ನಕ್ಷತ್ರಪುಂಜದಿಂದ ಹೊಮ್ಮಿದ ಬೆಳಕು : ಆ್ಯಸ್ಟ್ರೋಸ್ಯಾಟ್‌ನಿಂದ ಅಪರೂಪದ ಆವಿಷ್ಕಾರ

Team Udayavani, Aug 26, 2020, 7:00 AM IST

ನಕ್ಷತ್ರಪುಂಜದಿಂದ ಹೊಮ್ಮಿದ ಬೆಳಕು : ಆ್ಯಸ್ಟ್ರೋಸ್ಯಾಟ್‌ನಿಂದ ಅಪರೂಪದ ಆವಿಷ್ಕಾರ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆ್ಯಸ್ಟ್ರೋಸ್ಯಾಟ್‌, ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ತಾರಾಪುಂಜವೊಂದರಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಪತ್ತೆಹಚ್ಚಿದೆ. ಈ ಮೂಲಕ ಚೆನ್ನೈಯ ಇಂಟರ್‌-ಯುನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರಾನಮಿ ಆ್ಯಂಡ್‌ ಆ್ಯಸ್ಟ್ರೋಫಿಸಿಕ್ಸ್‌ (ಐಯುಸಿಎಎ) ಹೊಸ ಮೈಲುಗಲ್ಲು ಸಾಧಿಸಿದೆ.

ಬೆಳಕಿನ ಪುಂಜ
ಎಯುಡಿಎಫ್ಎಸ್‌01 ಎಂಬ ನಕ್ಷತ್ರಪುಂಜದಿಂದ ಭಾರೀ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಈ ಉಪಗ್ರಹ ಪತ್ತೆಹಚ್ಚಿದೆ. ಈ ನಕ್ಷತ್ರಪುಂಜವು ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಐಯುಸಿಎಎ ಸಂಸ್ಥೆಯ ಸಹಾಯಕ ಪ್ರೊಫೆಸರ್‌ ಡಾ| ಕನಕ್‌ ಸಾಹಾ ನೇತೃತ್ವದ ತಂಡವು ಈ ಸಾಧನೆ ಮಾಡಿದ್ದು, ತಂಡದಲ್ಲಿ ಭಾರತ, ಫ್ರಾನ್ಸ್‌, ಸ್ವಿಜರ್ಲೆಂಡ್‌, ಯುಎಸ್‌ಎ, ಜಪಾನ್‌ ಮತ್ತು ನೆದರ್ಲೆಂಡ್‌ನ‌ ವಿಜ್ಞಾನಿಗಳಿದ್ದಾರೆ.

2 ವರ್ಷ ಬೇಕಾಯಿತು
2016ರ ಅಕ್ಟೋಬರ್‌ ತಿಂಗಳಲ್ಲೇ ವಿಜ್ಞಾನಿಗಳ ತಂಡವು ಇದನ್ನು ಪತ್ತೆ ಹಚ್ಚಿತಾದರೂ ಈ ಕಿರಣಗಳು ಹೊರಬರುತ್ತಿರುವುದು ಅದೇ ನಕ್ಷತ್ರಪುಂಜದಿಂದ ಎಂಬುದನ್ನು ಸಾಬೀತುಪಡಿಸಲು 2 ವರ್ಷಗಳು ಹಿಡಿದವು. ಭೂಮಿಯ ವಾತಾವರಣವು ಅತಿನೇರಳೆ ವಿಕಿರಣಗಳನ್ನು ಹೀರಿಕೊಳ್ಳುವ ಕಾರಣ, ಬಾಹ್ಯಾಕಾಶದಿಂದಲೇ ಅದನ್ನು ಅವಲೋಕಿಸುವ ಅಗತ್ಯವಿತ್ತು. ಅಲ್ಲದೆ, ಈ ಹಿಂದೆ ನಾಸಾದ ಹಬಲ್‌ ಟೆಲಿಸ್ಕೋಪ್‌ ಕೂಡ ಇದೇ ತಾರಾಪುಂಜದಿಂದ ವಿಕಿರಣ ಹೊರಸೂಸುತ್ತದೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿ, ವಿಫ‌ಲವಾಗಿತ್ತು.
ಹೀಗಾಗಿ, ಆ್ಯಸ್ಟ್ರೋಸ್ಯಾಟ್‌ ಇಂಥದ್ದೊಂದು ಸಾಧನೆ ಮಾಡಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ತಗಲಿತು ಎಂದು ಸಾಹಾ ಹೇಳಿದ್ದಾರೆ.

– ಆ್ಯಸ್ಟ್ರೋಸ್ಯಾಟ್‌ ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹ

– ಇದರಲ್ಲಿ 5 ವಿಶಿಷ್ಟವಾದ ಎಕ್ಸ್‌ರೇ ಮತ್ತು ಅಲ್ಟ್ರಾವಯಲೆಟ್‌ ದೂರದರ್ಶಕಗಳಿವೆ

– ತಾರಾಪುಂಜದಿಂದ ಹೊರಸೂಸುವ ಅತಿನೇರಳೆ ಕಿರಣಗಳನ್ನು ಇದು ಪತ್ತೆಹಚ್ಚಿದೆ

– ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಈ ನಕ್ಷತ್ರಪುಂಜ

– 2016ರ ಅಕ್ಟೋಬರ್‌ನಲ್ಲಿ ನಡೆದಿತ್ತು ಬೆಳವಣಿಗೆ. 28 ಗಂಟೆಗಳಿಗೂ ಹೆಚ್ಚು ಕಾಲ ಅತಿನೇರಳೆ ಕಿರಣ ಹೊರಸೂಸುತ್ತಿದ್ದ ತಾರಾಪುಂಜ.

ಈ ಬ್ರಹ್ಮಾಂಡದ ಕಗ್ಗತ್ತಲ ಯುಗ ಅಂತ್ಯವಾದದ್ದು ಯಾವಾಗ ಮತ್ತು ಅಲ್ಲಿ ಬೆಳಕಿನ ಕಿರಣ ಮೂಡಿದ್ದು ಯಾವಾಗ ಎಂಬುದರ ಸುಳಿವು ನೀಡುವಲ್ಲಿ ಈ ಆವಿಷ್ಕಾರವು ನೆರವಾಗಲಿದೆ. ಬೆಳಕಿನ ಆರಂಭಿಕ ಮೂಲವನ್ನು ಪತ್ತೆಹಚ್ಚುವುದು ಕಷ್ಟವಾದರೂ ಇಂಥದ್ದೊಂದು ಮಹತ್ವದ ಸಾಧನೆ ಮಾಡಿದವರನ್ನು ಅಭಿನಂದಿಸುತ್ತೇನೆ.
– ಡಾ| ಸೋಮಕ್‌ ರಾಯ್‌ ಚೌಧರಿ, ಐಯುಸಿಎಎ ನಿರ್ದೇಶಕ

ಟಾಪ್ ನ್ಯೂಸ್

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.