ಪೆಟ್ರೋಲ್ ಹಾಕಿಸಲೂ ಬಂತು ಗಿಫ್ಟ್ ವೋಚರ್!
ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಿಂದ ವಿನೂತನ ಕೊಡುಗೆ
Team Udayavani, Nov 30, 2021, 6:30 AM IST
ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಉಡುಗೊರೆಯ ರೂಪದಲ್ಲಿ ನೀಡಬಲ್ಲ “ಒನ್ ಫಾರ್ ಯು’ ಎಂಬ ಇ-ವೋಚರ್‌ಗಳನ್ನು ಬಿಡುಗಡೆ ಮಾಡಿದೆ. ಈ ಕುರಿತಂತೆ ಟ್ವಿಟರ್‌ನಲ್ಲಿ ಸಂಸ್ಥೆ ಪ್ರಕಟಣೆ ನೀಡಿದ್ದು, ಮದುವೆ ಮುಂತಾದ ಸಮಾರಂಭಗಳಲ್ಲಿ ಖಂಡಿತವಾಗಿಯೂ ಉಪಯೋಗಕ್ಕೆ ಬರುವಂಥ ಉಡುಗೊರೆಯಿದು ಎಂದು ಬಣ್ಣಿಸಿದೆ.
ಏನಿದು “ಒನ್ ಫಾರ್ ಯು’?
ಇದೊಂದು ಇಲೆಕ್ಟ್ರಿಕ್ ವೋಚರ್ (ಇ-ವೋಚರ್) ಆಗಿದ್ದು, ಕಾರ್ಡ್ ರೂಪದಲ್ಲಿ ಇರುತ್ತದೆ. ಇದನ್ನು ಆನ್‌ಲೈನ್ ಮೂಲಕ ಖರೀದಿಸಬಹುದು. ಇದರ ಮುಖಬೆಲೆ ಕನಿಷ್ಠ 500 ರೂ.ಗಳಿಂದ ಗರಿಷ್ಠ 10,000 ರೂ.ವರೆಗೆ ಇರುತ್ತದೆ.
ಇದನ್ನೂ ಓದಿ:ಸಂಸದೆಯರೊಂದಿಗಿನ ಟ್ವೀಟ್ ವೈರಲ್: ಶಶಿ ತರೂರ್ ಕ್ಷಮೆ ಕೇಳಿದ್ದೇಕೆ ?
ಟ್ವಿಟರ್‌ನಲ್ಲಿ ಟೀಕೆಗಳ ಸುರಿಮಳೆ
ಐಒಸಿಯಿಂದ ಟ್ವಿಟರ್‌ನಲ್ಲಿ ಇ-ವೋಚರ್ ಬಗ್ಗೆ ಪ್ರಕಟಣೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರಲಾರಂಭಿಸಿದೆ. ಅಲೀಮ್ ಎಂಬುವರು, ಇಲ್ಲಿ ಜನಸಾಮಾನ್ಯರು ತೈಲ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ ನೀವು (ಐಒಸಿ) ಇ-ವೋಚರ್ ಹೆಸರಿನಲ್ಲಿ ಮಜಾ ಮಾಡುತ್ತಿದ್ದೀರಿ ಅಲ್ಲವೇ ಎಂದು ಕೇಳಿದ್ದಾರೆ. ಕಾರ್ತಿಕೇಯನ್ ಎಂಬವರು, ತೈಲಗಳ ಮೇಲೆ ಸಿಕ್ಕಾಪಟ್ಟೆ ತೆರಿಗೆ ಹೇರಿರುವಂಥ ಇಂಥ ಸಂದರ್ಭದಲ್ಲಿ ಈ ವೋಚರ್ ಅವಶ್ಯಕತೆಯಿತ್ತಾ ಎಂದಿದ್ದಾರೆ. ವನಿಕಾ ಅರೋರಾ ಎಂಬುವರು ಟ್ವೀಟ್ ಮಾಡಿ, ಚಿನ್ನದ ದರ ಕೊಟ್ಟು ಪೆಟ್ರೋಲ್, ಡೀಸೆಲ್ ಇ-ವೋಚರ್ ಕೊಳ್ಳುವಂತಾಗಿದೆ ಎಂದು ಲೇವಡಿ ಮಾಡಿದ್ದಾರೆ. ಹೀಗೆ, ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.