Reduce Speed: ವಂದೇ ಭಾರತ್ ಸೇರಿ 4 ರೈಲುಗಳ ವೇಗ ಕಡಿತ: ರೈಲ್ವೇ ಇಲಾಖೆ ನಿರ್ಧಾರ
Team Udayavani, Jun 27, 2024, 9:43 AM IST
ಹೊಸದಿಲ್ಲಿ: ವಂದೇ ಭಾರತ್, ಗತಿಮಾನ್ ಎಕ್ಸಪ್ರಸ್ ಸೇರಿದಂತೆ ದೇಶದ 4 ಅತೀ ವೇಗದ ರೈಲುಗಳ ವೇಗವನ್ನು ಕಡಿಮೆಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಪ್ರತೀ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಈ ರೈಲುಗಳ ವೇಗ ಈಗ 130ಕ್ಕೆ ಇಳಿಕೆಯಾಗಿದೆ.
ಕಾಂಚನಗಂಗಾ ಎಕ್ಸಪ್ರಸ್ ರೈಲು ದುರಂತದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ದಿಲ್ಲಿ-ಝಾನ್ಸಿ ರೈಲು ಮಾರ್ಗದಲ್ಲಿ ರೈಲಿನ ಸುರಕ್ಷತೆ ಹಾಗೂ ಎಚ್ಚರಿಕೆ ನೀಡುವ ವ್ಯವಸ್ಥೆ (ಟಿಪಿಡಬುÉ ಎಸ್) ವೈಫಲ್ಯಗೊಂಡ ಕಾರಣ ಈ ರೈಲುಗಳ ವೇಗ ಕಡಿತಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಸದ್ಯ ದಿಲ್ಲಿ-ಝಾನ್ಸಿ ಗತಿಮಾನ್ ಎಕ್ಸ್ ಪ್ರಸ್, ದಿಲ್ಲಿ-ಖಜುರಾಹೋ ವಂದೇ ಭಾರತ್ ಎಕ್ಸಪ್ರಸ್, ದಿಲ್ಲಿ-ರಾಣಿ ಕಮಲಾಪತಿ ವಂದೇ ಭಾರತ್, ಶತಾಬ್ಧಿ ಎಕ್ಸ್‌ಪ್ರೆಸ್ ರೈಲುಗಳ ವೇಗ ಕಡಿತವಾಗಿದೆ. ಇಲಾಖೆಯ ಈ ನಿರ್ಧಾರದಿಂದ ರೈಲುಗಳ ಪಯಣದ ಅವಧಿ 25-30 ನಿಮಿಷ ಹೆಚ್ಚಾಗಲಿದ್ದು, ಇದರಿಂದ ಕನಿಷ್ಠ 10 ಸೂಪರ್‌ಫಾಸ್ಟ್ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿದೆ.
ರೈಲ್ವೇ ಇಲಾಖೆಯ ಈ ನಿರ್ಧಾರ ಪರಿಣಾಮಕಾರಿಯಾಗುವುದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.
ಇದನ್ನೂ ಓದಿ: GPS ಆಧರಿತ ಟೋಲ್: 10000 ಕೋಟಿ ಲಾಭ…? ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.