ಯಾಂಕಿಂಗ್)ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪದ್ಮಜಾ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯ ಪದವಿ ಪಡೆದಿದ್ದಾರೆ.
1984ರಲ್ಲಿ ಎಸ್ಬಿಐ ಅಧಿಕಾರಿಯಾಗಿ ಸೇವೆಗೆ ಸೇರಿದ ಅವರು, ಸತತ ಮೂರು ದಶಕಗಳ ಕಾಲ ಎಸ್ಬಿಐನ ದೇಶ-ವಿದೇಶಗಳ ಎಲ್ಲ ವಿಭಾಗಗಳಲ್ಲೂ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ.
2006 ರಿಂದ 2017ರವರೆಗೆ ಯುಎಸ್ಎ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಂತರ ಕಂಟ್ರಿ ಹೆಡ್ ಆಗಿ ಸೇವೆ ಸಲ್ಲಿದ್ದಾರೆ. ಲಾಸ್ಏಂಜೆಲಿಸ್ ಏಜೆನ್ಸಿ (ಯುಎಸ್ಎ)ಯ ಕ್ರೆಡಿಟ್ ಆಪರೇಷನ್ಸ್ ಉಪಾಧ್ಯಕ್ಷೆಯಾಗಿ ಹಾಗೂ ಸಿಇಒ ಕೂಡ ಆಗಿದ್ದರು ಎಂದು ಬ್ಯಾಂಕ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.