ನೈನಿಟಾಲ್ನಲ್ಲಿ ಏಷ್ಯಾದ ಅತಿ ದೊಡ್ಡ ಲಿಕ್ವಿಡ್ ಮಿರರ್ ಟೆಲಿಸ್ಕೋಪ್
Team Udayavani, Jun 4, 2022, 6:50 AM IST
ನವದೆಹಲಿ: ಉತ್ತರಾಖಾಂಡದ ನೈನಿಟಾಲ್ನಲ್ಲಿರುವ ಪರ್ವತವೊಂದರ ತುದಿಯಲ್ಲಿ, ಭೂಮಿಯಿಂದ ಸುಮಾರು 2,450 ಮೀಟರ್ಗಳ ಎತ್ತರದಲ್ಲಿ ದೈತ್ಯ ಟೆಲಿಸ್ಕೋಪ್ ಒಂದನ್ನು ಭಾರತೀಯ ವಿಜ್ಞಾನಿಗಳು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು, ದೇಶದ ಮೊದಲ ಹಾಗೂ ಏಷ್ಯಾದಲ್ಲೇ ಅತಿ ದೊಡ್ಡ ಲಿಕ್ವಿಡ್- ಮಿರರ್ ಟೆಲಿಸ್ಕೋಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
“ಇಂಟರ್ನ್ಯಾಷನಲ್ ಲಿಕ್ವಿಡ್ ಮಿರರ್ ಟೆಲಿಸ್ಕೋಪ್’ (ಐಎಲ್ಎಂಟಿ) ಎಂದು ಕರೆಯಲ್ಪಡುವ ಈ ದೂರದರ್ಶಕ ಯಂತ್ರವನ್ನು ಬಾಹ್ಯಾಕಾಶ ತ್ಯಾಜ್ಯಗಳನ್ನು ಪತ್ತೆ ಹಚ್ಚಲು ಹಾಗೂ ವಿವಿಧ ನಕ್ಷತ್ರಪುಂಜಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನೈನಿಟಾಲ್ನಲ್ಲಿರುವ ಆರ್ಯಭಟ ವೀಕ್ಷಣಾ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ (ಏರೀಸ್) ದೇವಸ್ಥಳ ಅಬ್ಸರ್ವೇಟರಿ ಕ್ಯಾಂಪಸ್ನಲ್ಲಿ ಈ ದೂರದರ್ಶಕ ಯಂತ್ರವನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಪಾದರಸದ ತೆಳು ಹಾಳೆಯಿರುವ, 4 ಮೀಟರ್ ವ್ಯಾಸದ ತಿರುಗುವ ಕನ್ನಡಿಯಿದೆ. ಇದಕ್ಕೆ ಪಾಲಿಸ್ಟರ್ನಿಂದ ತಯಾರಿಸಿದ ಮಿಲಾರ್ ಉತ್ಪನ್ನದ ಮತ್ತೂಂದು ತೆಳು ಹಾಳೆಯನ್ನು ಹೊದಿಸಲಾಗಿದ್ದು ಇದು ಪಾದರಸದ ಹಾಳೆಗೆ ಗಾಳಿಯಿಂದ ಸುರಕ್ಷತೆ ನೀಡುತ್ತದೆ.ಈ ವರ್ಷಾಂತ್ಯದ ಹೊತ್ತಿಗೆ ಕಾರ್ಯಾರಂಭ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.