ನೌಕಾಪಡೆಗೆ 6 ಅಣು ಜಲಾಂತರ್ಗಾಮಿ
ರಕ್ಷಣಾ ವ್ಯವಹಾರಗಳ ಮೇಲುಸ್ತುವಾರಿಯ ಸ್ಥಾಯೀ ಸಮಿತಿಯ ವರದಿಯಲ್ಲಿ ಉಲ್ಲೇಖ
Team Udayavani, Dec 30, 2019, 6:30 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸಮುದ್ರದಾಳದ ದಾಳಿಗಳನ್ನು ಸಮರ್ಥವಾಗಿ ಎದುರಿಸುವಂತೆ ಭಾರತೀಯ ನೌಕಾಪಡೆಯನ್ನು ಸಜ್ಜುಗೊಳಿಸುವ ಉದ್ದೇಶದಿಂದ 6 ಪರಮಾಣು ಹಾಗೂ 18 ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು (ಒಟ್ಟು 24) ತಯಾರಿಸಲು ನೌಕಾಪಡೆಗೆ ಅನುಮತಿ ನೀಡುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.
ರಕ್ಷಣಾ ವ್ಯವಹಾರಗಳ ಮೇಲುಸ್ತುವಾರಿಯ ಸ್ಥಾಯಿ ಸಮಿತಿಯು ಕೇಂದ್ರಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಈ ವಿಚಾರ ತಿಳಿಸಿದೆ. ಈ ಎಲ್ಲ ಜಲಾಂತರ್ಗಾಮಿಗಳನ್ನೂ ಭಾರತೀಯ ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಸಂಪೂರ್ಣ ದೇಶೀಯವಾಗಿ ಉತ್ಪಾದಿಸಲು ತೀರ್ಮಾ ನಿಸಲಾಗಿದೆ.
ಸ್ಥಾಯೀ ಸಮಿತಿಯು ಕಳೆದ 15 ವರ್ಷಗಳಲ್ಲಿ ಭಾರತೀಯ ನೌಕಾಪಡೆಗೆ ಕೇವಲ ಎರಡು ಜಲಾಂತರ್ಗಾಮಿ ನೌಕೆಗಳನ್ನು (ಐಎನ್‌ಎಸ್ ಕಲವರಿ, ಐಎನ್‌ಎಸ್ ಖಂಡೇರಿ) ನಿರ್ಮಿಸಲು ಅನುಮತಿ ನೀಡಿತ್ತು. ಇದೇ ಮೊದಲ ಬಾರಿಗೆ 24 ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಹಸುರು ನಿಶಾನೆ ನೀಡಿದೆ.
ನೌಕಾಪಡೆ ಹೆಚ್ಚೆಚ್ಚು ಬಲಿಷ್ಠ
ಸದ್ಯಕ್ಕೆ ಭಾರತೀಯ ನೌಕಾಪಡೆಯಲ್ಲಿ 15 ಸಾಂಪ್ರದಾಯಿಕ ಹಾಗೂ ಒಂದು ಪರಮಾಣು ಜಲಾಂತರ್ಗಾಮಿ (ಐಎನ್‌ಎಸ್ ಚಕ್ರ) ಇವೆ. ಜಲಾಂತರ್ಗಾಮಿಯ ಸೇವೆಯನ್ನು ರಷ್ಯಾದಿಂದ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದೆ. ಈ ಸಮೂಹಕ್ಕೆ, ಹೊಸದಾಗಿ 18 ಸಾಂಪ್ರದಾಯಿಕ, 6 ಪರಮಾಣು ಜಲಾಂತರ್ಗಾಮಿಗಳು ಸೇರ್ಪಡೆಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.