ಅಮರನಾಥ ಯಾತ್ರೆಗೆ ಅಡ್ಡಿಪಡಿಸುವ ಉಗ್ರರ ಯತ್ನ ವಿಫಲಗೊಳಿಸಿದ ಯೋಧರು
Team Udayavani, May 6, 2022, 7:20 AM IST
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾ ರಾಷ್ಟ್ರೀಯ ಗಡಿ ಸಮೀಪದಲ್ಲಿ ಪಾಕಿಸ್ಥಾನಿ ಉಗ್ರರು ನಿರ್ಮಿಸಿರುವ ಸುರಂಗವನ್ನು ಬಿಎಸ್‌ಎಫ್ ಗುರುವಾರ ಪತ್ತೆಹಚ್ಚಿದೆ. ಈ ಮೂಲಕ ಮುಂಬರುವ ಅಮರನಾಥ ಯಾತ್ರೆಗೆ ಅಡ್ಡಿಪಡಿಸುವಂಥ ಜೈಶ್-ಎ- ಮೊಹಮ್ಮದ್ ಉಗ್ರರ ಯೋಜನೆಯನ್ನು ಯೋಧರು ವಿಫಲಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಜಮ್ಮು ವಲಯದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಸಾಂಬಾದ ಚಕ್ ಫಕೀರಾ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲೇ 150 ಮೀ. ಉದ್ದದ ಈ ಸುರಂಗ ಪತ್ತೆಯಾಗಿದೆ. ಹೊಸದಾಗಿ ಕೊರೆದ ಸುರಂಗ ಇದಾಗಿದ್ದು, ಪಾಕಿಸ್ಥಾನದಿಂದ ಭಾರತಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಒಂದೂವರೆ ವರ್ಷಗಳಲ್ಲಿ ಪತ್ತೆಯಾದ 5ನೇ ಸುರಂಗ ಇದಾಗಿದೆ ಎಂದು ಡಿಐಜಿ ಎಸ್.ಪಿ.ಎಸ್.ಸಂಧು ಹೇಳಿದ್ದಾರೆ.
– ಸುರಂಗದ ಉದ್ದ 150 ಮೀಟರ್
– ನಿರ್ಗಮನ ದ್ವಾರದ ಅಗಲ-2 ಅಡಿ
– ನಿರ್ಗಮನದಲ್ಲಿ ಅಳವಡಿ ಸಿದ್ದ ಮರಳುಚೀಲ-21
– ಅಂತಾರಾಷ್ಟ್ರೀಯ ಗಡಿಯಿಂದಿರುವ ದೂರ -150 ಮೀ.
– ಗಡಿ ಬೇಲಿಯಿಂದ ಇರುವ ದೂರ-50 ಮೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!
Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.