![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 11, 2023, 7:15 AM IST
ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತವು ಶೀಘ್ರದಲ್ಲೇ ಫ್ರಾನ್ಸ್‌ನಿಂದ 26 ರಫೇಲ್ ಯುದ್ಧ ವಿಮಾನಗಳು ಹಾಗೂ ಮೂರು ಹೆಚ್ಚುವರಿ ಸ್ಕಾಪೀನ್ ದರ್ಜೆಯ ಜಲಾಂತರ್ಗಾಮಿಗಳನ್ನು ಖರೀದಿಸಲಿದೆ. ಜು. 14ರಿಂದ 16ರ ವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್ ಪ್ರವಾಸ ನಡೆಸಲಿದ್ದು, ಆಗ ಈ ಕುರಿತ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ.
ದೇಶದ ರಕ್ಷಣ ಪಡೆಗಳು ಈಗಾಗಲೇ ರಫೇಲ್ ಮತ್ತು ಜಲಾಂತರ್ಗಾಮಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ರಕ್ಷಣ ಸಚಿವಾಲಯಕ್ಕೆ ಸಲ್ಲಿಸಿವೆ. ಅದಕ್ಕೆ ರಕ್ಷಣ ಖರೀದಿ ಮಂಡಳಿ ಸೋಮವಾರ ಒಪ್ಪಿಗೆಯನ್ನೂ ನೀಡಿದೆ. ಭಾರತ-ಫ್ರಾನ್ಸ್ ನಡುವಿನ ಈ ಒಪ್ಪಂದಕ್ಕೆ ಸಹಿ ಬಿದ್ದರೆ ನೌಕಾಪಡೆಗೆ 22 ಏಕ ಆಸನದ ರಫೇಲ್ ನೌಕಾ ವಿಮಾನಗಳ ಜತೆಗೆ ನಾಲ್ಕು ತರಬೇತಿ ವಿಮಾನಗಳು ದೊರೆಯಲಿವೆ.
ಅಲ್ಲದೆ ಪ್ರಾಜೆಕ್ಟ್ 75ನಡಿ ಮೂರು ಸ್ಕಾಪೀìನ್ ದರ್ಜೆಯ ಸಬ್‌ಮರೀನ್‌ಗಳನ್ನೂ ನೌಕಾಪಡೆ ಪಡೆಯಲಿದೆ. ಈ ಖರೀದಿ ವ್ಯವಹಾರದ ಒಟ್ಟು ಮೌಲ್ಯ 90 ಸಾವಿರ ಕೋಟಿ ರೂ.ಗಳಾಗಿದ್ದು, ಒಪ್ಪಂದ ಮಾತುಕತೆ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.