Indian Navy; ಕಡಲ್ಗಳ್ಳರಿಂದ ದಾಳಿಗೊಳಗಾದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ನೌಕಾಪಡೆ
Team Udayavani, Mar 30, 2024, 9:18 AM IST
ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಇರಾನ್ ಹಡಗಿನ ಮೇಲೆ ನಡೆದ ಕಡಲ್ಗಳ್ಳರ ದಾಳಿಯನ್ನು ಭಾರತೀಯ ನೌಕಾಪಡೆಯು ಯಶಸ್ವಿಯಾಗಿ ಎದುರಿಸಿದ್ದು, ಹಡಗಿನಲ್ಲಿದ್ದ 23 ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯು 12 ಗಂಟೆಗಳ ಕಾಲ ನಡೆದಿದೆ ಎಂದು ವರದಿಯಾಗಿದೆ.
“ಮಾರ್ಚ್ 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ‘ಅಲ್-ಕಂಬಾರ್ 786’ ನಲ್ಲಿ ಸಂಭಾವ್ಯ ಕಡಲ್ಗಳ್ಳತನ ಘಟನೆಯ ಮಾಹಿತಿಯ ಮೇಲೆ, ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಎರಡು ಭಾರತೀಯ ನೌಕಾಪಡೆಯ ಹಡಗುಗಳನ್ನು ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ತಡೆಯಲು ತಿರುಗಿಸಲಾಯಿತು” ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
“12 ಗಂಟೆಗಳಿಗೂ ಹೆಚ್ಚು ಕಾಲ ತೀವ್ರವಾದ ಬಲವಂತದ ಯುದ್ಧತಂತ್ರದ ಕ್ರಮಗಳ ನಂತರ, ಅಪಹರಿಸಲಾದ ಎಫ್‌ವಿಯಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಮಾಡಲಾಯಿತು. 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ” ಎಂದು ನೌಕಾಪಡೆ ಹೇಳಿದೆ.
#IndianNavy Responds to Piracy Attack in the #ArabianSea.
Inputs received on a potential piracy incident onboard Iranian Fishing Vessel ‘Al-Kambar’ late evening on #28Mar 24, approx 90 nm South West of Socotra.
Two Indian Naval ships, mission deployed in the #ArabianSea for… pic.twitter.com/PdEZiCAu3t— SpokespersonNavy (@indiannavy) March 29, 2024
ನಂತರ ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ಶುಚಿಗೊಳಿಸಿದವು. ಅದರ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ನಂತರ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಕ್ಕೆ ಅನುಮತಿ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಅಲ್-ಕಂಬಾರ್ 786’ ನಲ್ಲಿ ಅಪಾಯದ ಸೂಚನೆ ಅರಿತ ಐಎನ್ಎಸ್ ಸುಮೇಧ ಮತ್ತು ಐಎನ್ಎಸ್ ತ್ರಿಶೂಲ್ ಅದರತ್ತ ಧಾವಿಸಿ ಕಾರ್ಯಾಚರಣೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.