101ನೇ ವಯಸ್ಸಲ್ಲೂ ಸಾಧನೆ
Team Udayavani, Oct 9, 2017, 6:00 AM IST
ಹೊಸದಿಲ್ಲಿ: ಬದುಕಿನ ಶತಮಾನದ ಹೊಸ್ತಿಲಿನಲ್ಲಿರುವ ವೃದ್ಧೆಯೊಬ್ಬರು ನ್ಯೂಜಿಲೆಂಡ್ನಲ್ಲಿ 100 ಮೀಟರ್ ಓಟದಲ್ಲಿ ಗೆದ್ದು ಜಗತ್ತನ್ನೇ ನಿಬ್ಬೆರಗಾಗಿಸಿದ್ದಲ್ಲದೆ, ಸ್ಪೇನ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವರ್ಲ್ಡ್ ಮಾಸ್ಟರ್ಸ್ ರೇಸ್ನಲ್ಲಿ ಭಾಗವಹಿ ಸಲು ತಯಾರಿ ನಡೆಸಿದ್ದಾರೆ. ಚಂಡೀಗಢದ ಮನ್ ಕೌರ್ ನ್ಯೂಜಿಲೆಂಡ್ಗೆ ತೆರಳಿ ಕಳೆದ ವರ್ಷ ನಡೆದ 100 ಮೀಟರ್ ರೇಸ್ನಲ್ಲಿ ಕೇವಲ 1 ನಿಮಿಷ 14 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.
ಭಾರತದಲ್ಲಿ ಗುರುತಿಸಲೇ ಇಲ್ಲ!: ಇಂತಹ ಸಾಧನೆಗೈದರೂ ತಾಯ್ನಾಡಿನಲ್ಲಿ ಈ ಅಜ್ಜಿಯನ್ನು ಗುರುತಿಸಿದವರ ಸಂಖ್ಯೆ ಅತ್ಯಂತ ಕಡಿಮೆ. ಆದರೆ ವಿಶ್ವದ ಇತರೆಡೆ ಆಕೆಗೆ ಭಾರೀ ಸಮ್ಮಾನವೇ ಕಾದಿತ್ತು. ನ್ಯೂಜಿಲೆಂಡ್ನಲ್ಲಿ ರನ್ನಿಂಗ್ ರೇಸ್ಗಾಗಿ ತೆರಳಿದ್ದಾಗಲೇ ಕೌರ್ ಅಲ್ಲಿ ಜನಪ್ರಿಯವಾಗಿದ್ದರು. ಅಷ್ಟೇ ಅಲ್ಲ ರೇಸ್ನಲ್ಲಿ ಗೆದ್ದಾಗ ನ್ಯೂಜಿಲೆಂಡ್ ಅಧಿಕಾರಿಗಳು ಅವರಿಗೆ ಔತಣಕೂಟ ಹಮ್ಮಿಕೊಂಡಿದ್ದರು. ಆದರೆ ಭಾರತಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಯಾರೂ ಬಂದಿರಲಿಲ್ಲ ಎಂದು ಕೌರ್ ಪುತ್ರ ಗುರುದೇವ್ ಸಿಂಗ್ ಹೇಳಿದ್ದಾರೆ.
ದಿನಕ್ಕೆ ಆರು ರೋಟಿಯೇ ಆಹಾರ: 101ನೇ ವಯಸ್ಸಿನಲ್ಲೂ ಕೌರ್ ಇಷ್ಟು ಗಟ್ಟಿ ಮುಟ್ಟಾಗಿರುವುದರ ಗುಟ್ಟು ರೋಟಿ! ದಿನಕ್ಕೆ ಆರು ರೋಟಿ ಸೇವಿಸುವ ಕೌರ್, ಇದರ ಜತೆಗೆ ಮೊಳಕೆ ಕಾಳು ಮತ್ತು ಬಾರ್ಲಿ ಸೇವಿಸುತ್ತಾರೆ. ಜತೆಗೆ ಸೋಯಾ ಹಾಲು, ಹಣ್ಣುಗಳು ಮತ್ತು ಹಣ್ಣಿನ ರಸವೇ ಆಕೆಯ ಪ್ರಮುಖ ಆಹಾರ ಎಂದು ಪುತ್ರ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.