ಉಗ್ರರಿಂದ ಹತ್ಯೆಯಾದ ಸಹೋದರನಿಗಾಗಿ ಕುಟುಂಬದ ಇಬ್ಬರು ಸೇನೆಗೆ
Team Udayavani, Jul 24, 2019, 6:39 PM IST
ಮಣಿಪಾಲ: ದೇಶದ ಕುರಿತು ಸೇನೆಯ ಕುರಿತು ಎಲ್ಲರೂ ಅಭಿಮಾನವನ್ನು ಹೊಂದಿದವರೇ. ಆದರೆ ಈ ಅತ್ಯುನ್ನತ ಸೇವೆಗೆ ನಮ್ಮಲ್ಲಿ ಕೆಲವೇ ಕುಟುಂಬಗಳು ಅರ್ಪಿಸಿಕೊಂಡಿದೆ. ಗಡಿಯಲ್ಲಿನ ಪ್ರಕ್ಷುಬ್ದ ಪರಿಸ್ಥಿತಿಗಳನ್ನು ಗಮನಿಸಿ ಸೇನೆಯತ್ತ ಮುಖ ಮಾಡುವ ಜನರು ಸ್ವಲ್ಪ ಆತಂಕಕ್ಕೆ ಒಳಗಾಗಿದ್ದರೂ ಆಶ್ಚರ್ಯ ಇಲ್ಲ. ಆದರೆ ನೈಜ ದೇಶ ಪ್ರೇಮದ ಎದುರು ಯಾವುದೇ ಜೀವ ಭಯ ದೊಡ್ಡ ಲೆಕ್ಕವೇ ಅಲ್ಲ. ನನ್ನ ಒಬ್ಬ ಮಗ ಭಯೋತ್ಪಾದಕರ ಕೈಯಿಂದ ಹುತಾತ್ಮನಾದರೆ ಏನಂತೆ, ನನ್ನ ಎರಡು ಮಕ್ಕಳನ್ನೂ ಸೇನೆಗೆ ಸೇರಿಸುತ್ತೇನೆ ಎಂದು ಹೇಳಿದ ಅನೇಕ ಕುಟುಂಬಗಳು ನಮ್ಮಲ್ಲಿದೆ.
ಫೆಬ್ರವರಿ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧ ಔರಂಗಜೇಬ್ ಉಗ್ರರ ನಡುವಿನ ಕಾಳಗದಲ್ಲಿ ವೀರ ಮರಣವನ್ನಪ್ಪಿದ್ದರು. ಗಡಿಯಲ್ಲಿ ಸೇನೆ ನಡೆಸಿದ “ಅಪರೇಶನ್ ಆಲ್ ಔಟ್’ನ ಸಂದರ್ಭ ಔರಂಗಜೇಬ್ ಅವರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿತ್ತು. ಇವರ ತಂದೆ ಮೊಹಮ್ಮದ್ ಹನೀಫ್ ಅವರೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವನ್ನು ಹೊಂದಿದ್ದರು.
ಇಷ್ಟಕ್ಕೆ ಸುಮ್ಮನಾಗದ ಕುಟುಂಬ ಇದೀಗ ಔರಂಗಜೇಬ್‌ನ 2 ಮಂದಿ ಸಹೋದರರಾದ ತಾರಿಖ್ (23) ಮತ್ತು ಶಾಬೀರ್ (21) ಅವರನ್ನು ಸೇನೆಗೆ ನೀಡಿದೆ. ತಮ್ಮ ಸಹೋದರನನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಇಬ್ಬರು ಸಹೋದರರನ್ನು ಕುಟುಂಬ ದೇಶಕ್ಕೆ ನೀಡಿದೆ. ಪೂಂಚ್‌ನ ಸೂರನ್‌ಕೋಟೆಯಲ್ಲಿ ನಡೆದ ಸೇನೆಯ ನೇಮಕಾತಿಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಈ ಮೂಲಕ ದೇಶದ ಮೇಲಿನ ಅಭಿಮಾನ ಮತ್ತು ರಾಷ್ಟ್ರ ಭಕ್ತಿಗಾಗಿ ತಮ್ಮ ಕುಟುಂಬವನ್ನು ಅರ್ಪಿಸಿಕೊಂಡಿದೆ.
ಮಾಜಿ ಸೈನಿಕರಾಗಿರುವ ಹುತಾತ್ಮ ಔರಂಗಜೇಬ್ ಅವರ ತಂದೆ ಮೊಹಮ್ಮದ್ ಹನೀಫ್ ಸಲಾನಿ 3 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.