ರೈಲಲ್ಲಿಯೂ ‘ಪ್ರಯಾಣ ನಿಷೇಧ ಪಟ್ಟಿ’ ಜಾರಿ?
Team Udayavani, Jan 31, 2020, 8:08 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಅನುಚಿತವಾಗಿ ವರ್ತಿಸುವವರನ್ನು 6 ತಿಂಗಳ ಹಾರಾಟ ನಿಷೇಧ ಪಟ್ಟಿಗೆ ಸೇರಿಸುವಂತೆಯೇ, ರೈಲು ಪ್ರಯಾಣಿಕರ ಮೇಲೂ ಇದೇ ಮಾದರಿಯ ಕ್ರಮವನ್ನು ಅನ್ವಯಗೊಳಿಸುವ ಬಗ್ಗೆ ಚಿಂತನೆಗಳು ನಡೆದಿವೆ.
ತಮ್ಮ ವರ್ತನೆಯಿಂದ ಸಹ ಪ್ರಯಾಣಿಕರಿಗೂ ಭೀತಿಯ ವಾತಾವರಣ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಮೂಲಕ ಅಂಥ ಕೃತ್ಯವೆಸಗುವವರಿಗೆ ಎಚ್ಚರಿಕೆಯ ಸಂದೇಶ ಮತ್ತು ನಿರ್ಭೀತ ವಾತಾವರಣದಲ್ಲಿ ಪ್ರಯಾಣ ಮಾಡುವ ವಾತಾವರಣ ನಿರ್ಮಿಸುವುದು ರೈಲ್ವೇ ಇಲಾಖೆಯ ಇರಾದೆ.
ವಿಮಾನದಲ್ಲಿ ಹಾರಾಟ ನಿಷೇಧ ಪಟ್ಟಿ ಇರುವಂತೆ ಭಾರತೀಯ ರೈಲ್ವೇಯಲ್ಲಿಯೂ ಅಂಥ ಪ್ರಯಾಣಿಕರ ಪಟ್ಟಿ ಸಿದ್ಧಗೊಳಿಸುವ ಬಗ್ಗೆ ಯೋಚನೆಗಳು ಇವೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಪತ್ರಕರ್ತ ಅರ್ನಾಬ್ ಗೋಸ್ವಾಮಿ ಜತೆಗೆ ಹಾಸ್ಯ ಭಾಷಣಕಾರ ಕುನಾಲ್ ಕಮ್ರಾ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರತಿಯಾಗಿ ವಿಮಾನ ಯಾನ ಸಂಸ್ಥೆಗಳಿಂದ ಹಾರಾಟ ನಿಷೇಧಕ್ಕೆ ಒಳಗಾದ ಬಳಿಕ ರೈಲ್ವೇಯಲ್ಲಿಯೂ ಅದೇ ಮಾದರಿ ನಿಯಮ ಜಾರಿಗೆ ಸಲಹೆಗಳು ಬಂದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.